ಸೇಡಂ ಹಾಸ್ಟೆಲ್ ಕಾರ್ಮಿಕರ ತಾಲೂಕು ಮಟ್ಟದ ಸಮಾವೇಶ, ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟವನ್ನು ಕಟ್ಟಬೇಕು: ದೇಸಾಯಿ
ನಾಗಾವಿ ಎಕ್ಸಪ್ರೆಸ್
ಸೇಡಂ: ವೈಚಾರಿಕವಾಗಿ ಹಾಗೂ ಸಂಘಟನಾತ್ಮಕವಾಗಿ ಬೆಳೆಯದಿರುವುದೇ ದುಡಿಯುವ ಜನಗಳ ಇಂದಿನ ಸಮಸ್ಯೆಗೆ ಕಾರಣವಾಗಿದೆ, ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟವನ್ನು ಕಟ್ಟಬೇಕು ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷ ವಿ.ಜಿ. ದೇಸಾಯಿ ಹೇಳಿದರು.
ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಾಸ್ಟೆಲ್ ಕಾರ್ಮಿಕರಿಗೆ ಜೀವನ ಯೋಗ್ಯ ವೇತನ, ಸೇವಾ ಭದ್ರತೆ, ಶಾಸನಬದ್ದ ಸೌಲಭ್ಯಗಳಿಗೆ ಆಗ್ರಹಿಸಿ, ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ತಾಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳಾದ ವೇತನ ಕಡಿತ, ಇಎಸ್ಐ, ಈಪಿಎಫ್, ಹಣ ಕಡಿತ, ಕನಿಷ್ಠ ವೇತನ 35950 ರೂ. ನಿಗದಿ ಮಾಡಬೇಕು, ಶಾಸನಬದ್ದ ಸೌಲಭ್ಯಗಳು ವದಗಿಸಬೇಕು, ಜೀತ ಪದ್ಧತಿಯಂತೆ ವರ್ಷಾನುಗಟ್ಟಲೆ ದುಡಿಯುತ್ತಿರುವ ಹಾಸ್ಟೆಲ್ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಹಾಸ್ಟೆಲ್ ಕಾರ್ಮಿಕ ಸಂಘದ ಜಿಲ್ಲಾ ಅಧ್ಯಕ್ಷ ರಾಘವೇಂದ್ರ ಎಂ.ಜಿ ಮಾತನಾಡಿ, ರಾಜಕೀಯ ಮಂತ್ರಿಗಳು, ಶಾಸಕರು, ತಮ್ಮ ಸಂಭಳವನ್ನು ಹೆಚ್ಚಿಸಿಕೊಳ್ಳಲು ಹಾತೋರಿಯುತ್ತಾರೆ ಹೊರತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಸಮಸ್ಯೆಗಳನ್ನು ಯಾವುದೇ ರಾಜಕೀಯ ಪಕ್ಷಗಳು ಗಮನಹರಿಸದೆ ಇರೋದು ವಿಪರ್ಯಾಸ. ಆದ್ದರಿಂದ ಕಾರ್ಮಿಕರೇ ಬಿದಿಗಿಳಿದು ನಮ್ಮ ಹಕ್ಕಿಗಾಗಿ ಹೋರಾಟವನ್ನು ಕಟ್ಟಬೇಕು ಎಂದು ಕರೆಕೊಟ್ಟರು.
ಹಾಸ್ಟೆಲ್ ಕಾರ್ಮಿಕರಾದ ಸಾಬಣ್ಣ ರಂಜೋಳ, ಶೇಖರ್ ಗಾಳನೂರ, ರಮೇಶ್ ಕೊಲಕುಂದ, ನೆಹಮತ್ ಮುಧೋಳ್, ಜಹಿರ್ ಸೇಡಂ, ಚಂದಪ್ಪ ಸೇಡಂ, ಅಶೋಕಕುಮಾರ್ ಅಂಬಲಗಾ, ಸುನೀಲಕುಮಾರ್ ಕೇಶ್ವರ್, ನರಸಿಂಹ ನಾಮಲ್ಲಿ, ಸಾವಿತ್ರಿ, ಸಂಗಮ್ಮ, ಶಿವಮ್ಮ, ವಿಜಯಲಕ್ಷ್ಮಿ, ಕಾಶಿಬಾಯಿ, ವಿಮಲಾಭಾಯಿ, ಲಕ್ಷ್ಮಿಭಾಯಿ, ನರಸಮ್ಮ, ಸಂಜುವಪ್ಪ ಇಠಕಲ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯಧರ್ಶಿ ಶರಣು ಹೇರೂರ್, ಬಸವರಾಜ್ ಹುಳಗೊಳ ಮಾತನಾಡಿದರು. ಪವನ್ ಕೊಡ್ಲಾ ನಿರೂಪಿಸಿದರು, ಗೀತಾ ರಾಠೋಡ್ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸೇಡಂ ತಾಲೂಕಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ಅಧ್ಯಕ್ಷರಾಗಿ ಬಸವರಾಜ ಹುಳುಗೋಳ್, ಉಪಾಧ್ಯಕ್ಷರಾಗಿ ನೇಮತ್ ಮುಧೋಳ್, ಸಂಗಮ, ರಮೇಶ್ ಕೊಲಕುಂದ, ಕಾರ್ಯದರ್ಶಿಗಳಾಗಿ ಪವನ್ ಕುಮಾರ್ ಬೆನಕನಲ್ಲಿ, ಜಂಟಿ ಕಾರ್ಯದರ್ಶಿಯಾಗಿ ಅಶೋಕ ಕುಮಾರ್ ಅಂಬಲಗಿ, ಸದಸ್ಯರಾಗಿ ಶೇಖರ್ ಗಾಳನುರ, ಮಲ್ಲಮ್ಮ ರಂಜೋಳ, ವಿಮಲಾಬಾಯಿ, ಚಂದು ಸೇಡಂ, ಶಿವಮ್ಮ ಕೋಲ್ಕುಂದ್, ಸಾವಿತ್ರಮ್ಮ, ಸುಮಿತ್ರ, ಸರೋಜಾ, ಮೊಮ್ಮದ್ ಜಹೀರ್ ಸೇಡಂ, ಕಾಶಿಬಾಯಿ, ಶರಣಮ್ಮ, ಲಕ್ಷ್ಮೀಬಾಯಿ, ವಿಜಯಲಕ್ಷ್ಮಿ ಮಲಖೇಡ, ಪ್ರೇಮಾ, ಶಾರದಾ, ನಾಗೇಂದ್ರಪ್ಪ, ಸುನೀಲಕುಮಾರ್ ಕೇಶ್ವರ್, ನರ್ಸಿಂಗ್ ನಮಲ್ಲಿ, ಗೀತಾ ರಾಠೋಡ ಅವರನ್ನು ಆಯ್ಕೆಮಾಡಲಾಯಿತು.