Oplus_131072

ಬೊಮ್ಮನಳ್ಳಿ ಕರದಾಳ ಸೀಮೆಯಲ್ಲಿ ಆದಿಶೇಷನ ವಿಶೇಷ ಪೂಜೆ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಬೊಮ್ಮನಳ್ಳಿ ಕರದಾಳ ಸೀಮೆಯಲ್ಲಿರುವ ಆದಿಶೇಷನ ದೇವಸ್ಥಾನದಲ್ಲಿ ನಾಗರ ಪಂಚಮಿ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ಪೂಜೆ ನಡೆಯಿತು.

ಶರಣಪ್ಪ ವಿಶ್ವಕರ್ಮ, ಆನಂದಕುಮಾರ್ ಕುಲಕರ್ಣಿ ಹಾಗೂ ನಾಗಮೂರ್ತಿಪ್ಪ ವಿಶ್ವಕರ್ಮ ಅವರು ಪ್ರಾರಂಭಿಸಿದ ಈ ವಿಶೇಷ ಪೂಜೆ ಕಾಲಾನುಕಾಲದಿಂದ ನಡೆದುಕೊಂಡು ಬಂದಿದೆ ಇದಕ್ಕೆ ದಿವ್ಯ ಶಕ್ತಿ ಇದೆ ಎಂದು ರಾಜಣ್ಣ ಕರದಾಳ ತಿಳಿಸಿದ್ದಾರೆ.

ಹಾವು ಕಡಿತದಿಂದ ಸಾವು ನೋವು ಸಂಭವಿಸುವ ಆಗಿನ ಕಾಲದಲ್ಲಿ ಮಂತ್ರೋಪದೇಶದಿಂದ ಎಷ್ಟೋ ಜನ ಜಾನುವಾರುಗಳ ಪ್ರಾಣಹಾನಿ ರಕ್ಷಿಸಲಾಗಿದೆ, ಈ ಭಾಗದಲ್ಲಿ ಜನರ ನಂಬಿಕೆ ಅಗಾಧ ಇದೆ. ಜೀವ ಉಳಿಸುವ ಸಲುವಾಗಿ ವಿಶೇಷ ಪೂಜೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪೂಜೆಯಲ್ಲಿ ಸಿದ್ದಪ್ಪ ಗಡ್ಡಿಮನಿ, ಹಾಜಪ್ಪ ಚೂರಿ, ಬಸವರಾಜ ಇವಣಿ, ಶಾಂತಪ್ಪ ಬೊಮ್ಮನಳ್ಳಿ, ಮಹಾದೇವಪ್ಪ ಕರದಾಳ, ಹಾಜಿಸಾಬ್ ಕರದಾಳ, ಶರಣಪ್ಪ ಕರದಾಳ, ನಬೀಸಾಬ್ ಕರದಾಳ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!