ಪ್ರತಿ ವಾರ್ಡ್ ನಲ್ಲಿ 300 ಬಿಜೆಪಿ ಸದಸ್ಯತ್ವ ಮಾಡುವ ಗುರಿ

ವಾಡಿಯಲ್ಲಿ ಬೀದಿಬದಿ ಚಹಾ ಅಂಗಡಿಯಲ್ಲಿ ಬಿಜೆಪಿ ಸದಸ್ಯತ್ವ ನೊಂದಣಿ

ವಾಡಿ: ಪಟ್ಟಣದ ಬಳಿರಾಮ ಚೌಕದಲ್ಲಿ ಬಿಜೆಪಿ ಮುಖಂಡರು ವಾರ್ಡ್ ನಂ. 1,2,3ರ ನಿವಾಸಿಗಳಿಗಾಗಿ ಹಮ್ಮಿಕೊಂಡ ಎರಡನೇ ಹಂತದ ಸದಸ್ಯತ್ವ ಅಭಿಯಾನದ ಪ್ರಯುಕ್ತ ಚಹಾ ಅಂಗಡಿಯಲ್ಲಿ ಬಿಜೆಪಿ ಸಾಧನೆ ವಿವರಿಸಿ ಸದಸ್ಯತ್ವ ನೊಂದಾಯಿಸಿದರು.

ಈ ವೇಳೆ ಚಿತ್ತಾಪುರ ಮಂಡಲ ಸದಸ್ಯತ್ವ ಅಭಿಯಾನದ ಉಸ್ತುವಾರಿ ಶರಣಪ್ಪ ತಳವಾರ ಮಾತನಾಡಿ, ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಮತ್ತು ಸ್ವಾವಲಂಬಿಯಾಗಿ ಬದುಕಲು ಪ್ರಧಾನಿ ಮೋದಿ ಜಿ ಅವರು ಸ್ವ-ನಿಧಿ ಯೋಜನೆ ಯನ್ನು ಜಾರಿಗೆ ತಂದಿದ್ದಾರೆ, ಅದರ ಲಾಭ ಸಾಕಷ್ಟು ಬೀದಿ ವ್ಯಾಪಾರಿಗಳು ಪಡೆದಿದ್ದು , ತಾವು ಸಹಪಡೆದು ಬದುಕು ಸುಧಾರಿಸಿಕೊಳ್ಳಿ ಎಂದು ಹೇಳಿದರು.

ಜಾತಿ ಧರ್ಮ ಬಡತನ ಸಿರಿತನದ ತಾರತಮ್ಯ ಇಲ್ಲದೆ ಎಲ್ಲರನ್ನೂ ಸಮಾನತೆಯಿಂದ ನೋಡುವ ಪಕ್ಷ ಬಿಜೆಪಿ ಮಾತ್ರ. ಜಿಲ್ಲೆಯಲ್ಲಿಯೆ ಅತಿ ಹೆಚ್ಚಿನ ಸದಸ್ಯತ್ವವನ್ನು ಮಾಡಿಸುವ ಗುರಿ ಹಾಕಿಕೊಂಡಿರುವುದರಿಂದ ಪ್ರತಿ ವಾರ್ಡ್ ಗಳಲ್ಲಿ ಮೂನ್ನುರಿನ ಗುರಿ ದಾಟಲು ನಾವೆಲ್ಲರೂ ಪ್ರಯತ್ನಿಸಬೇಕು. ನಮ್ಮ ಪಕ್ಷದಿಂದ ಆಗುತ್ತಿರುವ ಅಭಿವೃದ್ದಿ, ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿ ಪಕ್ಷದಲ್ಲಿ ಸದಸ್ಯತ್ವವನ್ನು ನೋಂದಾಯಿಸಿಕೊಳ್ಳಲು ಜನ ಸಂತೋಷದಿಂದ ಬರುತ್ತಿರುವುದು ನಮಗೆ ಇನ್ನಷ್ಟು ಉತ್ಸವ ಮೂಡಿದೆ ಎಂದರು.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಛಾಪು ಮೂಡಿಸಿದೆ ಮತ್ತು ರಾಮಜನ್ಮಭೂಮಿ ಸಮಸ್ಯೆಯಂತಹ ದೀರ್ಘಾವಧಿಯ ವಿಷಯಗಳನ್ನು ಪರಿಹರಿಸಿದೆ. ಇದನ್ನೆಲ್ಲ ಯುವಕರಿಗೆ ಮನದಟ್ಟು ಮಾಡಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಬ್ದಾರಿ ಆಗಿದೆ ಎಂದು ಹೇಳಿದರು.

 

ಮುಖಂಡ ವಿಠಲ್ ನಾಯಕ ಚಹಾ ವ್ಯಾಪಾರಿ ಸುನಿಲ್ ರಾಠೋಡ ರಿಗೆ ಪಕ್ಷದ ಸದಸ್ಯತ್ವ ನೊಂದಾಯಿಸಿದರು.

ಈ ಸಂಧರ್ಭದಲ್ಲಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮಂಡಲ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಇಟಗಿ, ಮುಖಂಡರಾದ ರಮೇಶ ಕಾರಬಾರಿ, ತುಕಾರಾಮ‌ ರಾಠೋಡ, ಕಿಶನ್ ಜಾಧವ, ಅಂಬದಾಸ ಜಾಧವ, ಕಿಶನ್ ನಾಯಕ, ಪ್ರಭು ಜಾಧವ, ಪ್ರೇಮ ರಾಠೋಡ, ಪ್ರಕಾಶ ಪುಜಾರಿ, ರವಿ ಸಿಂದಗಿ, ರವಿ ಜಾಧವ, ಹೀರಾ ನಾಯಕ, ಶಂಕ್ರಯ್ಯ ಸ್ವಾಮಿ, ರಾಮು ರಾಠೋಡ, ಮಲ್ಲಿಕಾರ್ಜುನ ಹಣಿಕೇರಾ, ಮಲ್ಲಿಕಾರ್ಜುನ ಸಾತಖೇಡ, ಮಲ್ಲು ಇಂದೂರ, ವಿಜಯಕುಮಾರ ಕುಲಕರ್ಣಿ, ಆಕಾಶ ರಾಠೋಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!