ಚಿತ್ತಾಪುರ ನಾಗಾವಿ ಯಲ್ಲಮ್ಮ ಜಾತ್ರೆ ನಿಮಿತ್ತ ಸೆ.30 ರಂದು ಪೂರ್ವಭಾವಿ ಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ಶ್ರೀ ನಾಗಾವಿ ಯಲ್ಲಮ್ಮ ದೇವಸ್ಥಾನದ ಪಲ್ಲಕ್ಕಿ ಮಹೋತ್ಸವ (ಜಾತ್ರೆಯು) ಅಕ್ಟೋಬರ್ 17 ರಂದು ಜರುಗಲಿರುವ ಪ್ರಯುಕ್ತ ಸೆ.30 ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ, ಈ ವರ್ಷವೂ ಕೂಡ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನದ ಪಲ್ಲಕ್ಕಿ ಮಹೋತ್ಸವ (ಜಾತ್ರೆಯ) ಅಕ್ಟೋಬರ್ 17 ರಂದು ಜರುಗಲಿರುವ ಪ್ರಯುಕ್ತ, ಸದರಿ ಪಲ್ಲಕ್ಕಿ ಮೋಹತ್ಸವ (ಜಾತ್ರೆಯ) ಪೂರ್ವಸಿದ್ಧತೆ ಸಭೆಗೆ ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಗಳು, ಲೋಕೋಪಯೋಗಿ, ಪಿಆರ್ ಇ, ಜೇಸ್ಕಾಂ, ಪೊಲೀಸ್ ಹಾಗೂ ಅಗ್ನಿಶಾಮಕ ಅಧಿಕಾರಿಗಳು, ಭೋವಿ ಸಮಾಜ, ವಡ್ಡರ ಸಮಾಜ, ಬಂಜಾರ ಸಮಾಜ ಅಧ್ಯಕ್ಷರು ಮುಖಂಡರು, ದೇವಸ್ಥಾನದ ಅರ್ಚಕರು, ವಿವಿಧ ಸಂಘಟನೆಗಳ ಅಧ್ಯಕ್ಷರು, ಮುಖಂಡರು, ಗಣ್ಯರು, ಎಲ್ಲ ಪಕ್ಷಗಳ ಮುಖಂಡರು, ಪ್ರಮುಖರು ಭಾಗವಹಿಸಿ ಪಲ್ಲಕ್ಕಿ ಮಹೋತ್ಸವ ಬಗ್ಗೆ ಸಲಹೆ ಸೂಚನೆಗಳು ನೀಡಲು ಈ ಮೂಲಕ ಕೋರಿದ್ದಾರೆ.