ಡೋಣಗಾಂವ ಗ್ರಾಮದಿಂದ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ | ಡಾ.ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಪಾದಯಾತ್ರೆ ಪ್ರಾರಂಭ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಅಂತೂರ- ಬೆಂತೂರ ಬೂದೀಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಇವರ 61ನೇ ಮೌನನುಷ್ಠಾನ 17ನೇ ಶಿವಯೋಗ ಸಮಾಧಿ ಪ್ರಯುಕ್ತ ಅಕ್ಟೋಬರ್ 31 ರಿಂದ ನವೆಂಬರ್ 5 ರ ವರೆಗೆ ಡೋಣಗಾಂವ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಕಲಬುರರ್ಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದವರೆಗೆ ದುಶ್ಚಟಗಳ ಭಿಕ್ಷೆ-ಸದ್ಗುಣಗಳ ದೀಕ್ಷೆಯನ್ನುವ ಸಂಕಲ್ಪದೊಂದಿಗೆ ಮಹಾ ಪಾದಯಾತ್ರೆ ಪ್ರಾರಂಭವಾಗಿದೆ
ಪಾದಯಾತ್ರೆಯ ಮಾರ್ಗಸೂಚಿ:
ನವೆಂಬರ್ 1 ರಂದು ಡೋಣಗಾಂವದಿಂದ ಬೆಳಿಗ್ಗೆ 5 ಗಂಟೆಗೆ ಪಾದಯಾತ್ರೆ ಆರಂಭವಾಗಿ ಸಾತನೂರ ಗ್ರಾಮದ ಸಕಲ ಸದ್ಭಕ್ತರಿಂದ ಸಕಲ ವಾದ್ಯಗಳೊಂದಿಗೆ ಭವ್ಯ ಸ್ವಾಗತ. ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪೂಜೆ ಮತ್ತು ಪ್ರಸಾದ ಸೇವೆ. ಮಧ್ಯಾಹ್ನ 3.30 ಗಂಟೆಗೆ ಆರಂಭಗೊಂಡು ಶ್ರೀ ಶರಣಬಸವೇಶ್ವರ ದೇವಸ್ಥಾನ. ಚಿತ್ತಾಪುರದಲ್ಲಿ ರಾತ್ರಿ ಶ್ರೀಗಳ ಧರ್ಮಸಭೆ ಮತ್ತು ವಾಸ್ತವ್ಯ.
ನವೆಂಬರ್ 2 ರಂದು ಚಿತ್ತಾಪುರದಿಂದ ಬೆಳಿಗ್ಗೆ 5 ಗಂಟೆಗೆ ಪಾದಯಾತ್ರೆ ಆರಂಭವಾಗಿ ಮುಂಜಾನೆ 11 ಗಂಟೆಗೆ ರಾವೂರ ಗ್ರಾಮಕ್ಕೆ ಪ್ರವೇಶ ಗ್ರಾಮಸ್ಥರಿಂದ ಭವ್ಯ ಸ್ವಾಗತ. ಶ್ರೀಗಳ ಪೂಜೆ ಮತ್ತು ಭಕ್ತರಿಗೆ ಪ್ರಸಾದ ಸೇವೆ ಹಾಗೂ ಮಧ್ಯಾಹ್ನ 3.30 ಗಂಟೆಗೆ ರಾವೂರದಿಂದ ಭಂಕೂರ ಗ್ರಾಮದಲ್ಲಿ ಶ್ರೀಗಳ ವಾಸ್ತವ್ಯ ಭಕ್ತರಿಗೆ ಪ್ರಸಾದ ಸೇವೆ.
ನವೆಂಬರ್ 3 ರಂದು ಭಂಕೂರದಿಂದ ಬೆಳಿಗ್ಗೆ 5 ಗಂಟೆಗೆ ಪಾದಯಾತ್ರೆ ಆರಂಭವಾಗಿ ಮುಂಜಾನೆ 11 ಗಂಟೆಗೆ ಹಿರೇ ನಂದೂರ ಗ್ರಾಮಕ್ಕೆ ಪ್ರವೇಶ ಗ್ರಾಮಸ್ಥರಿಂದ ಭವ್ಯ ಸ್ವಾಗತ. ಮಧ್ಯಾಹ್ನ ಶ್ರೀಗಳ ಪೂಜೆ ಮತ್ತು ರಾತ್ರಿ ಶ್ರೀಗಳಿಂದ ಧರ್ಮಸಭೆ ಮತ್ತು ವಾಸ್ತವ್ಯ ನಂತರ ಭಕ್ತರಿಗೆ ಪ್ರಸಾದ ಸೇವೆ. ನವೆಂಬರ್ 4 ರಂದು ಹಿರೇ ನಂದೂರದಿಂದ ಬೆಳಿಗ್ಗೆ 5 ಗಂಟೆಗೆ ಪಾದಯಾತ್ರೆ ಆರಂಭವಾಗಿ ಕಲಬುರಗಿ ಶ್ರೀ ಶರಣಬಸವೇಶ್ವರ ದೇಸ್ಥಾನದವರೆಗೆ ಮಧ್ಯಾಹ್ನ ಪೂಜೆ ಮತ್ತು ಪ್ರಸಾದ ಸೇವೆ. ಸಾಯಂಕಾಲ 7 ಗಂಟೆಗೆ ಧರ್ಮಸಭೆ ರಾತ್ರಿ ವಾಸ್ತವ್ಯ. ನವೆಂಬರ್ 5 ರಂದು ಬೆಳಿಗ್ಗೆ 8.30 ಗಂಟೆಗೆ ಅಂಗದೀಕ್ಷಾ ಕಾರ್ಯಕ್ರಮ ಕಲಬುರಗಿ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಜರುಗುವುದು. ಪಾದಯಾತ್ರೆಗೆ ಬರುವ ಭಕ್ತಾದಿಗಳು ಚಾಪೆ, ಶಾಲು, ತಟ್ಟೆ, ಲೋಟ ತೆಗೆದುಕೊಂಡು ಬರಬೇಕಾಗಿ ಎಂದು ತಿಳಿಸಿದ್ದಾರೆ.
