ಸಿದ್ದಸಿರಿ ಸಕ್ಕರೆ ಕಾರ್ಖಾನೆ ಹೋರಾಟದಲ್ಲಿ ಬಿ.ವೈ.ವಿಜಯೇಂದ್ರ ಭಾಗವಹಿಸುವಂತೆ ಹಿಂದೂ ಜಾಗೃತಿ ಸೇನೆ ಮನವಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಲಬುರ್ಗಿಗೆ ಆಗಮಿಸಲಿದ್ದು ಚಿಂಚೋಳಿ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಹೋರಾಟದಲ್ಲಿ ಭಾಗವಹಿಸುವಂತೆ ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷ ಶಂಕರ ಚೋಕಾ ಮನವಿ ಮಾಡಿದ್ದಾರೆ.
ಕಲಬುರ್ಗಿ ಜಿಲ್ಲೆಗೆ ದಿನಾಂಕ 4 ಡಿಸೆಂಬರ್ 2024 ರಂದು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ನಾಳೆ ರೈತರ ಅಹವಾಲು ಸ್ವೀಕಾರಕ್ಕಾಗಿ ಹಾಗೂ ವಕ್ಫ್ ಬೋರ್ಡ್ ಹೋರಾಟಕ್ಕಾಗಿ ಕಲಬುರ್ಗಿ ಹಾಗೂ ಬೀದರ್ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದು ಅತಿ ಹಿಂದುಳಿದ ತಾಲೂಕು ಆದ ಚಿಂಚೋಳಿಯಲ್ಲಿ ಉಪಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿದ್ದು ತಮಗೆ ತಿಳಿದಿರುವ ವಿಷಯವಾಗಿದೆ.
ಇದರಿಂದ ಚಿಂಚೋಳಿ ಭಾಗದ ರೈತರಿಗೆ ತುಂಬಾ ತೊಂದರೆ ಆಗುತ್ತದೆ ಸುಮಾರು 25000 ಎಕ್ಕರೆ ಗಿಂತ ಹೆಚ್ಚು ಭೂಮಿಯಲ್ಲಿ ರೈತರು ಕಬ್ಬು ಬೆಳೆದಿದ್ದು ರಾಜಕೀಯ ದುರುದ್ದೇಶದಿಂದ ಸಚಿವ ಈಶ್ವರ್ ಖಂಡ್ರೆ ಅವರು ತಮ್ಮ ಕಾರ್ಖಾನೆಗೆ ಚಿಂಚೋಳಿ ಸಿದ್ಧಸಿರಿ ಕಾರ್ಖಾನೆ ಆಗಿದ್ದರಿಂದ ಕಬ್ಬು ಕಡಿಮೆ ಬರುತ್ತದೆ ಅಲ್ಲದೆ ನಮಗಿಂತ ಸಿದ್ಧಸಿರಿ ಕಾರ್ಖಾನೆ ಯವರು ಪ್ರತಿ ಟನ್ ಗೆ 800ರೂ ಹೆಚ್ಚಿಗೆ ನೀಡುತ್ತಿದ್ದರಿಂದ ತಮ್ಮ ಕಾರ್ಖಾನೆಗೆ ಆದಾಯ ಕಡಿಮೆ ಬರುತ್ತದೆ ಎಂದು ನಾನಾ ಕಾರಣಗಳಿಂದ ಬಂದು ಮಾಡಿಸಿದ್ದು ಕಾರ್ಖಾನೆಯವರು ಇದರ ವಿರುದ್ಧ ಕಾನೂನಾತ್ಮಕವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಪರಿಣಾಮವಾಗಿ ಚಿಂಚೋಳಿ ರೈತರ ಹಿತದೃಷ್ಟಿಯಿಂದ ಹೈಕೋರ್ಟ್ ಪ್ರಾರಂಭ ಮಾಡಲು ಅನುಮತಿ ನೀಡಿತ್ತು, ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಹೈ ಕೋರ್ಟ್ ಪ್ರಾರಂಭ ಮಾಡಲು ಹೇಳಿದ್ದರೂ ಸಹ ಮತ್ತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ ಇದರಿಂದ ಚಿಂಚೋಳಿಯ ತಾಲೂಕಿನ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಿದ್ದಸಿರಿ ಕಾರ್ಖಾನೆಯನ್ನು ನಂಬಿ ರೈತರು ಸಾಲ ಮಾಡಿ ಕಬ್ಬು ಬೆಳೆದಿದ್ದಾರೆ ಅಲ್ಲದೆ ನಮ್ಮ ತಾಲೂಕಿನಲ್ಲಿ ಕಾರ್ಖಾನೆಯಾಗಿದ್ದರಿಂದ ಇನ್ನೂ ಅತಿ ಹೆಚ್ಚು ರೈತರು ಕಬ್ಬು ಬೆಳೆಯಲು ತೀರ್ಮಾನಿಸಿದ್ದಾರೆ ಹಾಗೂ ಕಾರ್ಖಾನೆಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲಾಗಿತ್ತು ಅಲ್ಲದೆ ಕಾರ್ಖಾನೆಯ ಜೊತೆಗೆ ಹಿಂದುಳಿದ ತಾಲೂಕು ಚಿಂಚೋಳಿಯಲ್ಲಿ ಅತಿ ಹೆಚ್ಚು ಉದ್ಯೋಗಗಳು ಸಿಗುತ್ತಿದ್ದವು, ಬಂದಾದ ಪರಿಣಾಮವಾಗಿ ಯುವಕರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತದೆ ಆದ್ದರಿಂದ ರೈತರು ನಿರಂತರವಾಗಿ ಒಂದು ತಿಂಗಳಿನಿಂದ ಹೋರಾಟ ಮಾಡುತ್ತಾ ಚಿಂಚೋಳಿಯಲ್ಲಿ ಸತ್ಯಾಗ್ರಹ ಮಾಡುತ್ತಿದ್ದು ಜಿಲ್ಲೆಯ ಸಚಿವರುಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಹೋರಾಟದ ಸ್ಥಳಕ್ಕೆ ಬಂದು ರೈತರಿಗೆ ಭೇಟಿ ನೀಡದೆ ಇರುವುದು ಖಂಡನೀಯ. ಆದ್ದರಿಂದ ರೈತರ ಬಗ್ಗೆ ಕಾಳಜಿ ವಹಿಸಿ ರಾಜಕೀಯ ಬಿಟ್ಟು ಚಿಂಚೋಳಿಯ ರೈತರ ಹಿತ ದೃಷ್ಟಿಯಿಂದ ಸಕ್ಕರೆ ಕಾರ್ಖಾನೆ ಹೋರಾಟದಲ್ಲಿ ಭಾಗವಹಿಸಿ ಕಾರ್ಖಾನೆ ಪ್ರಾರಂಭ ಮಾಡಲು ತಾವುಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮಾಡಿ ಚಿಂಚೋಳಿ ತಾಲೂಕಿನ ಜನತೆಗೆ ನ್ಯಾಯ ಒದಗಿಸಿ ಕೊಡಬೇಕೆಂದು ತಾಲೂಕಿನ ಜನತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.