ವಾಡಿ ಪುರಸಭೆ ಚುನಾವಣೆ ಮೀಸಲಾತಿ ಸರಿಪಡಿಸುವಂತೆ ಬಿಜೆಪಿ ಆಗ್ರಹ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಪುರಸಭೆ ಚುನಾವಣೆಗಾಗಿ ವಾರ್ಡ್ವಾರು ಮೀಸಲಾತಿಯ ಪಟ್ಟಿ ಫೆ.17ರಂದು ಪ್ರಕಟಿಸಿರುವುದರಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಿದೆ ಅದನ್ನು ಪುನರ್ ಪರಿಶೀಲಿಸಿ ಸರಿಪಡಿಸುವಂತೆ ಆಗ್ರಹಿಸಿ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ನಗರಾಭಿವೃದ್ಧಿ ಇಲಾಖೆ ಮೀಸಲಾತಿ ನಿಗದಿ ಮಾಡಿರುವ ಕ್ರಮವು ತಾರತಮ್ಯದಿಂದ ಕೊಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಹಿಂದುಳಿದ ವರ್ಗಕ್ಕೆ ಅಧಿಕಾರದಿಂದ ವಂಚಿಸುವ ಮೀಸಲಾತಿ ಇದಾಗಿದೆ ಎಂದಿದ್ದಾರೆ.
ಈಗಾಗಲೇ ಇದೇ ತರ ಮೀಸಲಾತಿ ಪ್ರಕಟಣೆವಾಗಿದ್ದ ಸಲುವಾಗಿ ಪಟ್ಟಣದ ಮುಖಂಡರೊಬ್ಬರು ಕೋರ್ಟ್ ಮೆಟ್ಟಿಲೇರಿದರ ಪರಿಣಾಮ ಒಂದು ವರ್ಷ ಚುನಾವಣೆ ಮುಂದೂಡಿಕೆಯಾಗಿತು. ಈ ರೀತಿ ಮೀಸಲಾತಿ ಪ್ರಕಟಿಸಿ ಮತ್ತೆ ಚುನಾವಣೆ ಮುಂದಾಕುವ ತಂತ್ರ ಈ ಕ್ರಮದ ಹಿಂದಿರುವುದು ಸುಸ್ಪಷ್ಟವಾಗಿದೆ. ಚುನಾವಣೆಯಲ್ಲಿ ಎಲ್ಲಾ ಸಮುದಾಯದವರಿಗೆ ಸೂಕ್ತ ಪ್ರಾತಿನಿಧ್ಯವನ್ನು ಕಲ್ಪಿಸುವ ಮೀಸಲಾತಿ ಸೌಲಭ್ಯ ಸಂವಿಧಾನ ಒದಗಿಸಿದೆ, ಆದರೆ ವಿನಾಕಾರಣ ಗೊಂದಲ ಸೃಷ್ಟಿಸುವಂತ ಕೆಲಸ ನಗರಾಭಿವೃದ್ಧಿ ಇಲಾಖೆಯಿಂದಾಗುತ್ತಿದೆ. ಪಟ್ಟಣದ ವಾರ್ಡ್ ಗಳ ಜಾತಿವಾರು ಅನುಗುಣವಾಗಿ ಮೀಸಲಾತಿ ನಿಗದಿ ಮಾಡಬೇಕು ಎನ್ನುವುದು ಸಂವಿಧಾನದ ನಿಯಮ. ಹಾಲಿ ಮೀಸಲಾತಿ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸದೇ ಕೆಲ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮತ್ತೇ 23 ವಾರ್ಡ್ಗಳಿಗೆ ನಿಗದಿ ಮಾಡಿದ ಮೀಸಲಾತಿ ಯಾವುದೇ ಜಾತಿವಾರು ನಿಯಮಗಳಿಗೆ ಅನುಗುಣವಾಗಿಲ್ಲ ಇದನ್ನು ತಾವು ಮತ್ತೊಮ್ಮೆ ಮರುಪರಿಶೀಲನೆ ಮಾಡಿ ಎಂದು ಹೇಳಿದ್ದಾರೆ.
ಬಹುದಿನಗಳಿಂದ ಪುರಸಭೆ ಚುನಾವಣೆ ಇಲ್ಲದೆ ಪಟ್ಟಣದ ಅಭಿವೃದ್ಧಿ ಕುಂಠಿತವಾಗುತ್ತಿರುವುದರ ಜೊತೆಗೆ ಇಲ್ಲಿನ ಕೆಲ ಅಧಿಕಾರಿಗಳು ಪುರಸಭೆ ಸಂಪತ್ತಿನ ಹಗಲು ದರೋಡೆಯಲ್ಲಿ ನಿರತರಾಗಿದ್ದಾರೆ ಇದನ್ನು ತಡೆಯಲು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯೊಂದಿಗೆ ಮುತುವರ್ಜಿಯಿಂದ ಮೀಸಲಾತಿ ಪ್ರಕಟಿಸಿ ಚುನಾವಣೆ ನಡೆಸುವಂತೆ ತಾವು ಕ್ರಮ ಕೈಗೊಳ್ಳಿ. ಹಿಂದುಳಿದ ವರ್ಗಗಳಿಗೆ ನ್ಯಾಯ ಸಮ್ಮತ ಮೀಸಲಾತಿ ಒದಗಿಸಿ ಆದಷ್ಟು ಬೇಗ ಚುನಾವಣೆ ಘೋಷಿಸಿ ಎಂದು ಒತ್ತಾಯಿಸಿದ್ದಾರೆ.