ಉಚಿತ ಮೇವಿನ ಬೀಜ ಲಭ್ಯ, ಆಸಕ್ತಿವುಳ್ಳ ನೀರಾವರಿ ಸೌಲಭ್ಯ ಹೊಂದಿದ ರೈತರು ತೆಗೆದುಕೊಳ್ಳಲು ಶಂಕರ ಕಣ್ಣಿ ಕರೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ತಾಲೂಕಿನ ಎಲ್ಲ ಪಶುಪಾಲನಾ ಇಲಾಖೆಯ ಸಂಸ್ಥೆಗಳಲ್ಲಿ ಉಚಿತ ಮೇವಿನ ಬೀಜ ಲಭ್ಯವಿದ್ದು ಆಸಕ್ತಿವುಳ್ಳ ನೀರಾವರಿ ಸೌಲಭ್ಯ ಹೊಂದಿದ ರೈತರು ತೆಗೆದುಕೊಳ್ಳಬೇಕು ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಂಕರ ಕಣ್ಣಿ ಕರೆ ನೀಡಿದರು.

ತಾಲೂಕಿನ ಹಣಿಕೇರಾ ಗ್ರಾಮದಲ್ಲಿ ನೀರಾವರಿ ಸೌಲಭ್ಯ ಹೊಂದಿರುವ ರೈತರಿಗೆ ಪಶು ಪಾಲನಾ ಇಲಾಖೆಯ ವತಿಯಿಂದ ಉಚಿತವಾಗಿ ಮೇವಿನ ಬೀಜದ ಕಿರುಪೋಟ್ಟಣ ವಿತರಣೆ ಮಾಡಿ, ರೈತರ ಹೊಲದಲ್ಲಿ ಬಿತ್ತನೆ ಮಾಡುವ ಮೂಲಕ ಮೇವು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಲಾಯಿತು.

ಲಭ್ಯವಿರುವ ಮೇವಿನ ಬೀಜದ ಕಿರು ಪೊಟ್ಟಣಗಳು:

ಹೆಬ್ರಿಡ್ ಜೋಳದ ಬೀಜ-CSH 24, ಹೈಬ್ರಿಡ್ ಜೋಳದ ಬೀಜ-CSH 43, ಸೌತ್ ಆಫ್ರಿಕಾ ಮೆಕ್ಕೆಜೋಳ. ಇದರ ಸದುಪಯೋಗ ಪಡೆದುಕೊಳ್ಳಲು ರೈತರು ಆಧಾರ್ ಕಾರ್ಡ್, ಪಹಣಿ ಪ್ರತಿ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತರಾದ ಕೋರಿಸಿದ್ದ ಎಸ್ ಗಂಜಿ, ದೊಡ್ಡ ಹಾಜಿಸಾಬ ಗಲಗಿನ್, ಮೋನಪ್ಪ ಕೋಟಗೆರಿ, ಶಿವನಗೌಡ ಮಾಲಿ ಪಾಟೀಲ, ಯುನಿಶ ಪಟೇಲ್, ಬಸವರಾಜ ಕಾಲದಾರ, ಕಿರಿಯ ಪಶುವೈದ್ಯಕೀಯ ಪರೀಕ್ಷಕ ವಿಜಯಕುಮಾರ್ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!