Oplus_0

ಪ್ರಬುದ್ಧ ಅಕಾಡೆಮಿ (ಪರೀಕ್ಷಾ ಪೂರ್ವ ತರಬೇತಿ ಕೇಂದ್ರ) ನಾಳೆ ಲೋಕಾರ್ಪಣೆ: ಶರಣು ಡೋಣಗಾಂವ

ನಾಗಾವಿ ಎಕ್ಸಪ್ರೆಸ್ 

ಕಲಬುರಗಿ: ನಗರದ ವಾಜಪೇಯಿ ಬಡಾವಣೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಪ್ರಬುದ್ಧ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಪ್ರಬುದ್ಧ ಅಕಾಡೆಮಿ (ಪರೀಕ್ಷಾ ಪೂರ್ವ ತರಬೇತಿ ಕೇಂದ್ರ) ಉದ್ಘಾಟನಾ ಸಮಾರಂಭ ಜ. 11 ರಂದು ನಾಳೆ ಬೆಳಿಗ್ಗೆ 10  ಗಂಟೆಗೆ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಲೋಕಾರ್ಪಣೆ ಮಾಡಲಿದ್ದಾರೆ.

ಮುಖ್ಯಾಂಶಗಳು:

ಕ್ಯಾಂಪಸ್: 10,449.35 ಚದರ ಮೀ., ಸಾಮರ್ಥ್ಯ: 1000 ವಿದ್ಯಾರ್ಥಿಗಳು, ವೆಚ್ಚ: ₹29.52 ಕೋಟಿ, ಕೆಇಎ ಪರೀಕ್ಷೆಯ ಮೂಲಕ ಪ್ರವೇಶ (ಅರ್ಹತೆ ಆಧಾರಿತ), ಸ್ಮಾರ್ಟ್ ತರಗತಿ ಕೊಠಡಿಗಳು / ಡಿಜಿಟಲ್ ಪ್ರಸ್ತುತಿ ವ್ಯವಸ್ಥೆಗಳು, ಎವಿ ಬೆಂಬಲ, ಡಿಜಿಟಲ್ ಗ್ರಂಥಾಲಯ ಮತ್ತು ಅಧ್ಯಯನ ಸಂಪನ್ಮೂಲ ಕೇಂದ್ರ (ಪುಸ್ತಕಗಳು, ಆಕಾರ ಮೂಲಗಳು, ಹಿಂದಿನ ಪತ್ರಿಕೆಗಳು + ಸ್ವಯಂ-ಅಧ್ಯಯನ ಅವಕಾಶ ಇತ್ಯಾದಿ), ಆನ್‌ಲೈನ್ ಪರೀಕ್ಷೆಗಳಿಗಾಗಿ ಕಂಪ್ಯೂಟರ್ ಲ್ಯಾಬ್, ಅಣಕು ಪರೀಕ್ಷೆಗಳು, ಇ-ಸಂಪನ್ಮೂಲಗಳು, ಅಣಕು ಪರೀಕ್ಷಾ ಸಭಾಂಗಣಗಳು, ಮಾರ್ಗದರ್ಶನ ಮತ್ತು ಸಮಾಲೋಚನಾ ಕೊಠಡಿಗಳು, ವಿದ್ಯಾರ್ಥಿ ವಿರಾಮ / ಗುಂಪು ಅಧ್ಯಯನ ಸ್ಥಳಗಳು.

ಕಲಬುರಗಿಯಲ್ಲಿರುವ ಈ ಪರೀಕ್ಷಾ ಪೂರ್ವ ತರಬೇತಿ ಕೇಂದ್ರವು ಕಲ್ಯಾಣ ಕರ್ನಾಟಕದಾದ್ಯಂತ ಸ್ಪರ್ಧಾತ್ಮಕ-ಪರೀಕ್ಷಾ ಸಿದ್ಧತೆಯನ್ನು ಬಲಪಡಿಸಲಿದೆ.

ನಮ್ಮ ನಾಯಕರು ಮೊದಲ ಅವಧಿಯಲ್ಲಿ ಗುದ್ದಲಿ ಪೂಜೆ ಮಾಡಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದರು, ಎರಡನೇ ಅವಧಿಯಲ್ಲಿ ಮುಗಿಸಿ ಪ್ರಬುದ್ಧ ಅಕಾಡೆಮಿ ಉದ್ಘಾಟಿಸುತ್ತಿರುವುದು ಹೆಮ್ಮೆಯ ಸಂಗತಿ. ನಾಳೆ ಉದ್ಘಾಟನೆಯಾಗುತ್ತಿರುವ ಪ್ರಬುದ್ಧ ಅಕಾಡೆಮಿಯಿಂದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಐಎಎಸ್, ಐಪಿಎಸ್, ಬ್ಯಾಂಕಿಂಗ್ ಸೇರಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇದರಿಂದ ಅನುಕೂಲವಾಗಲಿದೆ. ಇದು ವಿದ್ಯಾರ್ಥಿಗಳಿಗೆ ಕಲಿಕೆಯ ಹೊಸ ಕೇಂದ್ರವಾಗಲಿದೆ ಎಂದು ಕಲಬುರಗಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಶರಣು ಡೋಣಗಾಂವ ತಿಳಿಸಿದ್ದಾರೆ.

“ಪ್ರಬುದ್ಧ ಅಕಾಡೆಮಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಜೀಯವರ ಕನಸಿನ ಕೂಸು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಂಕಣಬದ್ಧ ರಾಗಿರುವ ಪ್ರಿಯಾಂಕ್ ಖರ್ಗೆ ಅವರು ಈ ಭಾಗದ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಪೂರ್ವ ತರಬೇತಿ ಪ್ರಬುದ್ಧ ಅಕಾಡೆಮಿ ಸ್ಥಾಪಿಸುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಕನಸಿಗೆ ಜೀವ ತುಂಬಿದ್ದಾರೆ”.- ಶರಣು ಡೋಣಗಾಂವ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು ಕಲಬುರಗಿ.

Spread the love

Leave a Reply

Your email address will not be published. Required fields are marked *

error: Content is protected !!