ವಾಡಿಯಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ, ಸಂವಿಧಾನ ಗೌರವಿಸುವುದು ನಮ್ಮ ಮೊಟ್ಟ ಮೊದಲ ಕರ್ತವ್ಯ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಅವರ ವೃತ್ತದಲ್ಲಿ ಬಿಜೆಪಿ ಮುಖಂಡರು ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂವಿಧಾನದ ಪ್ರತಿಜ್ಞಾ ವಿಧಿ ಪೀಠಿಕೆ ಓದಿದರು.
ಈ ವೇಳೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಬಸವರಾಜ ಪಂಚಾಳ ಮಾತನಾಡಿ, ಭಾರತದ ಪ್ರಜೆಗಳಾದ ನಾವು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ಸ್ವೀಕರಿಸಿದ್ದು, ಎಲ್ಲ ಪ್ರಜೆಗಳಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ದೊರಕಬೇಕು. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ನಮ್ಮ ಧರ್ಮಕ್ಕೆ ಅನುಗುಣವಾದ ಆರಾಧನೆಗೂ ಅವಕಾಶವಿದೆ. ಎಲ್ಲ ಸ್ಥಾನಮಾನಗಳನ್ನು ಪಡೆಯಲು ಸ್ವಾತಂತ್ರ್ಯವಿದೆ. ಆದರೆ ರಾಷ್ಟ್ರೀಯ ಏಕತೆ, ಸಮಗ್ರತೆಯನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿಯೂ ನಮ್ಮದಾಗಬೇಕಾಗಿದೆ. ನಮ್ಮ ದೃಢ ಸಂಕಲ್ಪದಿಂದ ಮಾತ್ರ ಭಾರತದ ವೈಭವವನ್ನು ಕಾಣಲು ಸಾಧ್ಯ ಎಂದರು.
ಸಂವಿಧಾನದ ಗೌರವಕ್ಕೆ ಯಾವುದೇ ರೀತಿ ಧಕ್ಕೆ ಯಾಗದಂತೆ ನಮ್ಮ ಪ್ರಧಾನಿ ಮೋದಿಜಿ ಶ್ರಮಿಸಿ, ಜಗತ್ತಿನಲ್ಲೇ ನಮ್ಮ ಸಂವಿಧಾನದ ಶ್ರೇಷ್ಠತೆಯನ್ನು ಸಾರುತ್ತಿದ್ದು. ಅದರಂತೆ ನಮ್ಮ ಬದುಕಾದರೆ ಮಾತ್ರ ನಮ್ಮ ಭಾರತ ವಿಶ್ವದಲ್ಲಿ ಬೆಳಗುತ್ತದೆ ಎಂದರು.
ಈ ಸಂವಿಧಾನ ದಿನದಂದು, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಪ್ರತಿಜ್ಞೆ ಮಾಡೋಣ. ಸಂವಿಧಾನದ ಮೌಲ್ಯಗಳು, ಆಶಯಗಳ ಬಗ್ಗೆ ಗೌರವ ಇಲ್ಲದ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸಂಕಲ್ಪ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಸಂಧರ್ಬದಲ್ಲಿ ತಾಲ್ಲೂಕ ಎಸ್.ಸಿ ಮೂರ್ಚಾ ಅಧ್ಯಕ್ಷ ರಾಜು ಮುಕ್ಕಣ್ಣ, ಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ಮುಖಂಡರಾದ ರಾಮಚಂದ್ರ ರಡ್ಡಿ, ಗಿರಿಮಲ್ಲಪ್ಪ ಕಟ್ಟಿಮನಿ, ಸಿದ್ದಣ್ಣ ಕಲ್ಲಶೆಟ್ಟಿ, ಶಿವಶಂಕರ ಕಾಶೆಟ್ಟಿ, ಕಿಶನ ಜಾಧವ್, ಅಂಬದಾಸ ಜಾಧವ, ರಿಚರ್ಡ್ ಮಾರೆಡ್ಡಿ, ಹರಿ ಗಲಾಂಡೆ, ಆನಂದರಾವ ಡೌವಳೆ, ಆನಂದ ಇಂಗಳಗಿ, ಮಲ್ಲಿಕಾರ್ಜುನ ಸಾತಖೇಡ, ಸತೀಶ್ ನಾಯಕ, ಪ್ರೇಮ ರಾಠೊಡ, ನಾರಯಣ ರಾಠೊಡ, ನಾಗಣ್ಣ ಕಮರವಾಡಿ ಸೇರಿದಂತೆ ಇತರರು ಇದ್ದರು.