Oplus_0

ಸನ್ನತಿಯಲ್ಲಿ ನಾಲ್ಕನೇ ವರ್ಷದ ಬೇಸಿಗೆ ವೈದಿಕ ಸಂಸ್ಕಾರ ಶಿಬಿರ ಏಪ್ರಿಲ್ 10 ರಿಂದ ಪ್ರಾರಂಭ: ಜಗದೀಶ್ ಶಾಸ್ತ್ರಿಗಳು

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಸನ್ನತಿಯ -ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ ಸಂಸ್ಥೆ (ರಿ )ಗುರುಕುಲ ವತಿಯಿಂದ ಪ್ರತಿ ವರ್ಷ (ಮೂರು ವರ್ಷಗಳಿಂದ) ಜಂಗಮ ವಟುಗಳಿಗೆ ವೈದಿಕ ಸಂಸ್ಕಾರ ಶಿಬಿರವನ್ನು ಊರಿನ ಗುರು ಹಿರಿಯರ, ದಿಗ್ಗಾಂವ ಶ್ರೀ ಸಿದ್ದವೀರ ಶಿವಾಚಾರ್ಯರು, ನಾಲವಾರ ಶ್ರೀ ಡಾ.ಸಿದ್ದತೋಟೇಂದ್ರ ಮಹಾಸ್ವಾಮಿಗಳ ಹಾಗೂ ಮಳಖೇಡ ಶ್ರೀಗಳ ಆಶೀರ್ವಾದದಿಂದ ನಾಲ್ಕನೇ ವರ್ಷದ ಬೇಸಿಗೆ ಸಂಸ್ಕಾರ ಶಿಬಿರ ಬರುವ ಏಪ್ರಿಲ್ 10 ರಿಂದ ಪ್ರಾರಂಭವಾಗುತ್ತಿದೆ ಎಂದು ಗುರುಕುಲದ ಮೇಲ್ವಿಚಾರಕ ಜಗದೀಶ್ ಶಾಸ್ತ್ರಿಗಳು ಸನ್ನತಿ ತಿಳಿಸಿದ್ದಾರೆ.

ಗುರುಕುಲವು ಪ್ರಾಚೀನ ಭಾರತೀಯ ಶಿಕ್ಷಣ ಪದ್ದತಿಯಾಗಿದೇ, ವಿದ್ಯಾರ್ಥಿಗಳು ತಮ್ಮ ಗುರುಗಳ ಮನೆಯಲ್ಲಿ ಅಥವಾ ಆಶ್ರಮದಲ್ಲಿ ವಾಸಿಸುತ್ತಾ, ವಿದ್ಯೆ ಜೀವನ ಕಲಿಯುತ್ತಿರುವ ಸಂಸ್ಕಾರ ಪದ್ದತಿ ಭಾರತೀಯರಲ್ಲಿ ಪಾರಂಪರಿಕವಾಗಿ ಬಂದದ್ದು ಎಲ್ಲರಿಗೂ ತಿಳಿದ ವಿಷಯವೇ ಆಗಿದು, ಪದ್ಧತಿಯಲ್ಲಿ ಶಿಸ್ತುಬದ್ಧವಾದ ದಿನಚರಿ, ವೇದ, ಸಂಸ್ಕೃತ ಅಧ್ಯಯನ, ಮತ್ತು ಸಂಸ್ಕೃತಿಕ ಕಲೆಗಳು, ಕ್ರೀಡೆಗಳಂತಹ ಸರ್ವಾಂಗೀಣ ವಿಕಾಸಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಗುರುಕುಲ ಪದ್ದತಿಯ ಮುಖ್ಯ ಅಂಶಗಳು ಇದು ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವೆ ನಿಕಟ ಸಂಬಂಧವನ್ನು ಮೂಡಿಸುವುದು, ಕೇವಲ ಶೈಕ್ಷಣಿಕ ವಿಷಯಗಳಿಗೆ ಮಾತ್ರವಲ್ಲದೆ, ನೈತಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೂ ಒತ್ತು ನೀಡಲಾಗುತ್ತದೆ ಯೋಗ ವಿದ್ಯಾರ್ಥಿಗಳು ಕೃಷಿಗಾರಿಕೆ ಮತ್ತು ಇತರ ಶ್ರಮದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಶ್ರಮ ಗೌರವದ ಆದರ್ಶವನ್ನು ಬೆಳೆಸುತ್ತದೆ. ಗುರುಕುಲದ ದಿನಚರಿಯು ಶಿಸ್ತಿನಿಂದ ಕೂಡಿದ್ದು, ಬೆಳಗಿನ ಪ್ರಾರ್ಥನೆ ಯೋಗ, ಧ್ಯಾನ ಅಧ್ಯಯನ, ಮಧ್ಯಾಹ್ನ ಆಟ ವಿಶ್ರಾಂತಿ ಅಥವಾ ವಸ್ತ್ರಗಳು ಸ್ವಚ್ಛಗೊಳಿಸುವಿಕೆ, ಸಂಜೆಯ ಚಟುವಟಿಕೆ ಸಂಜೆ ಪ್ರಾರ್ಥನೆ ದೇಶದ ಆಚರಣೆಗಳ ವಿಚಾರ ನೈತಿಕ ಕಥೆಗಳು, ಹಾಸ್ಯ ಕಥೆಗಳು ಕಾರ್ಯಕ್ರಮ ಒಳಗೊಂಡಿರುತ್ತೆ. ಶ್ರೀ ಗುರು ಸೋಮೇಶ್ವರ ವೈದಿಕ ಜ್ಯೋತಿ-ಸಂಸ್ಥೆ ಗುರುಕುಲದ ಪದ್ಧತಿಯಲ್ಲಿ ಬೇಸಿಗೆ ಎರಡು ತಿಂಗಳ ಬೇಸಿಗೆ ಸಂಸ್ಕಾರ ಶಿಬಿರ ಮೂರು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ 7829457156 ಸಂಪರ್ಕಿಸಬಹುದು ಎಂದು ಜಗದೀಶ್ ಶಾಸ್ತ್ರಿಗಳು ಮಾಹಿತಿ ನೀಡಿದ್ದಾರೆ.

“ಏಪ್ರಿಲ್ 10 ರಿಂದ ಮೇ 25 ವರೆಗೆ ಸನ್ನತಿಯ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಜಂಗಮ ವಟುಗಳಿಗೆ 4ನೇ ವರ್ಷದ ಧಾರ್ಮಿಕ ಸಂಸ್ಕಾರ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ, ಇಚ್ಛೆಯುಳ್ಳ ಜಂಗಮ ಗುರುಬಂಧುಗಳು ತಮ್ಮ ಮಕ್ಕಳ ಹೆಸರನ್ನು ಏಪ್ರಿಲ್ 1ರ ಒಳಗಾಗಿ ನೋಂದಾಯಿಸಬೇಕು”.-ಜಗದೀಶ್ ಶಾಸ್ತ್ರಿಗಳು ಸನ್ನತಿ.

Spread the love

Leave a Reply

Your email address will not be published. Required fields are marked *

error: Content is protected !!