Oplus_0

ಲಾಡ್ಲಾಪೂರದ ಭಾವೈಕ್ಯತೆಯ ಭಗವಂತ ಶ್ರೀ ಹಾಜೀ ಸರ್ವರ್ ಜಾತ್ರಾ ಮಹೋತ್ಸವ ಏಪ್ರಿಲ್ 2 ರಿಂದ ಪ್ರಾರಂಭ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಸುಕ್ಷೇತ್ರ ಲಾಡ್ಲಾಪೂರದ ಭಾವೈಕ್ಯತೆಯ ಭಗವಂತ ಶ್ರೀ ಹಾಜೀ ಸರ್ವರ್, ಆದಿ ಶರಣರ ಜಾತ್ರಾ ಮಹೋತ್ಸವ ಏಪ್ರಿಲ್ 2 ರಿಂದ ಪ್ರಾರಂಭಗೊಂಡು 6 ರಂದು ಮುಕ್ತಾಯಗೊಳ್ಳಲಿದೆ ಎಂದು ಜಾತ್ರೆ ಕಮಿಟಿಯವರು ತಿಳಿಸಿದ್ದಾರೆ.

ಏಪ್ರಿಲ್ 2 ರಂದು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಬಹು ವಿಜೃಂಭಣೆಯ ಗಂಧೋತ್ಸವ ಜರುಗಲಿದೆ. 3 ರಂದು ದೀಪೋತ್ಸವ ಹಾಗೂ ಸಂಜೆ 9.30 ಗಂಟೆಗೆ ಖವ್ಹಾಲಿ ಕಾರ್ಯಕ್ರಮ. ಏಪ್ರಿಲ್ 4  ರಂದು 4  ಗಂಟೆಯಿಂದ ಕರ್ನಾಟಕ ಮತ್ತು ಅಂಧ್ರಪ್ರದೇಶ ಪಟುಗಳಿಂದ ಕೃ ಕುಸ್ತಿ ಸ್ಪರ್ಧೆ ಕಾರ್ಯಕ್ರಮ ಜರುಗುವುದು ಹಾಗೂ ಏಪ್ರಿಲ್ 6 ರಂದು ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೆ ಸಮಾರೋಪಗೊಳ್ಳುವುದು.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಲಕ್ಷೋಪಾದಿಯಲ್ಲಿ ಸೇರಿ ಶರಣರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.

ವಿವಿಧ ವ್ಯಾಪಾರಸ್ಥರು ತಮ್ಮ ಸ್ಥಳಗಳ ಬಗ್ಗೆ 8 ದಿವಸ ಮುಂಚಿತವಾಗಿ ಬಂದು ಕಾರ್ಯದರ್ಶಿಗಳಿಗೆ ಭೇಟಿಯಾಗಿ ಅಧಿಕೃತ ರಸೀದಿ ಪಡೆಯತಕ್ಕದ್ದು, ಜಾತ್ರೆಗೆ ಬರುವ ಭಕ್ತಾದಿಗಳಿಗಾಗಿ ಕ.ಕ.ರ.ಸಾ. ಸಂಸ್ಥೆ ಚಿತ್ತಾಪುರ ಹಾಗೂ ಯಾದಗಿರಿ ಡಿಪೋ ವಿಭಾಗದಿಂದ ವಿಶೇಷ ಬಸ್ಸುಗಳು ವ್ಯವಸ್ಥೆ ಮಾಡಲಾಗಿದೆ ಹಾಗೂ ಜಾತ್ರೆಯಲ್ಲಿ ವಿಶೇಷ ದಾಸೋಹ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಸುರಕ್ಷತೆಗಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!