Oplus_0

ಸಿದ್ದಸಿರಿ ಕಾರ್ಖಾನೆಯಿಂದ ರೈತರಿಗೆ ಅನ್ಯಾಯ: ಜಮಾದಾರ ಆರೋಪ

ನಾಗಾವಿ ಎಕ್ಸಪ್ರೆಸ್ 

ಚಿಂಚೋಳಿ: ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ ರೂ.3300 ನಿಗದಿಗೊಳಿಸಿದರೂ ಕೂಡ ಚಿಂಚೋಳಿಯ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಮಾತ್ರ ಪ್ರತಿ ಟನ್ ಕಬ್ಬಿಗೆ ರೂ.2550 ರೈತರ ಖಾತೆಗೆ ಜಮಾ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಜವಾಹರ್ ಬಾಲ ಭವನ ಉಪಾಧ್ಯಕ್ಷ ಅನೀಲಕುಮಾರ ಜಮಾದಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳದ ಬಸವನಗೌಡ ಯತ್ನಾಳ್ ಅವರೇ ಕಾರ್ಖಾನೆ ಪ್ರಾರಂಭ ಮಾಡುವಾಗ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ನೂರು ರೂಪಾಯಿ ಜಾಸ್ತಿ ಕೊಟ್ಟು ಕಬ್ಬು ಖರೀದಿಸುತ್ತೇನೆ ಎಂದು ಹೇಳಿದ್ದಿರಿ, ಎಲ್ಲಿದೆ ನಿಮ್ಮ ಆ ಆವೇಶದ ಮಾತು, ಸಿದ್ಧಸಿರಿ ಕಾರ್ಖಾನೆ ಪ್ರಾರಂಭ ಮಾಡಲು ಹೋರಾಟ ಮಾಡಿದ ಪ್ರಾಯೋಜಿತ ನಕಲಿ ಹೋರಾಟಗಾರರೇ ಎಲ್ಲಿದ್ದೀರಿ? ರೈತರಿಗೆ ಅನ್ಯಾಯವಾಗುತ್ತಿದೆ ಇಂಥ ಸಮಯದಲ್ಲಿ ಹೋರಾಟ ಮಾಡದೆ ಯಾವ ಬಿಲದಲ್ಲಿ ಅಡಗಿ ಕುಳಿತ್ತಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ತಾಲೂಕಿನ ಶಾಸಕರು ಮಾಜಿ ಸಂಸದರು ಬಿಜೆಪಿ ಪಕ್ಷದ ನಾಯಕರು ಎಲ್ಲಿದ್ದೀರಿ, ಎಥೆನಾಲ್ ಕಾರ್ಖಾನೆ ಪ್ರಾರಂಭ ಮಾಡಬೇಕು ಎಂದು ಹೋರಾಟ ಮಾಡುವಾಗ ಇದ್ದ ನಿಮ್ಮ ಪೌರುಷ ಈಗ ರೈತರಿಗೆ ಅನ್ಯಾಯವಾಗುವಾಗ ಕಾರ್ಖಾನೆ ವಿರುದ್ದ ಒಂದೇ ಒಂದು ಮಾತನಾಡದೆ ಬಾಯಿ ಮುಚ್ಚಿಕೊಂಡು ಕುಳಿತ್ತಿದ್ದೀರಿ. ಅಂದರೆ ನಿಮ್ಮ ಹೋರಾಟ ರೈತ ಪರವಾಗಿರದೆ ಕಾರ್ಖಾನೆಯ ಯಜಮಾನರ ಪರವಾಗಿ ಇತ್ತು ಎಂದು ಒಪ್ಪಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ.

ಯತ್ನಾಳ್ ಅವರೇ ನಮ್ಮ ಕಾರ್ಖಾನೆಯ ಮುಂದೆ ರಾಜಕೀಯ ನಾಯಕರ ಚಪ್ಪಲಿ ಬಿಡಲು ಕೊಡುವುದಿಲ್ಲ ಎಂದು ಹೇಳಿದ್ದಿರಿ. ನೀವು ಹೇಳಿದ ಮಾತಿನಂತೆ ನಡೆದುಕೊಂಡರೆ ಯಾರು ನಿಮ್ಮ ಬಳಿ ಚಪ್ಪಲಿ ಬಿಡಲು ಬರಲ್ಲ. ನೀವು ಮಾತಿಗೆ ತಪ್ಪಿದರೆ ಚಿಂಚೋಳಿಯ ಜನತೆ ನಿಮಗೆ ರಸ್ತೆಯ ಮೇಲೆ ತಂದು ನಿಲ್ಲಿಸುತ್ತಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!