ಸಾಲಹಳ್ಳಿ: ಮೇ. 25 ರಂದು ಬೀರಲಿಂಗೇಶ್ವರ ದೇವಸ್ಥಾನದ ಲೋಕಾರ್ಪಣೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ಸಾಲಹಳ್ಳಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರ ಖಳಸಾರೋಹಣ ಕಾರ್ಯಕ್ರಮ ಮೇ. 25 ರಂದು ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಪ್ರಧಾನ ವಿಶ್ವನಾಥ ಪೂಜಾರಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೇ. 21ರಿಂದ ಪ್ರಾರಂಭಗೊಂಡ ವಿವಿಧ ಪೂಜೆ ಪ್ರವಚನ ಕಾರ್ಯಕ್ರಮಗಳು ಮೇ.25 ರಂದು ಬೆಳಿಗ್ಗೆ 6.ಕ್ಕೆ ಶಾಂತಿ ಹೋಮ ಹವನ ವಿವಿಧ ಬಗೆಯ ಪೂಜೆ ಸಲ್ಲಿಸುವರು. ನಂತರ 9.30ಕ್ಕೆ ಬೀರಲಿಂಗೇಶ್ವರ ದೇವಸ್ಥಾನದ ಮೂಲ ಮೂರ್ತಿಗೆ ಭರತನೂರ ಚಿಕ್ಕ ಗುರುನಂಜೇಶ್ವರ ಶ್ರೀಗಳ ನೇತೃತ್ವದಲ್ಲಿ ವಿವಿಧ ಅಭಿಷೇಕ ಪೂಜೆ ಸಲ್ಲಿಸಿ, ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನ ಲೋಕಾರ್ಪಣೆ ಹಾಗೂ ಗೋಪುರ ಶಿಖರ ಕಳಸಾರೋಹಣ ನೆರವೇರಿಸುವರು ಎಂದು ತಿಳಿಸಿದ್ದಾರೆ.
ಭರತನೂರ ಪಜ್ಯರ ನೇತೃತ್ವದಲ್ಲಿ ಧರ್ಮಸಭೆ, ಪ್ರಸಾದ ವ್ಯವಸ್ಥೆ ನಡೆಯುತ್ತದೆ. ದೇವರ ಪಲ್ಲಕ್ಕಿ ಉತ್ಸವ ದೇವಸ್ಥಾನಕ್ಕೆ ತಲುಪಿದ ನಂತರ ಹಣಮಂತ ಮಲ್ಲಿಕಾರ್ಜುನ ಪೂಜಾರಿ ರವರ ನೇತೃತ್ವದಲ್ಲಿ ಬೀರಲಿಂಗೇಶ್ವರ ಕಿರು ನಾಟಕ ಪ್ರದರ್ಶನಗೊಳ್ಳಲಿದೆ. ಸಾಲಹಳ್ಳಿ ಗ್ರಾಮಸ್ಥರು ಹಾಗೂ ಬೀರಲಿಂಗೇಶ್ವರ ಭಕ್ತರ ಬಳಗದಿಂದ ನಿರ್ಮಿಸಲಾದ ದೇವಸ್ಥಾನದ ಐತಿಹಾಸಿಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ನಾಡಿನ ಹರಗುರು ಚರಮೂರ್ತಿಗಳು, ರಾಜಕೀಯ ಧುರೀಣರು ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.