ಲಂಬಾಣಿ ಜನಾಂಗಕ್ಕೆ ದೀಪಾವಳಿ ವಿಶೇಷ ಹಬ್ಬ
ನಾಗಾವಿ ಘಟಿಕಾ ಸ್ಥಾನದಲ್ಲಿ ಲಂಬಾಣಿ ಯುವತಿಯರ ನೃತ್ಯ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಂಜಾರ ಸಮಾಜದ ಅತಿದೊಡ್ಡ ಹಬ್ಬವೆಂದರೆ ದೀಪಾವಳಿ. ಇದನ್ನು ಲಂಬಾಣಿ ಭಾಷೆಯಲ್ಲಿ ದವಾಳಿ ಎಂದು ಕರೆಯುತ್ತಾರೆ. ಎಲ್ಲ ಸಮುದಾಯಕ್ಕೂ ಒಂದು ಬಗೆಯಾದರೆ ಲಂಬಾಣಿ ಜನಾಂಗಕ್ಕೆ ಮಾತ್ರ ದೀಪಾವಳಿ ಹಬ್ಬ ವಿಶೇಷ.
ಆಧುನಿಕ ಕಾಲದ ಭರಾಟೆಯಲ್ಲಿ ಜಾನಪದ ಸೊಗಡಿನ ಅನೇಕ ನೃತ್ಯ ಪ್ರಕಾರಗಳು, ಕಲೆಗಳು ಮರೆಯಾಗುತ್ತಿದೆ. ಆದರೆ ಲಂಬಾಣಿ ಸಮುದಾಯದವರು ಇಂದಿಗೂ ತಮ್ಮ ಸಂಪ್ರಾದಯದ ನೃತ್ಯಗಳನ್ನ ಉಳಿಸಿಕೊಂಡು ಬರುತ್ತಿರುವುದು ವಿಶೇಷ.
ಪಟ್ಟಣದ ಸ್ಟೇಷನ್ ತಾಂಡಾದ ಸುಬ್ಬು ನಾಯಕ ತಾಂಡಾದ ವತಿಯಿಂದ ನಾಗಾವಿ ಘಟಿಕಾ ಸ್ಥಾನದ ಆವರಣದಲ್ಲಿ ಲಂಬಾಣಿ ಯುವತಿಯರು ನೃತ್ಯ ಮಾಡುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.
ಬಣ್ಣ ಬಣ್ಣದ ಉಡುಗೆ ತೊಟ್ಟಿದ್ದ ಯುವತಿಯರು ತಮಟೆ ತಾಳಕ್ಕೆ ಅನುಗುಣವಾಗಿ ನೃತ್ಯ ಮಾಡುವುದು ನೋಡುಗರಲ್ಲಿ ಸಂಭ್ರಮ ಉಂಟು ತರತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಯುವತಿಯರು ನೃತ್ಯ ಮಾಡಿ ಸಂತಸ ಪಟ್ಟರು.
ಬಲಿಪಾಡ್ಯ ದಿನದಂದು ತಾಂಡಾದ ಯುವತಿಯರು ಬಣ್ಣಬಣ್ಣದ ಹೂವುಗಳನ್ನು ಬಿದಿರಿನ ಬುಟ್ಟಿಯಲ್ಲಿ ತಂದು ಸಂತ ಸೇವಾಲಾಲ್ ಮತ್ತು ಜಗದಂಬಾ ದೇವಾಲಯ, ಮರಿಯಮ್ಮದೇವಿ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಹರಕೆ ಅರ್ಪಿಸುತ್ತಾರೆ. ಬಂಜಾರಾ ಸಮುದಾಯ ಇಂದಿಗೂ ದೀಪಾವಳ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದರೊಂದಿಗೆ ಈ ಪರಂಪರೆ ಮುಂದುವರಿಸಿಕೊಂಡು ಹೋಗಲು ಪ್ರೇರಣೆ ನೀಡಲಾಗುತ್ತದೆ ಎಂದು ಸಮಾಜದ ಯುವ ಮುಖಂಡ ತಿರುಪತಿ ಚವ್ಹಾಣ ಹೇಳಿದರು.
ತಾಂಡದ ನಾಯಕ ಪೋಮು ನಾಯಕ, ಕಾರಬಾರಿ ದೇವಿದಾಸ್ ಜಾಧವ, ಡಾವೋ ಚಂದರ್ ಚವಾಣ್, ಸರಪಂಚ್ ಯಾದ ಕುಮಾರ್ ಚವಾಣ್, ಧರ್ಮ ಜಾಧವ, ತಿರುಪತಿ ಚವ್ಹಾಣ, ಮಹಾದೇವ್ ರಾಠೋಡ, ಪಾಂಡು ರಾಠೋಡ, ಸಾಗರ್ ಚವ್ಹಾಣ, ಮನೋಹರ್ ಪವಾರ, ರೋಹಿತ್ ಚವ್ಹಾಣ, ಅಜಯ್ ಚವ್ಹಾಣ, ಈಶ್ವರ್ ರಾಠೋಡ, ಅಂಬರೀಶ್ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.