ಕೊಡ್ಲಾ ಗ್ರಾಮದಲ್ಲಿ ಶ್ರೀ ಸಿಮೆಂಟ್‌ನಿಂದ ವಿವಿಧ ಸಿಎಸ್ಆರ್ ಕಾಮಗಾರಿಗಳಿಗೆ ಚಾಲನೆ | ಸಮುದಾಯದ ಅಭಿವೃದ್ಧಿಗೆ ಶ್ರೀ ಸಿಮೆಂಟ್ ಬದ್ಧ: ರಾಮನಗೌಡ
ನಾಗಾವಿ ಎಕ್ಸಪ್ರೆಸ್
ಸೇಡಂ: ತಾಲೂಕಿನ ಕೊಡ್ಲಾ ಸಮೀಪದ ಶ್ರೀ ಸಿಮೆಂಟ್ ಕಂಪೆನಿ ವತಿಯಿಂದ ಸಿಎಸ್ಆರ್ ಯೋಜನೆಯಡಿ ಕೊಡ್ಲಾ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಯಿತು.
ಶಾಲೆಗೆ ಅಗತ್ಯವಾದ ಪೀಠೋಪಕರಣಗಳು, ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿ ಊಟಕ್ಕೆ ಊಟದ ತಟ್ಟೆಗಳು ಹಾಗೂ ನೀರಿನ ಗ್ಲಾಸ್‌ಗಳನ್ನು ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಅನ್ನಪೂರ್ಣ ಬಾನರು ಅವರು ಶಾಲೆಯ ಪರವಾಗಿ ಸಾಮಗ್ರಿಗಳನ್ನು ಸ್ವೀಕರಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನವೀಕರಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಇದರೊಂದಿಗೆ ಆಂಬುಲೆನ್ಸ್ ಶೆಡ್, ಉದ್ಯಾನವನ ಹಾಗೂ ಮಳೆನೀರು ಕೊಯ್ಲು ವ್ಯವಸ್ಥೆಯಡಿ ಬೋರ್‌ವೆಲ್ ರೀಚಾರ್ಜ್ ಪಿಟ್ ನಿರ್ಮಾಣ ಕಾಮಗಾರಿಗಳಿಗೂ ಚಾಲನೆ ನೀಡಲಾಯಿತು.
ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ಪೀಠೋಪಕರಣಗಳು, ವೀಲ್‌ಚೇರ್ ಹಾಗೂ ರೆಫ್ರಿಜರೇಟರ್‌ಗಳನ್ನು ವೈದ್ಯಾಧಿಕಾರಿ ಡಾ. ಶ್ವೇತಾ ಅವರಿಗೆ ಹಸ್ತಾಂತರಿಸಲಾಯಿತು.
ಸಿಎಸ್ಆರ್ ವಿಭಾಗದ ಮುಖ್ಯಸ್ಥ ರಾಮನಗೌಡ ಮಾತನಾಡಿ, ಗ್ರಾಮದ ಶಿಕ್ಷಣ, ಆರೋಗ್ಯ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸ್ಥಳೀಯ ಸಮುದಾಯದ ಅಭಿವೃದ್ಧಿಗೆ ಶ್ರೀ ಸಿಮೆಂಟ್‌ನ ಕೊಡ್ಲಾ ಘಟಕವು ಸಿಎಸ್ಆರ್ ಮೂಲಕ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈರಣ್ಣ ಪಾಟೀಲ ಉಪಸ್ಥಿತರಿದ್ದರು.

