Oplus_0

ರಾವೂರಿನಲ್ಲಿ ವಾರ್ಷಿಕ ಕ್ರೀಡಾಕೂಟ, ಕ್ರೀಡೆಗಳಿಂದ ಮಾತ್ರ ಮಕ್ಕಳ ಸಾರ್ವಾoಗೀಣ ವಿಕಾಸ ಸಾಧ್ಯ: ಬಸವರಾಜ ಬಳೂoಡಗಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಬಹುತೇಕ ಶಿಕ್ಷಣ ಸಂಸ್ಥೆಗಳು ಕೇವಲ ಓದು, ಬರಹಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿ ಮಕ್ಕಳನ್ನು ಏಕಮುಖದ ಬೆಳವಣಿಗೆಗೆ ಕಾರಣವಾಗುತ್ತಿವೆ. ಆದರೆ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಮಕ್ಕಳ ಸರ್ವಾಂಗೀಣ ವಿಕಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂoಡಗಿ ಹೇಳಿದರು.

ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಪೀಳಿಗೆ ದೈಹಿಕವಾಗಿ ಸದೃಢರಾಗಲು ಆಟಗಳು ಬೇಕು. ಆದರೆ ನಮ್ಮ ಈಗಿನ ಆಹಾರ ಪದ್ಧತಿ ನಮ್ಮ ಮಕ್ಕಳನ್ನು ಆಶಕ್ತರನ್ನಾಗಿ ಮಾಡುತ್ತಿವೆ. ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಆದರೆ ಈಗೇನಾಗುತ್ತಿದೆ, ಫಾಸ್ಟ್ ಫುಡ್ ನಮ್ಮ ಆಹಾರ ಪದ್ಧತಿಯಾಗಿದೆ ಇದರಿಂದ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಅನೇಕ ಖಾಯಿಲೆಗಳು ಬರುತ್ತಿವೆ ಎಂದು ಹೇಳಿದರು.

ಮೊಬೈಲ್ ಚಟಕ್ಕೆ ಅಂಟಿಕೊಂಡು ಆಟವಾಡುವುದು ಕಡಿಮೆಯಾಗಿದೆ. ಬಹುತೇಕ ಶಾಲೆಗಳಲ್ಲಿ ಆಟದ ಮೈದಾನ ಮತ್ತು ದೈಹಿಕ ಶಿಕ್ಷಕರ ಕೊರತೆಯಿಂದ ಮಕ್ಕಳು ಆಟಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ವೇದಿಕೆ ಮೇಲೆ ಸಂಸ್ಥೆಯ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರಪ್ಪ ಬಾಳಿ, ಸದಸ್ಯ ಸಿದ್ದಲಿಂಗೇಶ ಜ್ಯೋತಿ ಇದ್ದರು.

ವಿವಿಧ ಗುಂಪು ಮತ್ತು ಮೇಲಾಟಗಳಲ್ಲಿ 1000 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ದೈಹಿಕ ಶಿಕ್ಷಕರಾದ ಶಿವಕುಮಾರ ಸರಡಗಿ ಹಾಗೂ ರೋಹಿತ್ ಪಥಸಂಚಲನ ನಡೆಸಿಕೊಟ್ಟರು, ಶರಣು ಸಜ್ಜನ ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ತರಲಾಯಿತು. ಸೃಷ್ಟಿ ಕ್ರೀಡಾ ಪ್ರತಿಜ್ಞಾವಿಧಿ ಭೋಧಿಸಿದಳು, ಪ್ರಾಚಾರ್ಯ ಕೆ. ಐ. ಬಡಿಗೇರ್ ಸ್ವಾಗತಿಸಿದರು, ಈರಣ್ಣ ಹಳ್ಳಿ ಪ್ರಾರ್ಥಿಸುಸಿದರು, ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!