ಸೂಲಹಳ್ಳಿ: ಮಳೆ ನೀರಿಗೆ ಹದಗೆಟ್ಟ ರಸ್ತೆ ಸಂಚಾರಕ್ಕೆ ತೊಂದರೆ, ರಸ್ತೆ, ಚರಂಡಿ ನಿರ್ಮಾಣಕ್ಕೆ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದ ಆಂತರಿಕ ರಸ್ತೆಗಳು ಮಳೆ ನೀರಿಗೆ ಹದಗೆಟ್ಟಿದ್ದು, ರಸ್ತೆ ತುಂಬಾ ನೀರು ಹರಿಯುತ್ತಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟುಮಾಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದಲ್ಲಿ ಚರಂಡಿಗಳು ಇಲ್ಲ, ರಸ್ತೆಗಳು ಹದಗೆಟ್ಟಿವೆ ಈಗ ನಿರಂತರ ಮಳೆಗೆ ರಸ್ತೆಗಳು ಜಲಾವೃತಗೊಂಡಿವೆ, ಹೀಗಾಗಿ ನಿತ್ಯ ಶಾಲಾ ಮಕ್ಕಳು, ವೃದ್ದರು, ಮಹಿಳೆಯರು ರಸ್ತೆಯ ಮೇಲೆ ಓಡಾಡಲು ಸಂಕಷ್ಟ ಪಡುತ್ತಿದ್ದಾರೆ. ಮಳೆ ನೀರಿನಿಂದ ರಸ್ತೆಗಳೇ ಮಾಯವಾಗಿವೆ ರಸ್ತೆಗಳ ಮದ್ಯೆ ತಗ್ಗು ದಿನ್ನೆಗಳಲ್ಲಿ ನೀರು ತುಂಬಿದ್ದರಿಂದ ಪಾದಚಾರಿಗಳು ಕಾಲು ಜಾರಿ ಬಿದ್ದು ಸಣ್ಣ ಪುಟ್ಟ ಅನಾಹುತಕ್ಕೆ ಒಳಗಾಗಿದ್ದಾರೆ.
ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಕೂಡಲೇ ಮಳೆ ನೀರು ಹಾಗೂ ಮನೆಗಳ ಬಚ್ಚಲು ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳು ನಿರ್ಮಾಣ ಮಾಡಲು ಹಾಗೂ ಹದಗೆಟ್ಟ ರಸ್ತೆಗಳು ಸುಧಾರಣೆ ಮಾಡಲು ಸ್ಥಳೀಯ ಗ್ರಾಮಾಡಳಿತ ಮುಂದಾಗಬೇಕು ಎಂದು ಗ್ರಾಮದ ಯುವಕ ಸಿದ್ದು ಗುತ್ತೇದಾರ ಆಗ್ರಹಿಸಿದ್ದಾರೆ.