Oplus_0

ಯರಗಲ್‌ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಬ್ಯಾನರನ್ನು ಕಟ್ ಮಾಡಿ ಅವಮಾನಿಸಿದ ವ್ಯಕ್ತಿಯ ಬಂಧನ, ಒಂದೇ ವಾರದಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಯರಗಲ್ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ನವರ ಬ್ಯಾನರ್ ಹರಿದು ವಿಠಲ್ ಹೇರೂರು ಅವರ ಚಿತ್ರಕ್ಕೆ ಅವಮಾನಿಸಿದ ಚಂದ್ರಕಾಂತ ಶರಣಪ್ಪ ನಾಯ್ಕೋಡಿ ಆರೋಪಿಯನ್ನು ಒಂದೇ ವಾರದಲ್ಲಿ ಪತ್ತೆ ಮಾಡಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ತಾಲೂಕಿನ ಯರಗಲ್ ಗ್ರಾಮದಲ್ಲಿ ಕಳೆದ ಫೆ.26  ರಂದು ರಾತ್ರಿ 11 ಗಂಟೆಯಿಂದ ಫೆ.27 ಬೆಳಗಿನ 6 ಗಂಟೆಯ ಮದ್ಯದಲ್ಲಿ ಯಾರೋ ಕಿಡಿಗೇಡಿಗಳು ಅಂಬಿಗರ ಚೌಡಯ್ಯ ವೃತ್ತದ ಕಟ್ಟೆಯ ಮೇಲೆ ಕೋಲಿ ಸಮಾಜದವರು ಪೂಜೆ ಮಾಡುವ ಶ್ರೀ ಅಂಬಿಗರ ಚೌಡಯ್ಯ, ಶ್ರೀ ಮಾತಾಮಾಣಿಕೇಶ್ವರಿ, ಶ್ರೀ ವಿಠಲ್ ಹೇರೂರು ರವರ ಭಾವಚಿತ್ರಗಳಿರುವ ಬ್ಯಾನರದಲ್ಲಿನ ವಿಠಲ್ ಹೇರೂರು ರವರ ಭಾವಚಿತ್ರದ ಮುಖವನ್ನು ಕತ್ತರಿಸಿ ಸುಟ್ಟು ಅವಮಾನಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುತ್ತಾರೆ ಆದ್ದರಿಂದ ಕೂಡಲೇ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಕೋಲಿ ಸಮಾಜದ ಮುಖಂಡರು ನೀಡಿದ ದೂರಿನ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 13/2025 ಕಲಂ 298 ಬಿಎನ್ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಮಾ.4 ರಂದು ಅಪಾರ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ಶ್ರೀಶೈಲ್ ಅಂಬಾಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ಹೆಚ್ ಸಿ, ಸವಿಕುಮಾರ ಸಿಪಿಸಿ, ರವಿಕುಮಾರ ಸಿಪಿಸಿ, ದತ್ತಾತ್ರೇಯ ಪಿಸಿ ರವರನ್ನೊಳಗೊಂಡ ತಂಡ ಆರೋಪಿ ಚಂದ್ರಕಾಂತ ಶರಣಪ್ಪ ನಾಯ್ಕೋಡಿ (30) ಯರಗಲ್ ಇತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ, ತಾನು ಯರಗಲ್ ಗ್ರಾಮದ ಅಂಬಿಗರ ಚೌಡಯ್ಯ ವೃತ್ತದ ಕಟ್ಟೆಯ ಮೇಲೆ ಇಟ್ಟಿರುವ ಬ್ಯಾನರದಲ್ಲಿನ ವಿಠಲ್ ಹೇರೂರು ಭಾವಚಿತ್ರ ಮುಖವನ್ನು ಬ್ಲೇಡನಿಂದ ಕಟ್ ಮಾಡಿ ಅಲ್ಲಿಯೇ ಕಟ್ಟೆ ಮುಂದೆ ಸುಟ್ಟು ಹಾಕಿರುವುದಾಗಿ ತಿಳಿಸಿರುತ್ತಾನೆ. ಕಂಡ ಕಂಡಲ್ಲಿ ಅನುಮತಿ ಇಲ್ಲದೇ ಸಮಾಜದ ಹಿರಿಯರ, ಆರಾಧ್ಯ ಪುರುಷರ ಭಾವಚಿತ್ರಗಳ ಬ್ಯಾನರನ್ನು ಇಟ್ಟು ಅವಮಾನ ಮಾಡುತ್ತಿದ್ದರಿಂದ ಇದು ಸರಿ ಅಲ್ಲ ಎಂದು ತಾನು ವಿಚಾರ ಮಾಡಿ ಈ ರೀತಿಯಾಗಿ ಕಟ್ ಮಾಡಿದರೇ ಸಮಾಜದವರು ಕೂಡಿ ತೆಗೆದುಕೊಂಡ ಜಾಗದಲ್ಲಿ ಗುಡಿ ಕಟ್ಟಿ ಅಲ್ಲೆ, ಬ್ಯಾನರ ಇಡುತ್ತಾರೆ ಅಂತಾ ನಾನು ಫೆ.27 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಟ್ ಮಾಡಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿರುತ್ತದೆ  ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸದರಿ ಬ್ಯಾನರ ಕಟ್ ಮಾಡಿದ ವ್ಯಕ್ತಿಯನ್ನು ಕೇವಲ ಒಂದೇ ವಾರದಲ್ಲಿ ಪತ್ತೆ ಮಾಡಿ ಬಂಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯಕ್ಕೆ ಮೇಲಾಧಿಕಾರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!