Oplus_0

ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಬಿಜೆಪಿ ಧರಣಿ ಸತ್ಯಾಗ್ರಹ | ಸಚಿವ ಸಂಪುಟದಿಂದ ಬಿ.ನಾಗೇಂದ್ರ ವಜಾಗೊಳಿಸುವಂತೆ ಮುಖಂಡರ ಆಗ್ರಹ

ನಾಗಾವಿ ಎಕ್ಸಪ್ರೆಸ್

ಯಾದಗಿರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಸಚಿವ ಬಿ. ನಾಗೇಂದ್ರ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ ನೇತೃತ್ವದಲ್ಲಿ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಧರಣಿ ಸತ್ಯಾಗ್ರಹ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಬುಧವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಬಿ.ನಾಗೇಂದ್ರ ಇವರು 2024 ರಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಇರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದರಿಂದ ಅಂದಿನ ಅಧಿಕ್ಷಕರಾದ ಚಂದ್ರಶೇಖರ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು ಈ ಕುರಿತು ಇಡಿ ತನಿಖೆ ನಡೆಸಿ 2026 ರಲ್ಲಿ ಸಿಬಿಐ ಇವರು ದೋಷಾರೋಪ ಪಟ್ಟಿಯಲ್ಲಿ ಇವರ ಹೆಸರು ಇರುತ್ತದೆ. ಸದರಿ 187 ಕೋಟಿ ಹಣದಲ್ಲಿ 89.63 ಕೋಟಿ ಹಣವನ್ನು ನಕಲಿ ಖಾತೆಗಳು ಸೃಷ್ಟಿಸಿ ಆಂಧ್ರಪ್ರದೇಶದ ತೆಲಂಗಾಣ ರಾಜ್ಯಕ್ಕೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಇಡಿ ತನಿಖೆಯಲ್ಲಿ ತಿಳಿಸಿರುತ್ತದೆ. ಇದರಲ್ಲಿ 20.19 ಕೋಟಿ ಹಣ 2024 ರ ಲೋಕಸಭೆ ಚುನಾವಣೆಯಲ್ಲಿ ವೆಚ್ಚಮಾಡಲಾಗಿದೆ. ಸುಮಾರು 49.96 ಕೋಟಿ ಮೌಲ್ಯ ವಸ್ತುಗಳ ರೂಪದಲ್ಲಿ ಎಸ್ಐಟಿ ವಶಪಡಿಸಿಕೊಂಡಿದೆ, ಅದರಂತೆ 16.83 ಕೋಟಿ ನಗದು 16.25 ಕೆ.ಜಿ. ಚಿನ್ನ ಮತ್ತು 4.51 ಕೋಟಿ ಮೌಲ್ಯದ ಐಶಾರಾಮಿ ಕಾರುಗಳು ವಶಪಡಿಸಿಕೊಂಡಿರುವುದಾಗಿ ಅಂದಿನ ಎಸ್ಐಟಿ ತಿಳಿಸಿತ್ತು.

ಹೀಗಾಗಿ ಈ ಭ್ರಷ್ಟಾಚಾರ ಪ್ರಕರಣದಲ್ಲಿ ಬಿ. ನಾಗೇಂದ್ರ ಇವರ ವಿರುದ್ಧ SIT, ED, ಮತ್ತು CBI ಹೀಗೆ ಒಟ್ಟು 31 ಪ್ರಕರಣದಲ್ಲಿ ಇವರು ಪ್ರಮುಖ ಆರೋಪಿಯಾಗಿರುತ್ತಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ಪಾರದರ್ಶಕವಾಗಿರಬೇಕಾದ ಸಚಿವರು ಇಷ್ಟೆಲ್ಲ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಸಚಿವರಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಈ ಕುರಿತು ಪ್ರಮುಖ ಆರೋಪಿಯಾಗಿದ್ದರಿಂದಲೇ 2024 ರಲ್ಲಿ ರಾಜೀನಾಮೆ ನೀಡಿರುತ್ತಾರೆ. ಆದರೆ ಈಗ ಮತ್ತೆ ಇಂತಹ ಭ್ರಷ್ಟರಿಗೆ ಮಂತ್ರಿ ಸ್ಥಾನ ನೀಡಿರುವುದು ಬಿಜೆಪಿ ಮುಖಂಡರು ಬಲವಾಗಿ ಖಂಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಬಿಜೆಪಿ ಹಿರಿಯ ಮುಖಂಡ ರಾಚನಗೌಡ ಮುದ್ನಾಳ್ ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಮಹೇಶ್ ರೆಡ್ಡಿ ಮುದ್ನಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರತ್ನ ಕುಪ್ಪಿ, ಮೇಲಪ್ಪ ಗುಳಗಿ, ಪರಶುರಾಮ್ ಕುರಕುಂದಿ, ಸಿದ್ದನಗೌಡ ವಡಿಗೇರಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ್, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ವಡಿಗೇರಿ,  ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕೊಂಕಲ್, ಲಿಂಗಪ್ಪ ಹತ್ತಿಮನಿ, ರಮೇಶ್ ದೊಡ್ಡಮನಿ, ಲಕ್ಷ್ಮಿಪುತ್ರ ಮಾಲಿ ಪಾಟೀಲ, ದೇವೇಂದ್ರಪ್ಪ ಕೊನೆರ, ಪ್ರಭಾವತಿ ಕಲಾಲ್, ವೆಂಕಟಪ್ಪ ಅವಂಗಪುರ್, ನರಸಿಂಹಲು ನಿರೇಟಿ, ಸ್ವಾಮಿದೇವ ದಾಸನಕೇರಿ, ಮಲ್ಲಿಕಾರ್ಜುನ್ ಜಲ್ಲಪ್ಪನೂರ್, ಎಸ್ ಟಿ ಮೋರ್ಚ ಜಿಲ್ಲಾಧ್ಯಕ್ಷ ಚಂದಪ್ಪ ರಾಮಸಮುದ್ರ, ಚಂದ್ರಶೇಖರ್ ಕಡೆಸೂರ್, ಸಿದ್ದು ಪೂಜಾರಿ, ಚನ್ನವೀರಯ್ಯ ಸ್ವಾಮಿ ಹಿರೇಮಠ, ರಾಜಶೇಖರ್ ಸುಳ್ಳಳ್ಳಿ, ಶಿವರಾಜ್ ಗುತ್ತೇದಾರ, ಸುನಿತಾ ಚೌಹಾಣ್, ವಿಜಯಲಕ್ಷ್ಮಿ ನಾಯಕ್ ಭೀಮಬಾಯಿ ಸೆಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!