Oplus_0

ಚಿತ್ತಾಪುರ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಮಹಾಪ್ರಸಾದ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ವರುಣ ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ನಡೆದ ನಿತ್ಯ  ಎರಡು ಬಾರಿ  ಪೂಜಾ ಕಾರ್ಯಕ್ರಮ ಹಾಗೂ ಪ್ರತಿ ಸೋಮವಾರ ಅನ್ನ ದಾಸೋಹ ಕಾರ್ಯಕ್ರಮದ ಮಹಾಮಂಗಳದ ಪ್ರಯುಕ್ತ ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರ ಸಾನಿಧ್ಯದಲ್ಲಿ ಸೋಮವಾರ ವಿಶೇಷ ಪೂಜೆ ಮತ್ತು ಮಹಾಪ್ರಸಾದ ನಡೆಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ನಾಗರಾಜ ಭಂಕಲಗಿ, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜಯಕುಮಾರ ರೆಡ್ಡಿ ದೇಶಮುಖ, ಸೋಮಶೇಖರ ಪಾಟೀಲ ಬೆಳಗುಂಪಾ, ಮಲ್ಲಣ್ಣ ಮಾಸ್ಟರ ಮುಡಬುಳ್,  ಮಲ್ಲಿಕಾರ್ಜುನ ರೆಡ್ಡಿ ಇಜಾರ್, ಶಿವರೆಡ್ಡಿ ಪಾಲಪ್, ರಾಜಶೇಖರ ರೆಡ್ಡಿ ದೇಶಮುಖ, ಚಂದ್ರಶೇಖರ ಊಟಗೂರ್, ಕೋಟೇಶ್ವರ ರೇಶ್ಮಿ, ಅನಿಲ್ ವಡ್ಡಡಗಿ, ಸಂತೋಷ ಕಲಾಲ್, ಶಾಂತಣ್ಣ ಚಾಳಿಕಾರ,  ಕೋಟೇಶ್ವರ ರೇಷ್ಮಿ, ಸಂತೋಷ ಹಾವೇರಿ, ಬಸವರಾಜ ಸಂಕನೂರ, ಪ್ರಸಾದ ಅವಾಂಟಿ, ಬಸವರಾಜ್ ಕಾಳಗಿ, ಬಸವರಾಜಗೌಡ ದೇಶಮುಖ ಆಲೂರು ಸೇರಿದಂತೆ ಇತರರು ಇದ್ದರು.

ಅಂಬರೀಶ್ ಸುಲೇಗಾಂವ್ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದ ನೂತನ ಕಚೇರಿಯ ಉದ್ಘಾಟನೆ ನೆರವೇರಿಸಲಾಯಿತು. ಮಹಾದಾಸೋಹದಲ್ಲಿ ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!