ಚಿತ್ತಾಪುರ-ಕರದಾಳ ರಸ್ತೆಯಲ್ಲಿರುವ ಸೈಯದ್ ಪೀರ್ ದರ್ಗಾ ಧ್ವಂಸ, ಕಲಬುರ್ಗಿ ಎಸ್.ಪಿ ಶ್ರೀನಿವಾಸಲು ಭೇಟಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ; ಪಟ್ಟಣದ ಹೊರವಲಯದಲ್ಲಿರುವ ಚಿತ್ತಾಪುರ-ಕರದಾಳ ರಸ್ತೆ ಮಧ್ಯದಲ್ಲಿರುವ ಸೈಯದ್ ಪೀರ್ ದರ್ಗಾವನ್ನು ಕೆಲ ಕಿಡಿಗೇಡಿಗಳು ಬುಧವಾರ ರಾತ್ರಿ ವೇಳೆ ಧ್ವಂಸಗೊಳಿಸಿರುವ ಘಟನೆ ಜರುಗಿದ್ದು ಗುರುವಾರ ಬೆಳಗ್ಗೆ ಬೆಳಕಿಗೆ ಬರುತ್ತಿದ್ದಂತೆ ಕಲಬುರ್ಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಕ್ರೈಂ ಪಿಎಸ್ಐ ಚಂದ್ರಾಮಪ್ಪ ಇದ್ದರು.
ಸೈಯದ್ ಪೀರ್ ದರ್ಗಾ ಹಿಂದು-ಮುಸ್ಲಿಂರ ಭಾವೈಕ್ಯತೆ ಹೊಂದಿರುವ ಹಾಗೂ ರೈತರ ಆರಾಧ್ಯ ದೇವರಾಗಿದ್ದು ಬಿತ್ತನೆ ಹಾಗೂ ರಾಶಿ ಸಂದರ್ಭದಲ್ಲಿ ಈ ದರ್ಗಾಕ್ಕೆ ಪೂಜೆ ಪುನಸ್ಕಾರ ಮಾಡುತ್ತಾರೆ. ಇಂತಹ ಭಾವೈಕ್ಯತೆಯ ಸೈಯದ್ ಪೀರ್ ದರ್ಗಾವನ್ನು ಧ್ವಂಸಗೊಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀರ್ವ ಚರ್ಚೆಗೆ ಗ್ರಾಸವಾಗಿ ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಕೂಡಲೇ ಪೊಲೀಸ್ ಅಧಿಕಾರಿಗಳು ತನಿಖೆ ಕಾರ್ಯ ಕೈಗೊಂಡು ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.