Oplus_0

ವಾಡಿಯಲ್ಲಿ ಸ್ವದೇಶಿ ದಿನಾಚರಣೆ, ಭಾರತವನ್ನು ಸಧೃಢ ಮತ್ತು ಸ್ವದೇಶಿ ದೇಶವನ್ನಾಗಿಸುವ ಕನಸು ಹೊತ್ತಿದ್ದವರು ಸ್ವದೇಶಿ ಚಿಂತಕ ರಾಜೀವ ದೀಕ್ಷಿತ್: ಶಿಲ್ಪಿ 

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಸ್ವದೇಶೀ ಚಿಂತಕ ರಾಜೀವ್ ದೀಕ್ಷಿತ್ ಅವರ 57 ನೇ ಜಯಂತಿ ಹಾಗೂ 14ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಸ್ವದೇಶಿ ದಿನ ಆಚರಿಸಲಾಯಿತು.

ಚಿತ್ತಾಪುರದ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಶಿಲ್ಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧ್ಯಾನ ಮತ್ತು ಸೂಕ್ಷ್ಮ ಆಸನಗಳನ್ನು ಹೇಳಿ ಭಾರತವನ್ನು ಭ್ರಷ್ಟಾಚಾರಮುಕ್ತ, ಸ್ವಾವಲಂಬಿ, ಸಧೃಢ ಮತ್ತು ಸ್ವದೇಶಿ ದೇಶವನ್ನಾಗಿಸುವ ಕನಸು ಹೊತ್ತಿದ್ದವರು ಸ್ವದೇಶಿ ಚಿಂತಕ ರಾಜೀವ ದೀಕ್ಷಿತ್ ಎಂದರು.

ಅವರು ನವೆಂಬರ್ 30ರಂದು ಉತ್ತರ ಪ್ರದೇಶದ ಆಲಿಘಢ ಸಮೀಪದ ಗ್ರಾಮವೊಂದರ ರೈತರ ಕುಟುಂಬದಲ್ಲಿ ಜನಿಸಿದವರು. ಸ್ವಗ್ರಾಮದಲ್ಲಿ ಆರಂಭಿಕ ಶಿಕ್ಷಣ ಪಡೆದರು. ಮುಂದೆ ಎಲೆಕ್ಟ್ರಾನಿಕ್ ಎಂಜಿನೀಯರಿಂಗ್ ಪದವಿಯೊಂದಿಗೆ ಸಂಶೋಧನೆಯಲ್ಲೂ ಉನ್ನತ ಶ್ರೇಣಿ ಪಡೆದರು. ಭಾರತದ ಪ್ರತಿಷ್ಠಿತ ಸಿ.ಎಸ್.ಐ.ಆರ್. ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ರಾಜೀವರಿಗೆ ಜಾಗತೀಕರಣದಿಂದ ಬದಲಾಗುತ್ತಿದ್ದ ಭಾರತ ಚಿಂತೆಗೀಡುಮಾಡಿತು.ಅಂತಹ ಸಂದರ್ಭದಲ್ಲಿ ರಾಜೀವ್ ದೀಕ್ಷಿತ್ ತಮ್ಮ ವೃತ್ತಿಯನ್ನು ಕೈಬಿಟ್ಟು, ಗುರುಗಳಾದ ಶ್ರೀ ಧರ್ಮಪಾಲ್ ಮತ್ತು ಶತಾಯುಷಿ ಶ್ರೀ ಸುಧಾಕರ ಚತುರ್ವೇದಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರದ ಪುರ್ನನಿರ್ಮಾಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಬರಹ ಮತ್ತು ಪ್ರವಚನಗಳಿಂದ ಸ್ವದೇಶಿ ಚಿಂತನೆ ಮತ್ತು ಭಾರತೀಯತೆಯ ಜಾಗೃತಿ ಮೂಡಿಸಲಾರಂಭಿಸಿದರು. ರಾಸಾಯನಿಕಯುಕ್ತ ಕೀಟನಾಶಕ, ಎಂಡೋಸಲ್ಫಾನ್, ಫಾಸ್ಟ್ ಫುಡ್, ಪೆಪ್ಸಿ-ಕೋಕ್‍ಗಳ ಷಡ್ಯಂತ್ರವನ್ನು ಬಯಲಿಗೆಳೆದರು. ವಿದೇಶಿ ವ್ಯಾಮೋಹಕ್ಕೀಡಾಗತೊಡಗಿದ ಯುವಶಕ್ತಿಯನ್ನು ಜಾಗೃತಗೊಳಿಸಿದರು. ದೇಶದ ಉದ್ದಗಲಕ್ಕೂ ಸಂಚರಿಸಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ತಮ್ಮ ಉಪನ್ಯಾಸಗಳಿಂದ ಎಲ್ಲರನ್ನೂ ಎಚ್ಚರಿಸಿದ್ದರು ಎಂದು ಹೇಳಿದರು.

ರಾಜೀವ್ ದೀಕ್ಷಿತ್ ರ ಒಡನಾಡಿ ಹಾಗೂ ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಅವರ ಸರಳ ಆದರ್ಶ ಜೀವನ ವಿವರಿಸುತ್ತಾ, ಸ್ವದೇಶಿ ಅಂದರೆ ಅದು ನಮ್ಮ ಜೀವನ ಶೈಲಿ, ನಮ್ಮ ಬದುಕು, ನಮ್ಮ ಉಸಿರು, ನಮ್ಮ ಹೆಸರು ನಮ್ಮತನ ಎಂದು ಹೇಳಿಕೊಟ್ಟವರು ರಾಜೀವ್ ಭಾಯ್ ಹಾಗೆ ಬದುಕಿ ತೋರಿಸಿದವರು ಎಂದು ಹೇಳಿದರು.

ಸ್ವದೇಶಿ ಚಿಂತನೆಯ ಮೂಲ ತಳಹದಿ ಸರಳತೆ. ರಾಜೀವ್ ಭಾಯ್ ರಲ್ಲಿ ಎದ್ದು ಕಾಣುತ್ತಿದ್ದ ಗುಣವೂ ಅದೇ. ಅಹಂಕಾರ, ಆಡಂಬರ ಎಂಬುದು ಅವರ ಹತ್ತಿರಕ್ಕೂ ಸುಳಿಯುತ್ತಿರಲಿಲ್ಲ. ಸ್ವದೇಶಿ ಆಂದೋಲನದ ಬಹುದೊಡ್ಡ ನೇತಾರ ಎನ್ನಿಸಿಕೊಂಡಿದ್ದರು, ಬಾಬಾ ರಾಮದೇವರಾದಿಯಾಗಿ ಬಹುದೊಡ್ಡ ವ್ಯಕ್ತಿಗಳ ಆತ್ಮೀಯ ಒಡನಾಟವಿದ್ದರೂ ರಾಜೀವ್ ಭಾಯ್ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ನಮ್ಮ ಜೊತೆ ಓಡಾಡಿಕೊಂಡಿರುತ್ತಿದ್ದರು, ಅಂತಹ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಎಂದರು.

ಕಂಪ್ಯೂಟರ್‌ ಇಂಜನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು, ಅವರು ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಷಾರಾಮಿ ಜೀವನ ನಡೆಸಬಹುದಾಗಿತ್ತು. ಆದರೆ ಮಧ್ಯಪ್ರದೇಶದ ಭೂಪಾಲ್‌ನಲ್ಲಿ ಯೂನಿಯನ್‌ ಕಾರ್ಬೈಡ್‌ ಕಾರ್ಖಾನೆಯಿಂದ ಮೀಥೈಲ್‌ ಐಸೋಸಯನೈಡ್‌ ರಾಸಾಯನಿಕ ಸೋರಿಕೆಯಾಗಿ ನೂರಾರ ಜನ ಪ್ರಾಣತೆತ್ತಿದ್ದರು. ಈ ದುರಂತದಿಂದ ಸಾವಿರಾರು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದವು. ಇಂದಿಗೂ ಲಕ್ಷಾಂತರ ಜನ ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ವರುಷಗಟ್ಟಲೆ ಈ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದ ರಾಜೀವ್‌ ದೀಕ್ಷಿತ್ ರು ಸಿಟ್ಟಿಗೆದ್ದು ಇವರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲೆಂದೇ 1992ರಲ್ಲಿ ಡಾ.ಬನ್ವಾರಿಲಾಲ್‌ ಶರ್ಮಾ ಮತ್ತು ಪ್ರೊ. ಧರ್ಮಪಾಲ್‌ ಮಾರ್ಗದರ್ಶನದಲ್ಲಿ ಆಜಾದಿ ಬಚಾವೋ ಆಂದೋಲನ ಪ್ರಾರಂಭಿಸಿದರು. ಈ ಆಂದೋಲನದ ಮೂಲಕ ಯೂನಿಯನ್‌ ಕಾರ್ಬೈಡ್‌ ಕಂಪನಿಯನ್ನು ಭಾರತದಿಂದ ಹೊರದಬ್ಬಿದರು ಎಂದರು.

ತಮ್ಮ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ. ಸುಮಾರ 7000ಕ್ಕೂ ಹೆಚ್ಚು ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದವು. ಇದರಿಂದ ಭಾರತದ ಗುಡಿ ಕೈಗಾರಿಕೆ ಹಾಗೂ ಸಣ್ಣ ಪುಟ್ಟ ಕೈಗಾರಿಕೆಗಳು ಹೇಳ ಹೆಸರಿಲ್ಲದಂತೆ ಛಿದ್ರವಾದವು. ಇವುಗಳನ್ನೇ ನಂಬಿದ್ದ ಲಕ್ಷಾಂತರ ಜನರು ತಮ್ಮ ಕೌಶಲಗಳಿಗೆ ಬೆಲೆಯಿಲ್ಲದೆ ಪರದಾಡುವಂತಾಯಿತು. ಡೆನ್ಮಾರ್ಕಿನ ಹಂದಿಗಳ ಸಗಣಿಯನ್ನೂ ಅಮದು ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯದವರು ಬೌದ್ಧಿಕ ದೀವಾಳಿ ಎದ್ದಿದ್ದರು. ಸ್ವತಂತ್ರ ಭಾರತದ ಈ ಹೀನಾಯ ಸ್ಥಿತಿಯನ್ನು ಸಮಸ್ತ ಭಾರತೀಯರ ಮುಂದೆ ಕಂತೆ ಕಂತೆ ದಾಖಲೆಗಳ ಮೂಲಕ ತೆರೆದಿಟ್ಟರು ಎಂದು ಹೇಳಿದರು.

ರಾಜೀವ್ ದೀಕ್ಷಿತ್ ಗತಿಸಿ ಇಂದಿಗೆ 14 ವರ್ಷಗಳಾದವು. ವಿಪರ್ಯಾಸವೆಂದರೆ ರಾಜೀವ್ ದೀಕ್ಷಿತ್ ತಾವು ಹುಟ್ಟಿದ ದಿನವೇ 30-11-1967 ಛತ್ತೀಸ್ಘಡದ ಬಿಲಾಯ್‌ನಲ್ಲಿ ತಮ್ಮ 43 ನೇ ವಯಸ್ಸಿನಲ್ಲಿ ವಿಧಿವಶರಾದರು 30-11-2010. ಬಹು ರಾಷ್ಟ್ರೀಯ ಕಂಪನಿಗಳ ಹಾಗೂ ಅಂದಿನ ಯುಪಿಎ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಜೀವ್ ದೀಕ್ಷಿತ್ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆ ಸತ್ಯಗಳು ಅವರೊಂದಿಗೇ ಇತಿಹಾಸ ಸೇರಿಬಿಟ್ಟವು ಎಂದು ಸ್ಮರಿಸಿದರು.

ಸ್ವದೇಶಿ ವಸ್ತುಗಳನ್ನೇ ಬಳಸಿ, ಖಾದಿ ಬಟ್ಟೆಗಳನ್ನೇ ತೊಡಿ, ಮಾತೃ ಭಾಷೆಯಲ್ಲೇ ಮಾತನಾಡಿ, ದಿನದಲ್ಲಿ ಕನಿಷ್ಠ ಕೆಲವು ನಿಮಿಷಗಳನ್ನಾದರೂ ರಾಷ್ಟ್ರೀಯ ವಿಚಾರ ಧಾರೆಯ ಪ್ರಚಾರಕ್ಕಾಗಿ ಮೀಸಲಿಡಿ. ಎಂಬಂತಹ ಎಲ್ಲರೂ ಅನುಸರಿಸಬಹುದಾದ, ಸರಳವಾಗಿ ಪಾಲಿಸಬಹುದಾದ ಸತ್ಯಗಳನ್ನು ಹೇಳಿಕೊಡುತ್ತಾ ನಮ್ಮನ್ನು ಬಿಟ್ಟು ಹೋದರು, ಆದರೆ ಅವರ ವಿಚಾರಗಳನ್ನು ನಮ್ಮ ಜೀವಿತಾವಧಿಯವರೆಗೆ ಪಾಲಿಸುವುದರ ಮುಖಾಂತರ ಅವರ ಕನಸಿನ ಭಾರತಕ್ಕೆ ಸಹಕರಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ಕಸಾಪ ಅಧ್ಯಕ್ಷ ಸಿದ್ದಯ್ಯ ಶಾಸ್ತ್ರಿ, ಪುರಸಭೆ ಮಾಜಿ ವಿರೋಧ ಪಕ್ಷದ ನಾಯಕ ಭೀಮಶ್ಯಾ ಜೀರೋಳ್ಳಿ, ಓಂ ಶಾಂತಿ ಕೇಂದ್ರದ ಸಂಚಾಲಕರಾದ ಬಿಕೆ ಮಹಾನಂದ, ಆರ್ ಎಸ್ ಎಸ್ ನ ಸಂಚಾಲಕ ಗುರುರಾಜ್ ವೈಷ್ಣವ, ಪತಂಜಲಿ ಯೋಗ ಶಿಕ್ಷಕ ಸಚಿನ್ ಆಂಜನೇಯ, ಮುಖಂಡರಾದ ಹರಿ ಗಲಾಂಡೆ, ಬಸವರಾಜ ಕಿರಣಗಿ, ಬಸವರಾಜ ಲೋಕನಹಳ್ಳಿ, ಶಿವಶಂಕರ ಕಾಶೆಟ್ಟಿ, ರವಿ ನಾಯಕ, ನೀಲಕಂಠ ಸಂಗಶೆಟ್ಟಿ,ವೀರೇಶ ಸ್ವಾಮಿ,ಸತೀಶ ಸಾವಳಗಿ,ಅಯ್ಯಣ್ಣ ದಂಡೊತಿ, ಮಲ್ಲಿಕಾರ್ಜುನ ಸಾತಖೇಡ, ಶ್ರೀಶೈಲ ಪುರಾಣಿಕ, ಪ್ರಮೋದ ಚೋಪಡೆ, ಯಂಕಮ್ಮ ಗೌಡಗಾಂವ, ಪ್ರೇಮಾವತಿ ಕಾಶೆಟ್ಟಿ, ಉಮಾಭಾಯಿ ಗೌಳಿ, ಸಂಗೀತ ಯಾರಿ, ಶಿವಲೀಲಾ ಪಾಟೀಲ, ಶರಣಮ್ಮಾ ಯಾದಗಿರ, ನಿರ್ಮಲ ಇಂಡಿ, ರಾಜೇಶ್ವರಿ ರಡ್ಡಿ, ಸಾವಿತ್ರಿ ಇಂಡಿ, ಸೀಮಾ ಶೆಟಗಾರ, ಪದ್ಮಾವತಿ ಕುಲಕರ್ಣಿ, ನಿರ್ಮಲಾ ಪಾಟೀಲ, ಸುನೀತಾ ಪಾಟೀಲ, ಪೂರ್ಣಿಮಾ ಹರನಾಳ, ಉಷಾ ಸುತ್ರಾವೆ, ನಿಂಗಮ್ಮ ವಸ್ತಾರೆ, ಶಾಂತಾಬಾಯಿ ನರೋಣಾ ಸೇರಿದಂತೆ ಅನೇಕರ ಪಾಲ್ಗೊಂಡಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!