Oplus_0

ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆ: ಬಾಬುರಾವ್ ಚಿಂಚನಸೂರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದೇ ನನ್ನ ಜೀವನದ ಕೊನೆಯ ಆಸೆಯಾಗಿದೆ ಎಂದು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದ ಹತ್ತಿರ ತಾಲೂಕು ಕೋಲಿ ಸಮಾಜದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ನವರ 905 ನೇ ಜಯಂತ್ಯೋತ್ಸವ ನಿಮಿತ್ತ ಶೋಭಾಯಾತ್ರೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಎಲ್ಲ ಸಮಾಜಗಳು ಮುಂದೆ ಬಂದಿವೆ ಆದರೆ ಕೋಲಿ ಸಮಾಜ ಮಾತ್ರ ಹಿಂದುಳಿದಿದೆ ಅದಕ್ಕೆ ನಮ್ಮವರೇ ಕಾರಣ ಎಂದು ದೂರಿದರು.

ಗುರುಮಠಕಲ್ ಕ್ಷೇತ್ರದಿಂದ ನನ್ನ ಸೋಲಿಗೆ ನಮ್ಮವರೇ ಕಾರಣ ಒಂದು ವೇಳೆ ನಾನು ಗೆಲುವು ಸಾಧಿಸಿದ್ದರೆ ಪ್ರಭಾವಿ ಖಾತೆಯ ಪವರಫುಲ್ ಮಂತ್ರಿಯಾಗುತ್ತಿದ್ದೆ, ಹಾಗೂ ಕೋಲಿ ಸಮಾಜ ಎಸ್.ಟಿ ಮಾಡುವ ಸಲುವಾಗಿ ಪ್ರಧಾನಿ ಮೋದಿ ಮನೆ ಮುಂದೆ ಅಮರಣಾಂತ ಉಪವಾಸ ಮಾಡುತ್ತಿದ್ದೆ. ಈಗ ನಾನು ಸೋತರೂ ಅಧಿಕಾರದಲ್ಲಿ ಇದ್ದೇನೆ ಎಂದು ಹೇಳಿದರು.

ನಾನು ಅಧಿಕಾರಕ್ಕೆ ಬಂದಾಗೆಲ್ಲ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿದ್ದೇನೆ ಆಗಿನ ಮುಖ್ಯಮಂತ್ರಿ ಈರಪ್ಪ ಮೊಯ್ಲಿ ಅವರ ಮೇಲೆ ಒತ್ತಡ ಹೇರಿ ಕೋಲಿ ಸಮಾಜವನ್ನು ಪ್ರವರ್ಗ 1 ಕ್ಕೆ ಸೇರಿಸಿದ್ದೇನೆ, ಕೋಲಿ ಸಮಾಜದ ದೇವಸ್ಥಾನಗಳಿಗೆ 33 ಕೋಟಿ ಅನುದಾನ ನೀಡಿದ್ದೇನೆ, ಎಸ್.ಟಿ ಸೇರಿಸುವ ಸಲುವಾಗಿ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ ಹೀಗಾಗಿ ನಾನು ಸುಮ್ಮನೆ ಸಾಯುವುದಿಲ್ಲ ಕೋಲಿ ಸಮಾಜವನ್ನು ಎಸ್‌.ಟಿ ಮಾಡಿಯೇ ಸಾಯುತ್ತೇನೆ ಇದು ಶತಸಿದ್ಧ ಎಂದು ವಾಗ್ದಾನ ಮಾಡಿದರು. ಕೋಲಿ ಸಮಾಜ ಎಸ್.ಟಿ ಆದಾಗ ಮಾತ್ರ ಅಭಿವೃದ್ಧಿ ಆಗಲಿದೆ ಹೀಗಾಗಿ ನಮ್ಮ ಕೂಗು ದೆಹಲಿ ಗೆ ಮುಟ್ಟುವ ಹಾಗೆ ಹೋರಾಟ ಮಾಡಬೇಕು ಇದಕ್ಕಾಗಿ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದರು.

ಈ ಭಾಗದ ಶಾಸಕರು ಸಚಿವರಾದ ಪ್ರಿಯಾಂಕ್ ಖರ್ಗೆ ಪ್ರಭಾವಿ ನಾಯಕರು, ಅಭಿವೃದ್ಧಿ ಹರಿಕಾರರು ಆಗಿದ್ದು ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಹೀಗಾಗಿ ಭವಿಷ್ಯದಲ್ಲಿ ಈ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು. ನಾನು ಸಹ ಮುಂದಿನ ಚುನಾವಣೆಯಲ್ಲಿ ಗೆದ್ದು ರಾಜ್ಯದ ಉಪ ಮುಖ್ಯಮಂತ್ರಿ ಆಗಲಿದ್ದೇನೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತೋನಸನಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಶ್ರೀ ಮಲ್ಲಣ್ಣಪ್ಪ ಮಹಾಸ್ವಾಮಿಗಳು ಮಾತನಾಡಿ, ಚಿತ್ತಾಪುರ ಕ್ಷೇತ್ರದಲ್ಲಿ ಕೋಲಿ ಸಮಾಜದ ಬಹುದೊಡ್ಡ ಶಕ್ತಿ ಇದೆ. ಚುನಾವಣೆಗಳಲ್ಲಿ ರಾಜಕೀಯ ಚಿತ್ರಣ ಬದಲಾಯಿಸುವ ಸಾಮರ್ಥ್ಯ ಇದೆ ಈ ಕ್ಷೇತ್ರದಿಂದಲೇ ಬಾಬುರಾವ್ ಚಿಂಚನಸೂರ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಕೋಲಿ ಸಮಾಜದ ಶಕ್ತಿ ಇಡೀ ರಾಜ್ಯಕ್ಕೆ ತೋರಿಸಿದ್ದಾರೆ ಅಲ್ಲದೇ ಪ್ರಿಯಾಂಕ್ ಖರ್ಗೆ ಶಾಸಕರಾಗಿ ಸಚಿವರಾಗಿ ಆಗಿದ್ದಾರೆ ಹೀಗಾಗಿ ಕೋಲಿ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಕೋಲಿ ಸಮಾಜದ ಮುಖಂಡರಾದ ಲಚ್ಚಪ್ಪ ಜಮಾದಾರ, ಭೀಮಣ್ಣ ಸಾಲಿ ಮಾತನಾಡಿದರು. ಪಿಎಸ್ಐ ಶ್ರೀಶೈಲ್ ಅಂಬಾಟಿ, ಕೋಲಿ ಸಮಾಜದ ತಾಲೂಕು ಅಧ್ಯಕ್ಷ ನಿಂಗಣ್ಣ ಹೆಗಲೇರಿ, ಗೌರವಾಧ್ಯಕ್ಷ ರಾಮಲಿಂಗ ಬಾನರ್, ನಗರಾಧ್ಯಕ್ಷ ಪ್ರಭು ಹಲಕಟ್ಟಿ, ಯುವ ಅಧ್ಯಕ್ಷ ಬಸವರಾಜ ಮೈನಾಳಕರ್, ಮುಖಂಡರಾದ ಹಣಮಂತ ಸಂಕನೂರ, ಬಸವರಾಜ ಚಿನ್ನಮಳ್ಳಿ, ರೇಖಾ ತಳವಾರ, ಭೀಮರಾಯ ಹೊತಿನಮಡಿ, ಮಹೇಶ್ ಮುಕೆ, ಶರಣಪ್ಪ ನಾಶಿ, ಪಿಂಟು ಜಮಾದಾರ, ದತ್ತು ಬಸವಕಲ್ಯಾಣ, ಮುನಿಯಪ್ಪ ಕೊಳ್ಳಿ, ಸಿದ್ದು ಸಂಗಾವಿ, ದೇವಿಂದ್ರ ಕೆರಳ್ಳಿ, ಸುರೇಶ್ ಬೆನಕನಳ್ಳಿ, ಸತೀಶ್ ಜಮಾದಾರ, ಸಂತೋಷ ಮಳಬಾ, ಮಲ್ಲಿಕಾರ್ಜುನ ಸಂಗಾವಿ, ಕರಣಕುಮಾರ್ ಅಲ್ಲೂರು, ಶರಣು ಡೋಣಗಾಂವ, ಚಂದ್ರು ಕಾಳಗಿ, ಮೈಪಾಲ್ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಎಮ್ಮೆನೋರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಿಂದ್ರ ಅರಣಕಲ್ ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!