ಕಂಬಳೇಶ್ವರ ಶ್ರೀಗಳ ಜನ್ಮದಿನದ ನಿಮಿತ್ತ ಚಿತ್ತಾಪುರದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಂಬಳೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರ ಜನ್ಮದಿನದ ಅಂಗವಾಗಿ ಕ್ರೀಡಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಶ್ರೀಗಳು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಯುವಕರ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಕ್ರೀಡೆಗಳು ಅವಶ್ಯಕ ಎಂದು ಹೇಳಿದರು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಸದೃಢ ಆರೋಗ್ಯಕ್ಕೆ ಬೇಕಾದ ಕ್ರೀಡೆಗಳಲ್ಲಿ ಭಾಗವಹಿಸುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಈ ಬಾರಿ ನಮ್ಮ ಜನ್ಮದಿನದ ನಿಮಿತ್ತ ಭಕ್ತವೃಂದ ಕ್ರಿಕೆಟ್ ಪಂದ್ಯಾವಳಿ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರಬಸಯ್ಯ ಶಾಸ್ತ್ರಿ ಮಾತನಾಡಿ, ಯುವಕರಲ್ಲಿ ಕ್ರೀಡಾ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಶ್ರೀಗಳ ಹುಟ್ಟು ಹಬ್ಬದ ಅಂಗವಾಗಿ ಮೂರು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕರಬಸಯ್ಯ ಶಾಸ್ತ್ರಿ, ಭರತ, ವಸಂತ್, ಅಣ್ಣಪ್ಪ, ವಿಶ್ವರಾಧ್ಯ, ವಿಷ್ಣುವರ್ಧನ್, ರಮೇಶ್, ಶಿವಕುಮಾರ್ ಮಠಪತಿ, ವೀರೇಶ್ ಸೂಗುರು, ನರಸರೆಡ್ಡಿ, ಅಶೋಕ ಗುತ್ತೇದಾರ, ಈಶ್ವರ, ಅರುಣ, ಶ್ರೀಶೈಲ, ನಾಗು, ವಿನೋದ, ಗೌತಮ್, ರೇವಣಸಿದ್ದಪ್ಪ ಸಾಹುಕಾರ ಸೇರಿದಂತೆ ಇತರರು ಇದ್ದರು.