ಚಿತ್ತಾಪುರ ಪತ್ರಕರ್ತ ನಾಗಯ್ಯ ಸ್ವಾಮಿ ಅಲ್ಲೂರ ನಿಧನಕ್ಕೆ ಚಿಂಚನಸೂರ ತೀವ್ರ ಸಂತಾಪ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ನಾಗಯ್ಯ ಸ್ವಾಮಿ ಅಲ್ಲೂರ ನಿಧನಕ್ಕೆ ಸಪ್ತ ಖಾತೆಗಳ ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ನಾಗಯ್ಯ ಸ್ವಾಮಿ ಅವರು ಚಿತ್ತಾಪುರ ತಾಲೂಕಿನ ಹಿರಿಯ ಪತ್ರಕರ್ತರಾಗಿದ್ದು, ಸರಳ ಸಜ್ಜನರಾಗಿದ್ದು ಪತ್ರಿಕಾ ರಂಗದಲ್ಲಿ ಅವರ ಸೇವೆ ಅಮೋಘವಾಗಿದೆ ಎಂದು ಸ್ಮರಿಸಿದರು. ಅವರ ನಿಧನದಿಂದ ಸಮಾಜಕ್ಕೆ ಮತ್ತು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಚಿಂಚನಸೂರ ಕಂಬನಿ ಮಿಡಿದಿದ್ದಾರೆ.