Oplus_0

ರಾವೂರ ಶ್ರೀ ಸಿದ್ದಲಿಂಗೇಶ್ವರ ಮಠದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ | ಆರೋಗ್ಯ ಸಂಪತ್ತೇ ಅತಿದೊಡ್ಡ ಸಂಪತ್ತು : ಸಿದ್ದಲಿಂಗ ಶ್ರೀ

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಮನುಷ್ಯ ದುಡ್ಡು ಮಾಡುವುದರಲ್ಲಿ ತನ್ನ ಆರೋಗ್ಯವನ್ನೇ ಮರೆತಿದ್ದಾನೆ. ಆದರೆ ಸಂಪತ್ತನ್ನು ಅನುಭವಿಸಲು ಆರೋಗ್ಯ ಚೆನ್ನಾಗಿರಬೇಕು ಎನ್ನುವುದನ್ನು ನಾವು ಅರಿತುಕೊಳ್ಳಬೇಕು. ಆದ್ದರಿಂದ ಜಗತ್ತಿನ ಅತಿದೊಡ್ಡ ಸಂಪತ್ತು ಎಂದರೆ ಅದು ಆರೋಗ್ಯ ಸಂಪತ್ತು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ. ಮಾಲಕರೆಡ್ಡಿ ಹೊಮಿಯೋಪತಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಆಹಾರ, ವ್ಯಾಯಾಮ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಆಸ್ಪತ್ರೆಗೆ ಹೋಗುವುದನ್ನು ತಡೆಗಟ್ಟಬಹುದು. ಬದುಕಿನಲ್ಲೇ ಎಷ್ಟೇ ಇದ್ದರೂ ಅದನ್ನು ಅನುಭವಿಸಲು ಆರೋಗ್ಯವೇ ಕೆಟ್ಟು ಹೋದರೆ ಎಷ್ಟೇ ಸಂಪತ್ತು ಇದ್ದರೂ ವ್ಯರ್ಥ, ಕಲುಷಿತ ಪರಿಸರದಲ್ಲಿ ಯಾವುದೂ ಶುದ್ಧವಾಗಿ ಸಿಗುತ್ತಿಲ್ಲ. ಇಂತಹ ಪರಿಸರದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ನಮಗಿರುವ ಅತಿದೊಡ್ಡ ಸವಾಲಾಗಿದೆ ಎಂದರು.

ಡಾ. ಚೆನ್ನಮ್ಮ ಜೀವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಬಾಳಿ ಹೊಮಿಯೋಪತಿ ಕಾಲೇಜಿನ ವೈದ್ಯರಾದ ಡಾ. ಸಿದ್ದಲಿಂಗ ಮಾಲಿಪಾಟೀಲ್, ಡಾ. ಶ್ವೇತಾ ಪಾಟೀಲ್, ಡಾ. ಸಾಕ್ಷಿ ರಾಘೊಜಿ, ಖಂಡೇರಾಯ ಬುರಲಿ ಇದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ರಾವೂರ, ಗಾಂಧೀನಗರ, ಮಾಲಗತ್ತಿ ಗ್ರಾಮಗಳಿಂದ ನೂರಾರು ಜನರು ಆಗಮಿಸಿ ಶಿಬಿರದ ಲಾಭ ಪಡೆದರು.

Spread the love

Leave a Reply

Your email address will not be published. Required fields are marked *

You missed

error: Content is protected !!