Oplus_0

ಶಿವುಕುಮಾರ ಯಾಗಾಪೂರ ನೇತೃತ್ವದ ನಿಯೋಗ ಸಚಿವ ಪ್ರಿಯಾಂಕ್ ಖರ್ಗೆಗೆ ಭೇಟಿ | ತಿಪ್ಪಣ್ಣಪ್ಪ ಕಮಕನೂರ ಪೂರ್ಣಾವಧಿಗಾಗಿ ವಿಧಾನ ಪರಿಷತ್ ಸದಸ್ಯರಾಗಿ ಮುಂದುವರಿಸಲು ಕೋಲಿ ಸಮಾಜ ಒತ್ತಾಯ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲ್ಯಾಣ ಕರ್ನಾಟಕ ಭಾಗದ ಕೋಲಿ ಸಮಾಜದ ಪ್ರಭಾವಿ ನಾಯಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಪೂರ್ಣಾವಧಿಗಾಗಿ ವಿಧಾನ ಪರಿಷತ್ ಸದಸ್ಯರಾಗಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದ ನಿಯೋಗ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

2019ರಲ್ಲಿ ತಿಪ್ಪಣ್ಣಪ್ಪ ಕಮಕನೂರು ಒಂದು ವರ್ಷದ ಅವಧಿಗೆ ಮಾತ್ರ ವಿಧಾನ ಪರಿಷತ್ ಸದಸ್ಯರಾಗಿದ್ದರು. ನಂತರ 2023ರಲ್ಲಿ ಮೂರು ವರ್ಷದ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದಾರು. ಅವರ ಅವಧಿ ಇದೇ ಜೂನ್ 30ಕ್ಕೆ ಪೂರ್ಣಗೊಳ್ಳಲಿದೆ. ಕಮಕನೂರು ಗಂಗಾಮತಸ್ಥರಾದರೂ ಹಿಂದುಳಿದ ಸಮಾಜದವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಧಾರ್ಮಿಕ ಅಭಿವೃದ್ಧಿಗಾಗಿ ಶ್ರಮಿಸಿದ ಒಬ್ಬ ನಿಷ್ಠಾವಂತ ನಾಯಕರು, ಅನೇಕ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಸಮರ್ಥವಾಗಿ ಗಮನ ಸೆಳೆದು ಪರಿಹಾರಕ್ಕೆ ಪ್ರಯತ್ನಿಸಿ, ಅಭಿವೃದ್ಧಿಗೆ ಶ್ರಮಿಸಿದವರು. ಹಿಂದುಳಿದವರ ಮತ ಕ್ರೋಢೀಕರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದವರು. ಹೀಗಾಗಿ ಕಮಕನೂರ ಅವರನ್ನು ಪೂರ್ಣಾವಧಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಮರು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಸಿಕ್ಕ ಅವಕಾಶದಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರು ಸಮಾಜದ ಅಭಿವೃದ್ಧಿಗಾಗಿ, ಸಮಾಜದ ಸಂಘಟನೆಗಾಗಿ ಮತ್ತು ಸಮಾಜದ ಸಮಸ್ಯೆಗಳನ್ನು ಬಹಳ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಜೆಪಿ ಪಕ್ಷದಲ್ಲಿ ಈಗಾಗಲೇ ಎನ್. ರವಿಕುಮಾರ್ ಅವರನ್ನು ಮೊದಲು 6 ವರ್ಷದ ಪೂರ್ಣಾವಧಿಗೆ ಎಂಎಲ್‌ಸಿ ಮಾಡಿ ಮತ್ತೊಮ್ಮೆ ಪುನಃ 6 ವರ್ಷಕ್ಕೆ ಎಂಎಲ್‌ಸಿ ಸ್ಥಾನಕ್ಕೆ ನೇಮಕ ಮಾಡಿದ್ದಾರೆ. ಸಾಬಣ್ಣ ತಳವಾರ ಅವರಿಗೂ ಸಹ ಒಂದು ಸಲ ಪುರ್ಣಾವಧಿಗೆ ನೇಮಕ ಮಾಡಿದ್ದಾರೆ. ಕಾಂಗ್ರೇಸ್ ಪಕ್ಷ ಕರ್ನಾಟಕ ರಾಜ್ಯದಲ್ಲಿ ಹುಟ್ಟಿದ ಮೇಲೆ ಬೇರೆ ಬೇರೆ ಸಮಾಜದವರು ಸಾಕಷ್ಟು ಸಾರಿ ವಿಧಾನ ಪರಿಷತ್ ಸದಸ್ಯರಾಗಿ ಹೋಗಿದ್ದಾರೆ. ಮೊದಲ ಬಾರಿಗೆ ತಮ್ಮ ನಾಯಕತ್ವದಡಿಯಲ್ಲಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿದ ಕೀರ್ತಿ ನಿಮಗೆ ಹಾಗೂ ನಿಮ್ಮ ಮನೆತನಕ್ಕೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.

ಅಧಿವೇಶನದಲ್ಲಿ ಕೋಲಿ ಸಮಾಜದ ಪರ ಗಟ್ಟಿಯಾಗಿ ನಿಲ್ಲುವ ಏಕೈಕ ನಾಯಕ ತಿಪ್ಪಣ್ಣಪ್ಪ ಕಮಕನೂರ ಅವರಾಗಿದ್ದಾರೆ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇವರ ಕೊಡುಗೆ ಅಪಾರವಾಗಿದೆ ಹೀಗಾಗಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಪೂರ್ಣಾವಧಿಗಾಗಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮುಂದುವರೆಸಬೇಕು ಎಂದು ಚಿತ್ತಾಪುರ ಮತಕ್ಷೇತ್ರದ ಹಾಗೂ ಕಲಬುರಗಿ ಜಿಲ್ಲೆಯ ವತಿಯಿಂದ ಮನವಿ ಮಾಡಿದ್ದಾರೆ.

ನಿಯೋಗದಲ್ಲಿ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಪ್ರಧಾನ ಕಾರ್ಯದರ್ಶಿ ಸಾಬಣ್ಣ ಭರಾಟೆ, ಕಾರ್ಯಾಧ್ಯಕ್ಷ ಶರಣು ಅರಣಕಲ್, ಖಜಾಂಚಿ ಕಾಶಪ್ಪ ಡೋಣಗಾಂವ, ಯುವ ಕೋಲಿ ಸಮಾಜದ ಗೌರವಾಧ್ಯಕ್ಷ ಗುಂಡು ಐನಾಪೂರ, ಮುಖಂಡರಾದ ಶರಣಪ್ಪ ನಾಟೀಕಾರ, ಬಸವರಾಜ ಹೊಸಳ್ಳಿ, ಯಲ್ಲಾಲಿಂಗ ಪೂಜಾರಿ, ಜಗನ್ನಾಥ ಆಲೂರ, ಪ್ರವೀಣ್ ನಾಮದಾರ, ಮಹಾದೇವ ಅಲ್ಲೂರ, ಶಿವುಕುಮಾರ ಸುಣಗಾರ, ಗುರು ಕರಾಟೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!