ಆಶ್ರಯ ಕಾಲೋನಿ ಜೈ ಹನುಮಾನ್ ಟೆಂಪಲ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಆಶ್ರಯ ಕಾಲೋನಿಯ ಜೈ ಹನುಮಾನ್ ಟೆಂಪಲ್ ಟ್ರಸ್ಟ್ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಶ್ರಾವಣ ಮಾಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷದ ಅನ್ನದಾಸೊಹ (ಖಾಂಡ್) ಹಾಗೂ ದೇವಸ್ಥಾನದ ಹಲವು ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಲಾಯಿತು. ಎರಡು ವರ್ಷಗಳ ಅವಧಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಗೌರವಾದ್ಯಕ್ಷರಾಗಿ ತಮ್ಮಣ್ಣ ಹೋನಗೇರಿ, ಅಧ್ಯಕ್ಷರಾಗಿ ಮೇಘರಾಜ್ ಗುತ್ತೇದಾರ್, ಉಪಾದ್ಯಕ್ಷರಾಗಿ ಸಾಗರ್ ಚಿಟ್ಟೇಕರ್, ಮುನಿಯಪ್ಪ ಭಾಗೋಡಿಕರ್, ಕಾರ್ಯದರ್ಶಿಯಾಗಿ ಭೀಮು ಭಾಗೋಡಿ, ಸಹ ಕಾರ್ಯದರ್ಶಿಯಾಗಿ ಅನೀಲ್ ವಾರೀಕ್, ಖಜಾಂಜಿಯಾಗಿ ಮಲ್ಲಿಕಾರ್ಜುನ್ ಉಪ್ಪಾರ್, ಸಂಪರ್ಕ ಪ್ರಮುಖ ಅಜಯ್ ರಾಠೋಡ್.
ಈ ಸಂದರ್ಭದಲ್ಲಿ ಕಾಶಿನಾಥ ಸಂಗಾವಿ, ತಿಪ್ಪಣ್ಣ ಇವಣಿ, ಹಣಮಂತ ಮೈನಾಳಕರ್ ರವಿ ದೊಡ್ಡಮನಿ, ಸಾಯಿನಾಥ್ ಕಾಶಿ, ಕಾಶಿನಾಥ ಟೆಂಗಳಿ, ನಾಗಾರಾಜ್ ತಳವಾರ್, ಪ್ರವೀಣ್ ವಾಘಮೋರೆ ಹಾಗೂ ಹಿರಿಯರು ಮತ್ತು ಗಜಾನನ ಗಣೇಶ ಮಂಡಳಿಯ ಯುವಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು .

