Oplus_131072

ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವ, ಪೂಜೆ, ದಾಸೋಹ ಪರಂಪರೆ ಮುಂದುವರೆಸಿದರೆ ಬದುಕಿಗೆ ಬೆಲೆ: ನಾಲವಾರ ಶ್ರೀಗಳು

ನಾಗಾವಿ ಎಕ್ಸಪ್ರೆಸ್ 

ಜೇವರ್ಗಿ: ಸಮಾಜದಲ್ಲಿನ ಜನರು ಅಹಂ ಅನ್ನು ತೊರೆದು ಪ್ರೀತಿ ವಿಶ್ವಾಸ, ಭಕ್ತಿಯಿಂದ ಪೂಜೆ ಮತ್ತು ದಾಸೋಹ ಪರಂಪರೆಯನ್ನು ದಿನವಿಡ ನಡೆಸಿದರೆ ನಮ್ಮ ಬದುಕಿಗೆ ಒಂದು ಬೆಲೆ ಬರಲಿದೆ ಎಂದು ಶ್ರೀ ಕ್ಷೇತ್ರ ನಾಲವಾರ ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಠದ  ಡಾ. ಸಿದ್ದ ತೋಟೆಂದ್ರ ಮಹಾಸ್ವಾಮಿಗಳು ನುಡಿದರು.

ಅವರು ಜೇವರ್ಗಿ ತಾಲೂಕಿನ ಕಟ್ಟಿ ಸಂಗಾವಿ ಭೀಮಾ ಬ್ರಿಜ್ ಪ್ರಭು ಬಸಯ್ಯ ತಾತನವರ ಜಾತ್ರಾ ಮಹೋತ್ಸವದ ಅಂಗವಾಗಿ ನೆರವೇರಿದ ರಥೋತ್ಸವದ ನಂತರ ನಡೆದ ಧರ್ಮ ಸಭೆಯ ಸನ್ನಿಧಾನ ವಹಿಸಿ ನೆರೆದ ಅಪಾರಭಕ್ತ ಉದ್ದೇಶಸಿಸಿ ಆಶೀರ್ವಚನ ನೀಡಿದ ಶ್ರೀಗಳು, ನಾವು ಮಾಡುವಂತ ಕಾರ್ಯದಲ್ಲಿ ಸ್ವಾರ್ಥ ಮತ್ತು ಅಹಂ ಗುಣಗಳನ್ನು ಮುಕ್ತಗೊಂಡು ನಿಸ್ವಾರ್ಥಿಗಳಾಗಿ ಸೇವೆಗೆಯುವುದು ಮುಖ್ಯ ಎಂದರು.

ನಾವುಗಳು ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಮಠ, ಮಂದಿರ, ಗುಡಿಗಳಲ್ಲಿ ಮತ್ತು ನಮ್ಮ ನಮ್ಮ ಮನೆಗಳಲ್ಲಿ ಪೂಜೆಗಳ ಜೊತೆ ಜೊತೆಯಲ್ಲಿ ದಾಸೋಹವನ್ನು ಆಚರಣೆಯಲ್ಲಿ ಮೈಗೂಡಿಸಿಕೊಂಡು ಕಾರ್ಯರೂಪಕ್ಕೆ ತರುವುದು ಬಹುಮುಖ್ಯವಾಗಿದೆ ಎಂದರು

ಇದಕ್ಕೂ ಪೂರ್ವದಲ್ಲಿ ಪ್ರಭು ಬಸಯ್ಯ ತಾತನವರ ಭವ್ಯ ರಥೋತ್ಸವದಲ್ಲಿ ಸಹಸ್ರ ಸಹಸ್ರ ಭಕ್ತರು ಭಾಗವಹಿಸಿ ಭಕ್ತಿ ಭಾವಗಳಲ್ಲಿ ಜಯ ಘೋಷಗಳನ್ನು ಮೊಳಗಿಸಿದರು.

ಈ ಜಾತ್ರಾ ಮಹೋತ್ಸವ ಸಮಾರಂಭದ ನೇತೃತ್ವವನ್ನು ಹೊನ್ನ ಕಿರಣಗಿ ರಾಚೋಟೇಶ್ವರ ಮಠದ ಶ್ರೀ ಚಂದ್ರಗುಂಡ ಶಿವಾಚಾರ್ಯರು ಮತ್ತು ರೋಜಾ ಹಿರೇಮಠದ ಕೆಂಚ ದೃಶ್ಯವೇಂದ್ರ ಶಿವಾಚಾರ್ಯರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದೊಡ್ಡಪ ಗೌಡ ಪಾಟೀಲ ನರಿಬೋಳ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ  ಅಶೋಕ್ ಸಾವು ಗೋಗಿ, ಆನಂದಕುಮಾರ್ ಮಧುರಿ, ವೇ. ಬಸಯ್ಯಸ್ವಾಮಿಗಳು, ಮಲ್ಲಯ್ಯ ಸ್ವಾಮಿ ವಡಿಗೇರಿ ಆಧ್ಯಾತ್ಮಿಕ ಪುರಾಣ ಪ್ರವಚನ ನೀಡಿದರು. ಪ್ರಭು ಬಸಯ್ಯಸ್ವಾಮಿಗಳು, ದೇವೇಂದ್ರಪ್ಪ ಗಂವಾರ್, ಶಿವರಾಜ್ ನಾಯ್ಕೋಡಿ, ಮಹಾದೇವ ಗಂವಾರ್ ಮುಂತಾದವರು ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ನಾಲವಾರ ಶ್ರೀಗಳನ್ನು ಭಕ್ತಾದಿಗಳು ಪೂರ್ಣ ಕುಂಭ ಕಳಸ ಕನ್ನಡಿ ಡೊಳ್ಳು ಹೊಲಿಗೆ ವಾದ್ಯಗಳ ಮೂಲಕ ಭವ್ಯವಾಗಿ ಬರಮಾಡಿಕೊಂಡರು.

Spread the love

Leave a Reply

Your email address will not be published. Required fields are marked *

You missed

error: Content is protected !!