ನಾಳೆ ಚಿತ್ತಾಪುರ ಪಿಕಾರ್ಡ್ ಬ್ಯಾಂಕಿನ 64 ನೇ ವಾರ್ಷಿಕ ಮಾಹಾಸಭೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ 2024-25 ನೇ ಸಾಲಿನ ಸಹಕಾರಿ ವರ್ಷದ 64 ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯನ್ನು ಸೆ.19 ರಂದು ಶುಕ್ರವಾರ ಬೆಳಿಗ್ಗೆ 11.30 ಕ್ಕೆ ಬ್ಯಾಂಕಿನ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಭೀಮಣ್ಣ ಸಾಲಿ ಸಾತನೂರ ಇವರ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕಿ ಕುಸುಮಾವತಿ ಖನ್ನಾ ತಿಳಿಸಿದ್ದಾರೆ.
ಕಾರಣ ಸದಸ್ಯರುಗಳು ಮೇಲ್ಕಂಡ ದಿನಾಂಕದಂದು ಸಭೆಗೆ ಆಗಮಿಸಿ, ಸಭೆಯಲ್ಲಿ ಭಾಗವಹಿಸಿ ಸರ್ವ ಸದಸ್ಯರ ಮಹಾಸಭೆಯ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಡಲು ಕೋರಿದ್ದಾರೆ.

