ರಾವೂರನಲ್ಲಿ ರಾಷ್ಟ್ರೀಯ ಪೋಷಣ್ ಮಾಸಾಚಾರಣೆ | ಗರ್ಭಿಣಿಯರಿಗೆ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಅರಿವು ಮೂಡಿಸುವುದು ಅಗತ್ಯ: ಭೂಶೆಟ್ಟಿ 

ನಾಗಾವಿ ಎಕ್ಸಪ್ರೆಸ್

ಶಹಾಬಾದ: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಮತ್ತು ಗರ್ಭಿಣಿಯರಿಗೆ ಬಾಣಂತಿಯರಿಗೆ ಪೌಷ್ಟಿಕ ಆಹಾರದ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಿಡಿಪಿಓ ಶಿವಶರಣಪ್ಪ ಭೂಶೆಟ್ಟಿ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಅಂಗನವಾಡಿ ಕೇಂದ್ರ 7 ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೋಷಣ್ ಮಾಸಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹುಟ್ಟುವ ಪ್ರತಿಯೊಂದು ಮಗು ಈ ದೇಶದ ಉತ್ತಮ ಮಾನವ ಸಂಪನ್ಮೂಲವಾಗಬೇಕು ಅಂದಾಗ ಮಾತ್ರ ದೇಶ ಸದೃಢವಾಗಲು ಸಾಧ್ಯವೆಂದು ಹೇಳಿದರು.

ಹುಟ್ಟುವ ಪ್ರತಿ ಮಗುವು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯಪೂರ್ಣವಾಗಿರಬೇಕು. ಅಂದಾಗ ಮಾತ್ರ ಆ ಮಗು ದೇಶದ ಮಾನವ ಸಂಪನ್ಮೂಲವಾಗಲು ಸಾಧ್ಯ. ಪ್ರತಿಯೊಬ್ಬ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಂದ ಕೊಡುವ ಪೌಷ್ಟಿಕ ಆಹಾರದ ಸದುಪಯೋಗ ಪಡೆಯಬೇಕು ಹೊರಗಡೆ ಸಿಗುವ ರಾಸಾಯನಿಕಯುಕ್ತ ಆಹಾರ ಸೇವನೆ ಬೇಡ ಅದು ಮುಂದೆ ಹುಟ್ಟವ ಮಗುವಿನ ಮೇಲೆ ಪರಿಣಾಮ ಬಿರುತ್ತದೆ ಎಂದು ಹೇಳಿದರು.

ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿದ್ದ ರಾವೂರ ಗ್ರಾ. ಪಂ ಪಿಡಿಓ ಕಾವೇರಿ ರಾಠೋಡ, ಗ್ರಾಮ ಲೆಕ್ಕಾಧಿಕಾರಿ ಶಿಲ್ಪಾ ಸಿಂಪಿ, ಶಿಕ್ಷಕ ಸಿದ್ದಲಿಂಗ ಬಾಳಿ ಮಾತನಾಡಿದರು. ಮಾಜಿ ಗ್ರಾ. ಪಂ ಅಧ್ಯಕ್ಷ ರಾಮಚಂದ್ರ ರಾಠೋಡ, ಮೋಹನ ಸೂರೇ ವೇದಿಕೆಯ ಮೇಲಿದ್ದರು.

ಶಹಾಬಾದ ವಲಯ ಮೇಲ್ವಿಚಾರಕಿ ಶಕುಂತಲಾ ಸಾಕರೇ ಕಾರ್ಯಕ್ರಮದ ಉದ್ದೇಶ ಹಾಗೂ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಫಲಾನುಭವಿಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಐವರು ಗರ್ಭಿಣಿ ಮಹಿಳೆಯರಿಗೆ ಸೀಮಂತದ ಸಂಪ್ರದಾಯ ನೆರವೇರಿಸಲಾಯಿತು. ಸಾಂಕೇತಿಕವಾಗಿ ಮೂರು ಮಕ್ಕಳಿಗೆ ಅನ್ನ ಪ್ರಾಶಾಸನ ಮಾಡಿಸಲಾಯಿತು.

ಕಾರ್ಯಕ್ರಮದಲ್ಲಿ ರಾವೂರ ಗ್ರಾ. ಪಂ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳೆಯರು ಗರ್ಭಿಣಿಯರು, ಬಾಣಂತಿಯರು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪೋಷಕಾಂಶದ ಅರಿವು ಮೂಡಿಸಲು ವಿವಿಧ ತಹರೆವಾರಿ ತರಕಾರಿ ಹಣ್ಣುಗಳು ಕಾಳುಗಳು ಮತ್ತು ಆಹಾರವನ್ನು ಪ್ರದರ್ಶಿಸಲಾಯಿತು.

Spread the love

Leave a Reply

Your email address will not be published. Required fields are marked *

error: Content is protected !!