ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯ ಎಣಿಕೆ: 28 ಲಕ್ಷ ಜಮೆ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯನ್ನು ಶುಕ್ರವಾರ ಸೇಡಂನ ಸಹಾಯಕ ಆಯುಕ್ತ ಕಾರ್ಯಲಯದ ತಹಸೀಲ್ದಾರ ನಾಗನಾಥ ತರಗೆ ಅವರ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.
ಕಲ್ಯಾಣ ಕರ್ನಾಟಕದ ಪ್ರಸಿದ್ದ ರೇವಗ್ಗಿ (ರಟಕಲ್) ನ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ರಾಜ್ಯ ಸೇರಿದಂತೆ ಹೊರ ರಾಜ್ಯದಿಂದಲೂ ಅಪಾರ ಭಕ್ತರು ಆಗಮಿಸುತ್ತಾರೆ. ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಹುಂಡಿಯನ್ನು ವರ್ಷದಲ್ಲಿ ಎರಡು ಬಾರಿ ಎಣಿಕೆ ಮಾಡಲಾಗುತ್ತದೆ. ಹುಂಡಿಯಲ್ಲಿ ಭಕ್ತರು ಹಾಕಿದ ಕಾಣಿಕೆಯ ಮೊತ್ತ ಒಟ್ಟು 28 ಲಕ್ಷ 55 ಸಾವಿರ 710 ರೂ. ಗಳು, ಹಾಗೂ 32 ಗ್ರಾಂ ಬಂಗಾರ, 1 ಕೆಜಿ 415 ಗ್ರಾಂ ಬೆಳ್ಳಿ ಜಮೆಯಾಗಿದೆ ಎಂದು ತಿಳಿಸಿದರು.
ಹುಂಡಿಯಲ್ಲಿ ಸಂಗ್ರಹವಾದ ನಗದು ಹಣವನ್ನು ರೇವಗ್ಗಿಯ ಕರ್ನಾಟಕ ಗ್ರಾಮೀಣ ಬ್ಯಾಂಕನ ದೇವಸ್ಥಾನ ಖಾತೆಗೆ ಜಮಾ ಮಾಡಲಾಗಿದೆ, ಬಂಗಾರ, ಬೆಳ್ಳಿಯನ್ನು ದೇವಸ್ಥಾನದ ಟ್ರೆಜರಿಯಲ್ಲಿ ಇಡಲಾಗಿದೆ ಎಂದು ತಿಳಿಸಿದರು.
27 ಸೆಪ್ಟೆಂಬರ್ 2024 ರಿಂದ ಇಲ್ಲಿಯವರೆಗೆ ಸುಮಾರು ಆರು ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಗಿದೆ.
ಸೇಡಂ ಸಹಾಯಕ ಆಯುಕ್ತರ ಕಾರ್ಯಲಯದ ತಹಸೀಲ್ದಾರ್ ನಾಗನಾಥ ತರಗೆ, ಕಾಳಗಿ ತಹಸೀಲ್ ಕಾರ್ಯಲಯದ ಶಿರಸ್ತೇದಾರ ಮಾಣಿಕ ಘತ್ತರಗಿ, ಕಾಳಗಿ ಕಂದಾಯ ನಿರೀಕ್ಷಕ ಮಂಜುನಾಥ ಮಹಾರುದ್ರ, ಸೇಡಂ ಸಹಾಯಕ ಆಯುಕ್ತರ ಕಾರ್ಯಲಯದ ಎಸ್‌ಡಿಸಿ ಹೇಮಂತ ಜಗತಪ್ಪ, ಗ್ರಾಮ ಆಡಳಿತ ಅಧಿಕಾರಿ ಸಂತೋಷ ಮಾನವಿಕರ್, ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ ಕಾರ್ಯದರ್ಶಿ ಸದಾಶಿವ ವಗ್ಗೆ, ಕೋರವಾರ ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗ ಕ್ಷೇಮಶೆಟ್ಟಿ ಇದ್ದರು.