ಕಾಶಿ ಗಲ್ಲಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 20 ಲಕ್ಷ ಅನುದಾನ: ಕಾಶಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಕಾಶಿ ಗಲ್ಲಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ 20 ಲಕ್ಷ ಅನುದಾನ ಬಿಡುಗಡೆ ಆಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಚಂದ್ರಶೇಖರ ವೈ. ಕಾಶಿ ಹೇಳಿದರು.
ಪಟ್ಟಣದ ಕಾಶಿ ಗಲ್ಲಿಯ ಹಜರತ್ ಮಹೆಬೂಬ್ ಸುಬಾನಿ ದರ್ಗಾ ಹತ್ತಿರ ಗುರುವಾರ 15 ನೇ ಹಣಕಾಸು ಯೋಜನೆಯಡಿ 2.50 ಲಕ್ಷ ವೆಚ್ಚದಲ್ಲಿ ಕೈಗೊಂಡ ಫೇವರ್ (ನೆಲ ಹಾಸುಗೆ) ಕಾಮಗಾರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಚ್ಛಾಶಕ್ತಿಯಿಂದ ನಮ್ಮ ಕಾಶಿ ಗಲ್ಲಿಯಲ್ಲಿ ಗಣೇಶ ಮಂದಿರ ಹತ್ತಿರ ಬೋರವೆಲ್, ಸಿಸಿ ರಸ್ತೆ, ಚರಂಡಿ, ನೆಲ ಹಾಸುಗೆ ಸೇರಿದಂತೆ ಮೂರು ಅಂಗನವಾಡಿ ಕೇಂದ್ರಗಳಿಗೆ ಕಟ್ಟಡ ನಿರ್ಮಾಣ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದರು.
ಸರಪಂಚ್ ವಿಠಲ್ ಕಟ್ಟಿಮನಿ ಮಾತನಾಡಿ, ನಮ್ಮ ಸಮಾಜದ ಚಂದ್ರಶೇಖರ್ ಕಾಶಿ ಪುರಸಭೆ ಅಧ್ಯಕ್ಷರಾದ ನಂತರ ನಮ್ಮ ಕಾಶಿ ಗಲ್ಲಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ ಈಗಾಗಲೇ ಸಮುದಾಯದ ಭವನ, ಗಣೇಶ ಮಂದಿರ ಹಾಗೂ ಮಹೆಬೂಬ್ ಸುಬಾನಿ ದರ್ಗಾ ದ ಅಭಿವೃದ್ಧಿ ಕೆಲಸಗಳು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ, ಇಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯ ಶೀಲಾ ಕಾಶಿ, ಕಾಂಗ್ರೆಸ್ ಎಸ್ಸಿ.ಎಸ್ಟಿ ಘಟಕದ ಅಧ್ಯಕ್ಷ ಸಾಬಣ್ಣ ವೈ.ಕಾಶಿ, ಭೋವಿ ವಡ್ಡರ ಸಮಾಜದ ಅಧ್ಯಕ್ಷ ರಾಜೇಶ್ ಕಾಶಿ, ಮಹಿಳಾ ಅಧ್ಯಕ್ಷೆ ಶಾಂತಾಬಾಯಿ ಗಾಯಕವಾಡ, ಜೆಇ ರಾಕೇಶ್ ರೆಡ್ಡಿ, ಸರಪಂಚಗಳಾದ ಸುಭಾಷ್ ಕಟ್ಟಿಮನಿ, ವಿಠಲ್ ಕಟ್ಟಿಮನಿ, ಯುವ ಮುಖಂಡ ಯಲ್ಲಪ್ಪ ಕಾಶಿ, ಮೋಹನ್ ಕಾಶಿ, ಅನೀಲ್ ಕಾಶಿ, ಶಾಮರಾವ್ ಕಾಶಿ, ಹಾಜಿ ವಾಲೀಕಾರ, ಗುತ್ತಿಗೆದಾರ ಶರಣಪ್ಪ ಶಹಾಪುರ ಸೇರಿದಂತೆ ಅನೇಕರು ಇದ್ದರು.