ನಾಳೆ ನಾಗಾವಿ ಯಲ್ಲಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ದೀಪೋತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ರಾಷ್ಟ್ರಕೂಟರ ಕುಲದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಅರ್ಚಕರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ನ.29 ರಂದು ಸಾಯಂಕಾಲ 6.30 ಗಂಟೆಗೆ ಕಾರ್ತಿಕ ಮಾಸದ ಪ್ರಯುಕ್ತ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದೇವಿಯ ದೇವಸ್ಥಾನದ ಎಲ್ಲಾ ಪೂಜಾರಿಗಳು ಸೇರಿಕೊಂಡು ಪ್ರತಿ ವರ್ಷಕ್ಕೆ ಯಾವುದೆ ರೀತಿಯ ಖರ್ಚು ವೆಚ್ಚಗಳಾಗಲಿ ಪೂಜಾರಿಗಳ ಕಮಿಟಿ ತಂಡದವರೇ ಬರಿಸಿಕೊಳುತ್ತೇವೆ ಎಂದು ನಾಗಾವಿ ದೇವಸ್ಥಾನ ಪೂಜಾರಿ ಶಶಿಕುಮಾರ್ ಎಸ್. ಪೂಜಾರಿ ಅವರು ತಿಳಿಸಿದ್ದಾರೆ.
ನಾಳೆ ಶುಕ್ರವಾರ ಸಾಯಂಕಾಲ 6.30 ಗಂಟೆಗೆ ದೀಪೋತ್ಸವ ಜರುಗಲಿದೆ. ಆದ್ದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಹಾಗೂ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನ ಪೂಜಾರಿಗಳಾದ ಶರಣು ಪೂಜಾರಿ, ಶಿವುಕುಮಾರ ಪೂಜಾರಿ, ಸಂದೀಪ ಪೂಜಾರಿ, ಬಸವರಾಜ ಪೂಜಾರಿ, ಭೀಮಣ್ಣ ಪೂಜಾರಿ ಇದ್ದರು.