ಮಾಲಗತ್ತಿ ಸೈನ್ಸ್ ಲ್ಯಾಬ್ ಕೋಣೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ | ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಶೈಕ್ಷಣಿಕ ಕ್ರಾಂತಿ: ಪ್ರಕಾಶ್ ಜೈನ್
ನಾಗಾವಿ ಎಕ್ಸಪ್ರೆಸ್
ಶಹಾಬಾದ: ತಾಲೂಕಿನ ಮಾಲಗತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಮಂಜೂರು ಆದ ಸೈನ್ಸ್ ಲ್ಯಾಬ್ ಕೋಣೆ ನಿರ್ಮಾಣ ಕಾಮಗಾರಿಗೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಕಾಶ್ ಜೈನ್ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಪ್ರಕಾಶ್ ಜೈನ್, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುತುವರ್ಜಿಯಿಂದ ಸೈನ್ಸ್ ಲ್ಯಾಬ್ ಕೋಣೆ ಮಂಜೂರಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಸಚಿವರು, ಈಗಾಗಲೇ ಚಿತ್ತಾಪುರದಲ್ಲಿ ನಾಗಾವಿ ಎಜುಕೇಷನ್ ಹಬ್ ನಿರ್ಮಾಣ ಮಾಡಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ ಹಾಗೂ ಖಾಸಗಿ ಶಾಲೆ ಮೀರಿಸುವ ನಿಟ್ಟಿನಲ್ಲಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ ನಿರ್ಮಾಣವಾಗಿ ಉದ್ಘಾಟನೆಗೆ ಸಜ್ಜಾಗಿದೆ ಎಂದು ಹೇಳಿದರು. ಶಿಕ್ಷಣ ಇಲಾಖೆ ಅನುದಾನದಲ್ಲಿ 2024-25 ಸಾಲಿನ ಅನುದಾನದಲ್ಲಿ ಕೋಣೆ ಮಂಜೂರಾಗಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಲ್ಲಣ್ಣ ಎಚ್. ಅಲ್ಲೂರ, ಚಂದ್ರಶೇಖರ್ ರಾವೂರ, ಮರಿಯಣ್ಣ ಮೂಲಿಮನಿ, ಮಲ್ಲಪ್ಪ ತಳವಾರ್, ಗುತ್ತಿಗೆದಾರ ಮೈಬೂಬ್ ಪಟೇಲ್, ಪಂಚಾಯತ್ ರಾಜ್ ಇಲಾಖೆ ಜೆಇ ಅಬ್ದುಲ್ ವಾಬ್, ಶಾಲೆಯ ಶಿಕ್ಷಕ ರಾಜು ಉಪಸ್ಥಿತರಿದ್ದರು.

