ವಾಡಿಯಲ್ಲಿ ಭಗತ್ ಸಿಂಗ್ ಜಯಂತಿ ಆಚರಣೆ

 ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶನಿವಾರ ಭಗತ್ ಸಿಂಗ್ ಅವರ 117ನೇ ಜಯಂತಿ ಆಚರಿಸಲಾಯಿತು.

ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಕ್ರಾಂತಿಕಾರಿ ಚಿಂತನೆ, ದೇಶಪ್ರೇಮ ಮೈಗೂಡಿಸಿಕೊಂಡಿದ್ದ ಭಗತ್ ಸಿಂಗ್ ನಮಗೆಲ್ಲಾ ದಾರಿ ದೀಪ ಎಂದರು.

ಸಾವಿರಾರು ಅಪ್ರತಿಮ ವೀರರ, ದೇಶಪ್ರೇಮದ ತ್ಯಾಗ, ಬಲಿದಾನದ ಫಲವಾಗಿ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಹೀಗಾಗಿ, ಸದಾ ಅವರು ಹಾಕಿಕೊಟ್ಟ ದೇಶ ಪ್ರೇಮದ ದಾರಿಯಲ್ಲಿ ಸಾಗಿ ಅವರಿಗೆ ಗೌರವಿಸುವುದು ನಮ್ಮ ಕರ್ತವ್ಯವಾಗಿದೆ.

ಭಗತ್ ಸಿಂಗ್ ಅವರನ್ನು 23 ನೇ ವಯಸ್ಸಿನಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು. 1919ರಲ್ಲಿ ಭಗತ್ ಸಿಂಗ್ ತಮ್ಮ 12ನೇ ವಯಸ್ಸಿನಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಥಳಕ್ಕೆ ಭೇಟಿ ನೀಡಿದಾಗ ಅವರಲ್ಲಿ ಮೊದಲ ಬಾರಿಗೆ ಕ್ರಾಂತಿ ಮನೋಭಾವನೆ ಹುಟ್ಟಿತು. ಇದಾದ ಬಳಿಕ ಭಗತ್ ಸಿಂಗ್ ತಮ್ಮ 14ನೇ ವಯಸ್ಸಿನಲ್ಲಿ ತಮ್ಮ ಹಳ್ಳಿಯಲ್ಲಿ ಪ್ರತಿಭಟನಾಕಾರರಲ್ಲಿ ಒಬ್ಬರಾಗಿದ್ದರು. ನಂತರ ಭಗತ್ ಸಿಂಗ್ ಅವರು ಯುವ ಕ್ರಾಂತಿಕಾರಿ ಚಳುವಳಿಯಲ್ಲಿ ಭಾಗಿಯಾದರು. ಜೊತೆಗೆ ಬ್ರಿಟಿಷರನ್ನು ಭಾರತದಿಂದ ಓಡಿಸಲು ಹಿಂಸಾತ್ಮಕ ಮಾರ್ಗವನ್ನು ಹಿಡಿದು ನಮ್ಮ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದರು. ಅಂತ ಹೋರಾಟಗಾರರ ತ್ಯಾಗ ಬಲಿದಾನ ಸ್ಮರಿಸಿ,ಅವರಿಗೆ ಕೃತಜ್ಞತರಾಗೋಣ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ಗಿರಿಮಲ್ಲಪ್ಪ ಕಟ್ಟಿಮನಿ, ಭೀಮರಾವ ದೊರೆ, ಅಶೋಕ ಪವಾರ, ಪ್ರಮೋದ ಚೊಪಡೆ, ಭೀಮರಾವ ಕಾನಕುರ್ತೆ, ದತ್ತಾ ಖೈರೆ, ಯಂಕಮ್ಮ ಗೌಡಗಾಂವ, ಶರಣಮ್ಮ ಯಾದಗಿರಿ, ಉಮಾ ಭಾಯಿ ಗೌಳಿ ಸೇರಿದಂತೆ ಇತರರು ಇದ್ದರು ‌

Spread the love

Leave a Reply

Your email address will not be published. Required fields are marked *

error: Content is protected !!