Oplus_0

ಚಿತ್ತಾಪುರದಲ್ಲಿ ಯಶಸ್ವಿಗೊಂಡ ಸಂವಿಧಾನ ಸಮಾವೇಶ |  ಭಾರತ ದೇಶದ ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರು ದೇಶಭಕ್ತರಾಗಲು ಹೇಗೆ ಸಾಧ್ಯ: ಜ್ಞಾನ ಪ್ರಕಾಶ ಸ್ವಾಮೀಜಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಭಾರತ ದೇಶದ ಸಂವಿಧಾನಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವವರು ದೇಶಭಕ್ತರಾಗಲು ಹೇಗೆ ಸಾಧ್ಯ ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಖಾರವಾಗಿ ಪ್ರಶ್ನಿಸಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮಾವೇಶ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಭಾರತದ ಪ್ರಜೆಗಳಾದ ನಾವು ಎಂದು ಹೇಳಲಿಕ್ಕೆ ಆಗದವರು, ಸಂವಿಧಾನದ ಪ್ರತಿಗಳು ಸುಟ್ಟವರು, ಹರಿದು ಹಾಕಿದವರು, ತಿಪ್ಪೆಗೆ ಎಸೆಯಿರಿ ಎಂದವರು ದೇಶಪ್ರೇಮಿಗಳಾಗಲು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಮಾಡಿದರು.

ಈಗ ಜಾಗೃತರಾಗದಿದ್ದರೆ ಮತ್ತೇ 100 ವರ್ಷ ಹಿಂದೆ ಹೋಗಬೇಕಾಗುತ್ತದೆ. ದೇಶ ಉಳಿದಿದ್ದೇ ಸಂವಿಧಾನದಿಂದ ಹೀಗಾಗಿ ಎಲ್ಲರೂ ಸಂವಿಧಾನವನ್ನು ಒಪ್ಪಿಕೊಂಡು ಗೌರವಿಸಬೇಕು ಎಂದು ಹೇಳಿದರು. ಲಾಠಿ ಹಿಡಿಯುವ ಕೈಯಲ್ಲಿ ಪೆನ್ನು ಮತ್ತು ಸಂವಿಧಾನ ನೀಡಿ ಅಂದಾಗ ದೇಶ ಬದಲಾವಣೆ ಆಗಲಿದೆ ಎಂದರು.

ಸರ್ವಜನಾಂಗದ ಶಾಂತಿಯ ತೋಟಕ್ಕೆ ಹೆಸರಾದ ಚಿತ್ತಾಪುರ ಜನರು ಸಂಘರ್ಷಕ್ಕೆ ಅವಕಾಶ ನೀಡದೇ ಸಾಮರಸ್ಯಕ್ಕೆ ಅವಕಾಶ ಮಾಡಿಕೊಟ್ಟು ಈಡೀ ದೇಶಕ್ಕೆ ಸಂದೇಶ ನೀಡಿದಂತಾಗಿದೆ. ಜಾತಿ ಧರ್ಮದ ಹೆಸರಲ್ಲಿ ಬೆಂಕಿ ಹಚ್ಚುವುದು ಸಾಧ್ಯವಿಲ್ಲ ಎಂಬುದು ಚಿತ್ತಾಪುರದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ, ಪ್ರಜೆಗಳಿಗಾಗಿ ಇರುವುದು ಪ್ರಜಾಪ್ರಭುತ್ವ ಆದರೆ ಈಗ ಕೆಲವರಿಂದ, ಕೆಲವರಿಗೋಸ್ಕರ, ಕೆಲವರಿಗಾಗಿ ಆಗಿದೆ ಇದು ದೇಶಕ್ಕೆ ಅಪಾಯ ಎಂದರು.

ದೇಶ ಕಟ್ಟುವುದು ಸಂವಿಧಾನ ಮಾಡುತ್ತದೆ ಆದರೆ ದೇಶ ಒಡೆಯುವುದು ಮನುವಾದದ ಕೆಲಸ ಆಗಿದೆ. ಅಖಂಡ ಭಾರತಕ್ಕಾಗಿ ಸಂವಿಧಾನ ಇದೆ, ದೇಶವನ್ನು ಛಿದ್ರ ಛಿದ್ರವಾಗಿ ಮಾಡುವುದು ಮನುವಾದದ ಸಿದ್ಧಾಂತವಾಗಿದೆ, ದೇಶ ಕಟ್ಟುವ ಕೆಲಸಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ದೇಶ ಒಡೆಯುವ ಕೆಲಸಕ್ಕೆ ಬೆಂಬಲಿಸುವುದಿಲ್ಲ ಎನ್ನುವುದು ಚಿತ್ತಾಪುರ ಜನರು ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಬೆಲ್ದಾಳ ಸಿದ್ದರಾಮ ಶರಣರು, ವರಜ್ಯೋತಿ ಬಂತೇಜಿ ಮಾತನಾಡಿದರು. ಪೆದ್ದಿಮಠದ ಪಂಚಶೀಲ ಬೇಲೂರು, ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ಭೀಮ್ ಆರ್ಮಿ ಅಧ್ಯಕ್ಷ ಎಸ್.ಎಸ್ ತಾವಡೆ, ವಿವಿಧ ಸಮಾಜಗಳ ಅಧ್ಯಕ್ಷರಾದ ಬಸವರಾಜ ಹೊಸಳ್ಳಿ, ಭೀಮಸಿಂಗ್ ಚವ್ಹಾಣ, ಶಿವುಕುಮಾರ ಯಾಗಾಪೂರ, ನಿಂಗಣ್ಣ ಹೆಗಲೇರಿ, ಗೋವಿಂದ ಸಗರ, ಪ್ರಭು ಬೆಣ್ಣೂರ, ರಮೇಶ್ ಕೊಲ್ಲೂರು, ಮಲ್ಲಿಕಾರ್ಜುನ ಬೊಮ್ಮನಳ್ಳಿ, ನಾಗಯ್ಯ ಗುತ್ತೇದಾರ, ಶರಣು ಹೂಗಾರ, ಸಾಬಣ್ಣ ಲಾಡ್ಲಾಪೂರ, ಶಾಂತಣ್ಣ ಚಾಳೀಕಾರ, ಜಗಣ್ಣಗೌಡ ರಾಮತೀರ್ಥ ವೇದಿಕೆಯಲ್ಲಿದ್ದರು.

ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸುನೀಲ್ ದೊಡ್ಡಮನಿ, ಜಿಪಂ ಮಾಜಿ ಸದಸ್ಯರಾದ ಶಿವಾನಂದ ಪಾಟೀಲ, ಶಿವರುದ್ರಪ್ಪ ಭೀಣಿ, ಶಂಭುಲಿಂಗ ಗುಂಡಗುರ್ತಿ, ಮುಖಂಡರಾದ ಮುಕ್ತಾರ್ ಪಟೇಲ್, ಸುರೇಶ್ ಮೆಂಗನ್, ರಾಜೀವ್ ಜಾನೆ, ಮಲ್ಲಿಕಾರ್ಜುನ ಬೆಣ್ಣೂರಕರ್, ಲೋಹಿತ್ ಮುದ್ದಡಗಿ, ಮಲ್ಲಿಕಾರ್ಜುನ ಮುಡಬೂಳಕರ್, ಶ್ರೀಕಾಂತ್ ಶಿಂಧೆ, ಸಂಜಯ ಬುಳಕರ್, ಮಾರುತಿ ಹುಳಗೋಳಕರ್, ಸೂರಜ್ ಕಲ್ಲಕ್, ನಾಗರೆಡ್ಡಿ ಗೋಪಸೇನ್, ಜಯಪ್ರಕಾಶ್ ಕಮಕನೂರ, ಮಲ್ಲಿಕಾರ್ಜುನ ಕಾಳಗಿ, ಜಗದೀಶ್ ಚವ್ಹಾಣ, ದೇವಿಂದ್ರ ಜಡಿ, ಸೂರ್ಯಕಾಂತ ರದ್ದೇವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮರಿಯಪ್ಪ ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು, ದೇವಿಂದ್ರಪ್ಪ ಭಾಲ್ಕೆ ಭೀಮ ಗೀತೆ ಹಾಡಿದರು, ಮಲ್ಲಪ್ಪ ಹೊಸಮನಿ ಸ್ವಾಗತಿಸಿದರು, ಬಸವರಾಜ ಚಿನ್ನಮಳ್ಳಿ ನಿರೂಪಿಸಿದರು, ಬಸವರಾಜ ಹೊಸಳ್ಳಿ ವಂದಿಸಿದರು. ಎಎಸ್ಪಿ ಮಹೇಶ್ ಮೇಘಣ್ಣವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

Spread the love

Leave a Reply

Your email address will not be published. Required fields are marked *

error: Content is protected !!