ಕಣ್ಮನ ಸೆಳೆದ ಬಂಜಾರ ಸಮಾಜದ ಯುವತಿಯರ ನೃತ್ಯ, ಸ್ಟೇಷನ್ ತಾಂಡಾದ ಯುವತಿಯರಿಂದ ದೀಪಾವಳಿಯ ಸಂಭ್ರಮ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ದೀಪಾವಳಿ ಹಬ್ಬದ ನಿಮಿತ್ತ ಪಟ್ಬಣದ ಸ್ಟೇಷನ್ ತಾಂಡಾದ ಯುವತಿಯರು ಪಟ್ಟಣದ ಹೊರವಲಯದಲ್ಲಿ ಇರುವ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ದರ್ಶನ ಪಡೆದು ನಾಗಾವಿ ವಿಶ್ವವಿದ್ಯಾಲಯದ ಆವರಣದಲ್ಲಿ ಕುಣಿದು ಕುಪ್ಪಳಿಸಿ ಹಬ್ಬವನ್ನು ಸಂಭ್ರಮಿಸಿದರು.
ತಮಟೆ ನಾದಕ್ಕೆ ತಕ್ಕಂತೆ ಲಂಬಾಣಿ ಶೈಲಿಯ ನೃತ್ಯ ಮಾಡಿ ಹಬ್ಬ ಆಚರಿಸುವುದು ಅನಾದಿ ಕಾಲದಿಂದಲೂ ಲಂಬಾಣಿಗರು ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯ. ದೀಪಾವಳಿವೆಂದರೆ ಲಂಬಾಣಿ ಸಮುದಾಯದವರಿಗೆ ವಿಶೇಷ ಹಬ್ಬ ಹೀಗಾಗಿ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ ಎಂದು ಬಂಜಾರ ಸಮಾಜದ ಯುವ ಅಧ್ಯಕ್ಷ ಜಗದೀಶ ಚವ್ಹಾಣ ತಿಳಿಸಿದ್ದಾರೆ
ಬಂಜಾರ ಸಮಾಜದ ಪವಿತ್ರ ಹಬ್ಬ ದೀಪಾವಳಿಯ ಪ್ರಯುಕ್ತ ಬಂಜಾರ ಸಮಾಜದ ಅಕ್ಕ ತಂಗಿಯಂದಿರು ದೀಪವನ್ನು ತೆಗೆದುಕೊಂಡು ನಮ್ಮ ನಾಯಕರ ಮನೆಗೆ ಹೋಗಿ ದೀಪವನ್ನು ಬೆಳಗುತ್ತಾ ಹಾಗೂ ತಾಂಡಾದ ಪ್ರತಿಯೊಂದು ಮನೆಗೆ ತೆರಳಿ ದೀಪವನ್ನು ಬೆಳಗುವ ಮುಖಾಂತರ ನಾಯಕ ನಿನ್ನ ತಾಂಡಾ ಸಮೃದ್ಧವಾಗಿರಲಿ ವರಸೆರ್ ದಾಡೆರ ಕೋರ ದವಾಳಿ ನಾಯಕ ತೋನ್ ಮೇರಾ ನಾಯಕನ ತೋನ್ ಮೇರಾ ದೇವರ ಹೆಸರ ಮೇಲೆ ಹಾಗು ಮನೆಯಲ್ಲಿ ಇರುವ ಪ್ರತಿ ಸದಸ್ಯರ ಹೆಸರಿನ ಮೇಲೆ ಹಾಗೂ ಮನೆಯಲ್ಲಿ ಇರುವಂತ ಸಾಕು ಪ್ರಾಣಿ ಆಕಳು, ಎತ್ತು ಹೆಸರು ಮೇಲೆ ದೀಪವನ್ನು ಬೆಳಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರತಿ ಮನೆಯಲ್ಲಿ ಲಕ್ಷ್ಮಿ ತಾಯಿ ಕೃಪಾ ಇರಲಿ ಎಂದು ದೀಪವನ್ನು ಬೆಳಗುತ್ತಾ ಕುಣಿಯುತ್ತಾ ಹಾಡನ್ನು ಹಾಡುವ ಮುಖಾಂತರ ಹಬ್ಬವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಭೀಮಸಿಂಗ್ ಚವ್ಹಾಣ, ಮುಖಂಡರಾದ ಗೋಪಾಲ ರಾಠೋಡ, ತಿರುಪತಿ ಚವ್ಹಾಣ, ದೇವಿದಾಸ್ ಚವ್ಹಾಣ, ಶ್ರೀಕಾಂತ್ ರಾಠೋಡ, ಪ್ರತಾಪ ಚವ್ಹಾಣ, ಜಗದೀಶ್ ಪವಾರ, ಮಹದೇವ್ ರಾಠೋಡ, ಚಂದರ್ ಚವ್ಹಾಣ, ಹರೀಶ್ ರಾಠೋಡ, ವಿಶ್ವನಾಥ್ ರಾಠೋಡ, ಗೋಪಿ ರಾಠೋಡ, ತಿರುಪತಿ ರಾಠೋಡ, ಬಾಲರಾಜ್ ಚವ್ಹಾಣ, ವಿಜಯ ಪವಾರ, ದೀಪಕ್ ಜಾಧವ, ಕಿರಣ್ ನಾಯಕ, ಸಂತೋಷ ಜಾಧವ, ವಾಸು ನಾಯಕ, ಪಾಂಡು ರಾಠೋಡ, ರಾಜು ಚವ್ಹಾಣ, ವಿನೋದ್ ನಾಯಕ, ಬಸವರಾಜ್ ನಾಯಕ, ಪ್ರೇಮ್ ನಾಯಕ ಸೇರಿದಂತೆ ಮಹಿಳೆಯರು, ಯುವತಿಯರು ಇದ್ದರು.