ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ, ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವೆ: ಪೀರಮ್ಮ ಪಗಲಾಪುರ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನಗರಸಭೆಯ ಸ್ಥಾಯಿ ಸಮಿತಿ ನೂತನ ಅಧ್ಯಕ್ಷೆ ಪೀರಮ್ಮ ಬಿ. ಪಗಲಾಪುರ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು.
ನೂತನ ಅಧ್ಯಕ್ಷೆ ಪೀರಮ್ಮ ಪಗಲಾಪುರ ರವರು ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅವರು, ನಗರ ಸಭೆಯ ಎಲ್ಲ 27 ವಾರ್ಡ್ ಗಳಲ್ಲಿನ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ನಗರದ ಸಮಸ್ಯೆಗಳ ನಿವಾರಣೆಗೆ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಭೇದ ಭಾವವಿಲ್ಲದೆ ಕೆಲಸ ಮಾಡೋಣ, ಎಲ್ಲರೂ ಸೇರಿ ಆಡಳಿತಕ್ಕೆ ಸಹಕಾರ ನೀಡುವಂತೆ ಕೋರಿದರು. ಮತ್ತು ನನ್ನನ್ನು ಬೆಂಬಲಿಸಿದ ನಗರ ಸಭೆಯ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸರ್ವ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನನ್ನು ಸ್ಥಾಯಿ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಎಂದರು.
ಜಿಲ್ಲಾ ಕಾಡಾ ನಿಗಮದ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ. ಎಂ.ಎ ರಶೀದ್ ರವರು ಸ್ಥಾಯಿ ಸಮಿತಿ ಅಧ್ಯಕ್ಷರ ಕೊಠಡಿಯನ್ನು ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು.
ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಹಾಗೂ ವಿವಿಧ ಪಕ್ಷಗಳ ಮತ್ತು ಸಮಾಜದ ಮುಖಂಡರು, ಕಾರ್ಯಕರ್ತರು, ನಗರಸಭೆ ಸಿಬ್ಬಂದಿ ಸನ್ಮಾನಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಚಂಪಾಬಾಯಿ ರಾಜು ಮೇಸ್ತ್ರಿ, ಉಪಾಧ್ಯಕ್ಷೆ ಫಾತಿಮಾ ಬೇಗಂ ಬಾಕ್ರೋದ್ದಿನ, ವಿಜಯಕುಮಾರ ಮುತ್ತಟ್ಟಿ, ಸುರೇಶ ನಾಯಕ, ಶರಣಗೌಡ ಪಾಟೀಲ, ಮೃತ್ಯುಂಜಯ ಹಿರೇಮಠ, ವಿಶ್ವರಾಧ್ಯ ಬಿರಾಳ, ನಗರ ಸಭೆ ಸದಸ್ಯರಾದ ಸಾಬೇರಾ ಬೇಗಂ, ಪಾರ್ವತಿ ಪವಾರ, ನಾಗರಾಜ ಕರಣಿಕ, ವಾಜೀದ ಖಾನ, ಜಗದೇವ ಸುಬೇದಾರ ಮತ್ತು ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿ, ಯುವ ಅಧ್ಯಕ್ಷ ಕಿರಣ ಚಹ್ವಾನ, ಒಬಿಸಿ ಅಧ್ಯಕ್ಷ ನಾಗೇಂದ್ರ ನಾಟೇಕರ, ಮಹ್ಮದ ಮಸ್ತಾನ, ಮಹ್ಮದ ಇಮ್ರಾನ, ಮ. ಅಜರ ಬಾದಲ, ವಸಂತ ಕಾಂಬಳೆ ಮತ್ತು ಬಿಎಸಪಿ ಯ ಗೋವಾ ಬಾಬು, ಸಿಬ್ಬಂದಿಗಳಾದ ವ್ಯವಸ್ಥಾಪಕ ಶರಣಗೌಡ, ಸಾಬಣ್ಣ ಸುಂಗಲಕರ, ನಾರಾಯಣ ರೆಡ್ಡಿ, ಹಣಮಂತ ಅಕೌಂಟೆಂಟ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.