Oplus_0

ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವ, ಫೆ. 27 ಕ್ಕೆ ಅಗ್ನಿ ಪ್ರವೇಶ, ಫೆ.28 ಕ್ಕೆ ಭವ್ಯ ರಥೋತ್ಸವ

ನಾಗಾವಿ ಎಕ್ಸ್‌ಪ್ರೆಸ್‌ ಕಾಳಗಿ

ಕಲ್ಯಾಣ ಕರ್ನಾಟಕದ ಪ್ರಸಿದ್ಧ ಸುಕ್ಷೇತ್ರ ಕೋರವಾರ ಅಣಿವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಫೆ. 27 ರಂದು ರಾತ್ರಿ 11 ಗಂಟೆಯಿಂದ ಬೆಳಿಗ್ಗೆಯವರೆಗೆ ಅಗ್ನಿಪ್ರವೇಶ ಹಾಗೂ ಫೆ. 28 ರಂದು ರಾತ್ರಿ 8 ಗಂಟೆಗೆ ಅಣಿವೀರಭದ್ರೇಶ್ವರರ ಭವ್ಯ ರಥೋತ್ಸವವು ಜರುಗಲಿದೆ ಎಂದು ಕಾಳಗಿ ಗ್ರೇಡ್-1 ತಹಸೀಲ್ದಾರ್ ಘಮಾವತಿ ರಾಠೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಜರಾಯಿ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಒಳಪಟ್ಟಿರುವ ಈ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಅಂತರಾಜ್ಯಗಳಿಂದ ಸಹಸ್ರಾರು ಭಕ್ತರು ಆಗಮಿಸುತ್ತಾರೆ. ಫೆ. 27 ದಂದು ಅಣವೀರಭದ್ರೇಶ್ವರ ಮೂರ್ತಿಗೆ ಬೆಳಿಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರುವುದು, ಸಾಯಂಕಾಲ 6 ಗಂಟೆಗೆ ಅಗ್ನಿ ಪೂಜೆ ನಂತರ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದವರೆಗೆ ನಾಡಿನ ಪ್ರಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಜರುಗುವುದು. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 5 ರವರೆಗೆ ಅಣವೀರಭದ್ರೇಶ್ವರ ಪಲ್ಲಕ್ಕಿ ಜೊತೆಗೆ ಪುರವಂತರು, ಭಕ್ತರು ಸಹ ಅಗ್ನಿ ಪ್ರವೇಶ ಮಾಡುವರು ಎಂದು ತಿಳಿಸಿದ್ದಾರೆ.

ಫೆ.28 ರಂದು ಸಾಯಂಕಾಲ 4 ಗಂಟೆಗೆ ನಂದಿಧ್ವಜ ಮತ್ತು ಕಳಸ ಮೆರವಣಿಗೆಯು ಕೋರವಾರ ಗ್ರಾಮದಿಂದ ಹೊರಟು ಅಣವೀರಭದ್ರೇಶ್ವರ ದೇವಸ್ಥಾನಕ್ಕೆ ತಲುಪುವುದು ನಂತರ ರಾತ್ರಿ 8 ಗಂಟೆಗೆ ವಿದ್ಯುತ್ ಹಾಗೂ ಪುಷ್ಪಗಳಿಂದ ಅಲಂಕೃತವಾದ ಅಣವೀರಭದ್ರೇಶ್ವರ ರಥೋತ್ಸವ ಜರುಗುವುದು. ಮಾ. 1 ರಂದು ಬೆಳಿಗ್ಗೆ 8 ರಿಂದ 9.30 ಗಂಟೆಯವರೆಗೆ ಮತ್ತು ಸಂಜೆ 4 ರಿಂದ 5.30 ಗಂಟೆಯವರೆಗೆ ಪ್ರಸಿದ್ದ ಜಂಗಿ ಪೈಲವಾನರಿಂದ ಕುಸ್ತಿಗಳು ನಡೆಯಲಿವೆ ಎಂದು ಮಾಹಿತಿ ನೀಡಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!