ರಾಯಚೋಟಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಮಾ.1 ರಂದು ಅಗ್ನಿ ಪ್ರವೇಶ, 2 ರಂದು ಮಹಾ ರಥೋತ್ಸವ
ನಾಗಾವಿ ಎಕ್ಸಪ್ರೆಸ್
ಶಹಾಬಾದ: ನೆರೆ ರಾಜ್ಯವಾದ ಆಂದ್ರಪ್ರದೇಶದ ಕಡಪಾ ಜಿಲ್ಲೆಯ ರಾಯಚೋಟಿ ಶ್ರೀ ವೀರಭದ್ರೇಶ್ವರ ರ ಜಾತ್ರೆ ಮಹೋತ್ಸವವು ಮಾ. 1 ರಂದು ಶನಿವಾರ ಅಗ್ನಿ ಪ್ರವೇಶ ಹಾಗೂ ಮಾ. 2 ರಂದು ರವಿವಾರ ಮಹಾ ರಥೋತ್ಸವ ಜರುಗುವದು ಎಂದು ರಾಯಚೋಟಿ ಶ್ರೀ ವೀರಭದ್ರೇಶ್ವರ ಆರಾದಕರಾದ ಪೂಜ್ಯ ಶ್ರೀ ಶಂಕ್ರಯ್ಯ ಸ್ವಾಮಿಗಳು ತಿಳಿಸಿದ್ದಾರೆ.
ಈ ಜಾತ್ರಾ ಮಹೋತ್ಸವದಲ್ಲಿ ಶಹಾಬಾದ ತಾಲೂಕಿನ ವತಿಯಿಂದ ವಿಶೇಷವಾಗಿ ಪುರುವಂತ ಸೇವೆಗಳು ನಡೆಯಲಿವೆ, ಪುರವಂತರಾದ ಸೊನ್ನದ ಸಂಗಯ್ಯ ಸ್ವಾಮಿ, ಲಕ್ಷ್ಮೀಕಾಂತ ಕಣದಾಳ ಮತ್ತು ಅಶೋಕ ಕನ್ಯಾಕೊಳುರ ರವರಿಂದ 12 ಅಡಿ ಶಸ್ತ್ರ ಸೇವೆ ಹಾಗೂ ಮಲ್ಲಿನಾಥ ಮರತೂರ ಅವರಿಂದ 1008 ಅಡಿ ಹಗ್ಗದ ಪುರುವಂತರ ಸೇವೆ ಸಲ್ಲಿಸುವರು.
ಈ ಜಾತ್ರೆಗೆ ವಿಶೇಷವಾಗಿ ಯಡ್ರಾಮಿ, ರಾವೂರು ಮತ್ತು ಶಹಾಬಾದ ತಾಲೂಕಿನ ಶ್ರೀ ರಾಯಚೋಟಿ ವೀರಭದ್ರೇಶ್ವರ ದೇವಸ್ಥಾನದ ಭಕ್ತರ ವತಿಯಿಂದ ಮೇಳದಲ್ಲಿ ಪುರವಂತರು ಮತ್ತು ಭಕ್ತರ ವಿಶೇಷ ಸೇವೆ ಸಲ್ಲಿಸಿದ್ದಾರೆ ಎಂದರು.
ಶಹಾಬಾದಿನ ಮೋನಪ್ಪ ತೆಲಗಬಾಳ, ಗೋಳಾ ಗ್ರಾಮದ ಶಂಭು ನಾಯ್ಕಲ, ರಾವೂರಿನ ಜಗದೀಶ ದೇಸಾಯಿ, ಮಲ್ಲಿಕಾರ್ಜುನ ದೇಸಾಯಿ, ಚೆನ್ನಪ್ಪ ದೇಸಾಯಿ, ಗ್ರಾ. ಪಂ. ಮಾಜಿ ಅಧ್ಯಕ್ಷ ದೇವೇಂದ್ರ, ಹಾಗೂ ಮಲ್ಲಿಕಾರ್ಜುನ ಹಳ್ಳಿ, ಬಾಬುರಾವ ಭೈರಾಮಡಗಿ, ಅಪ್ಪುಗೌಡ ಬೈರಾಮಡಗಿ, ರಾಜಣ್ಣ ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಲಿದ್ದಾರೆ.
ಕಾರಣ ಶ್ರೀ ರಾಯಚೋಟಿ ವೀರಭದ್ರೇಶ್ವರ ರನ್ನ ಮನೆ ದೇವರಾಗಿ ಪೂಜಿಸುವ ಪ್ರತಿಯೊಬ್ಬರು ಈ ಜಾತ್ರಾ ಮಹೋತ್ಸವದಲ್ಲಿ, ವಿಶೇಷವಾಗಿ ತಾಲೂಕಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ವೀಭದ್ರೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.