ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವುದು ಖಂಡನೀಯ: ಗಂಗಾಣಿ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಕಲ್ಯಾಣ ಕರ್ನಾಟಕದ ಹಿಂದೂ ಹುಲಿ, ಯುವಕರ ಕಣ್ಮಣಿ, ಫೈಯರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ ರವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಿಜೆಪಿಯ ದೊಡ್ಡ ಆಸ್ತಿ ಎಂದರೆ ಬಸನಗೌಡ ಪಾಟೀಲ ಅವರನ್ನು ಉಚ್ಚಾಟನೆ ಮಾಡಿರುವುದರಿಂದ ಹೈದ್ರಾಬಾದ್ ಕರ್ನಾಟಕ ಭಾಗದ ಕಾರ್ಯಕರ್ತರಲ್ಲಿ ದೊಡ್ಡ ಆಘಾತವಾಗಿದೆ. ಯತ್ನಾಳ ಗೌಡರ ಉಚ್ಚಾಟನೆ ಆದೇಶವನ್ನು ಮರು ಪರಿಶೀಲಿಸಿ ತಕ್ಷಣ ಮರಳಿ ಪಕ್ಷಕ್ಕೆ ತರಬೇಕು ಮತ್ತು ಈಗ ಮಾಡಿರುವ ತಪ್ಪಿಗಾಗಿ ಕರ್ನಾಟಕ ರಾಜ್ಯದ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಯತ್ನಾಳ್ ಉಚ್ಚಾಟನೆ ಮಾಡಿ ಭ್ರಷ್ಟಾಚಾರ ಕುಟುಂಬ ರಾಜಕೀಯಕ್ಕೆ ನಮ್ಮ ಬೆಂಬಲ ಅಂತ ಬಿಜೆಪಿ ವರಿಷ್ಠರು ತೋರಿಸಿದ್ದಾರೆ. ಹಿಂದುಗಳ ಪರವಾಗಿ ಮಾತನಾಡಿದ್ದು ತಪ್ಪಾಯ್ತಾ? ವಕ್ಫ್ ವಿರುದ್ಧ ಹೋರಾಟ ಮಾಡಿದ್ದು ತಪ್ಪಾಯ್ತಾ? ರೈತರ ಹಾಗೂ ಉತ್ತರ ಕರ್ನಾಟಕದ ಪರವಾಗಿ ಧ್ವನಿ ಎತ್ತಿದ್ದು ತಪ್ಪಾಯ್ತಾ? ಕಾಂಗ್ರೆಸ್ ಜೊತೆ ಅಡ್ಜಸ್ಟಮೆಂಟ್ ರಾಜಕೀಯ ಅಂತ ಹೇಳಿದ್ದು ತಪ್ಪಾಯ್ತಾ? ಈಗ 60 ಸೀಟ್ ಬಂದಿದೆ ಮುಂದಿನ ದಿನಮಾನದಲ್ಲಿ ಆರು ಬರುವ ಲಕ್ಷಣವೂ ಇಲ್ಲ ಕೂಡಲೇ ಎಚ್ಚೆತ್ತುಕೊಂಡು ಮಾಡಿರುವ ತಪ್ಪನ್ನು ಸರಿಪಡಿಸಿ ಕೂಡಲೇ ಉಚ್ಛಾಟನೆ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ಹಿಂದುಳಿದ ಪ್ರದೇಶ ಕಲ್ಯಾಣ ಕರ್ನಾಟಕ ಭಾಗದ ಚಿಂಚೋಳಿ ತಾಲೂಕಿನಲ್ಲಿ ಕಬ್ಬು ಬೆಳೆಯುವ ಆಸಕ್ತಿ ಇರುವ ಕಬ್ಬು ಬೆಳೆಯುವ ರೈತರ ಕನಸು ಕಾಣುತ್ತಿರುವ ಚಿಂಚೋಳಿ ಸಕ್ಕರೆ ಕಾರ್ಖಾನೆ ಬಹಳ ದಿನಗಳ ಕಾಲ ಸಕ್ಕರೆ ಕಾರ್ಖಾನೆ ತುಕ್ಕು ಹಿಡಿದಿತ್ತು, ತುಕ್ಕು ಬಿಡಿಸಿ ಕಬ್ಬು ಬೆಳೆಗಾರರ ನೆರವಿಗೆ ಸಿದ್ದ ಸರಿ ಯೆಥಿನಾಲ್ ಪವರ್ ಮತ್ತು ಸಕ್ಕರೆ ಕಾರ್ಖಾನೆ ಕಾರ್ಖಾನೆ ಪ್ರಾರಂಭಿಸಿ ರೈತರ ಕಣ್ಣಿರು ಒರೆಸಿದ ಮಹಾನ ನಾಯಕರಾಗಿದ್ದಾರೆ. ಕಾರ್ಖಾನೆ ಪ್ರಾರಂಭ ಮಾಡಿ ರೈತರಿಗೆ ಆನೆ ಬಲ ತುಂಬಿದ ಮಹಾನ್ ಚೇತನ, ಚಿಂಚೋಳಿ, ಕಾಳಗಿ, ಕಮಲಾಪುರ, ಚಿತ್ತಾಪುರ, ಸೇಡಂ ಹುಮನಾಬಾದ್ ಮಹಾಗಾಂವ, ಬೀದರ ಹೀಗೆ ಅನೇಕ ತಾಲೂಕು ರೈತರು ಕೊಂಡಾಡಿದ್ದಾರೆ ಯತ್ನಾಳ್ ಅವರು ನೂರಾರು ವರ್ಷಗಳ ಕಾಲ ಬದುಕಿ ಬಾಳಲಿ ಶುಭಹಾರೈಸುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಬಿಜೆಪಿ ಪಕ್ಷದಲ್ಲಿ ಕುಟುಂಬ ರಾಜಕಾರಣ ಗಬ್ಬು ವಾಸನೆ ಎದ್ದು ಕಾಣುತ್ತದೆ, ಇದರಿಂದ ಬಿಜೆಪಿ ಪಕ್ಷಕ್ಕೆ ವಿಧಾನ ಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿದೆ ಹೀಗಾಗಿ ಬಕೆಟ್ ಹಿಡಿಯುವರಿಗೆ ಮಾತ್ರ ಮಣೆ ಹಾಕುವ ಮತ್ತು ಉದ್ದೇಶಪೂರ್ವಕವಾಗಿ ದ್ವೇಷದ ರಾಜಕಾರಣ ಮಾಡುತ್ತಿರುವ ಬಗ್ಗೆ ಇದ್ದಿದ್ದು ಇದ್ದಂಗೆ ಮಾತಾಡಿದರೆ ಕುಟುಂಬ ರಾಜಕಾರಣ ಮಾಡೊರು ಮಾತು ಕೇಳಿ ಬಸನಗೌಡ ಪಾಟೀಲ್ ಯತ್ನಾಳರನ್ನು ಉಚ್ಛಾಟನೆ ಮಾಡಿದ್ದು ಉಗ್ರವಾಗಿ ಖಂಡಿಸುತ್ತೇವೆ, ಬಸನಗೌಡ ಪಾಟೀಲ್ ರಿಗೆ ಅನ್ಯಾಯ ಮಾಡಿದ್ದು ನಾವು ಸಹಿಸುವದಿಲ್ಲ ಅವಳಿ ತಾಲೂಕಾದ ಚಿಂಚೋಳಿ ಮತ್ತು ಕಾಳಗಿ ಬಸನಗೌಡ ಪಾಟೀಲ್ ರವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮಶೇಖರಯ್ಯ ಮಠ, ರೇವಣಸಿದ್ದಯ್ಯ ಮಠಪತಿ ಪಂಗರಗಿ, ಅಶೋಕ್ ಕುಮಾರ್ ಪಾಟೀಲ್ ಪಂಗರಗಿ, ಭೀಮಶಂಕರ್ ಲಿಂಗಶೆಟ್ಟಿ ತೇಗಲತಿಪ್ಪಿ, ಬಸವರಾಜ್ ಪಟ್ಟಣ್ ಕೊಡದೂರುರಮೇಶ್ ಅಡಕಿ ಕೊಡ್ಲಿ, ಪ್ರದೀಪ್ ಪಾಟೀಲ್ ಸುಂಠಾಣ, ಸೂರ್ಯಕಾಂತ್ ಪೂಜಾರಿ ಸುಂಠಾಣ, ಸೈಬಣ್ಣ ಮುಕರಂಭ ಇದ್ದರು.
“ಹಿಂದೂ ಸಮಾಜಕ್ಕೆ ಬೆನ್ನೆಲುಬಾಗಿ ತಮ್ಮ ಜೀವವನ್ನೆ ಮುಡುಪಾಗಿ ಇಟ್ಟ ಬಸನಗೌಡ ಪಾಟೀಲ್ ಯತ್ನಾಳ ಹಗಲಿರುಳು ಎನ್ನದೆ ಹಿಂದು ಸಮಾಜಕ್ಕಾಗಿ ಶ್ರಮಿಸುತ್ತಿರುವ ಹಿಂದು ಹುಲಿ ಎಂದೆ ತನ್ನದೆ ಆದ ಛಾಪು ಮುಡಿಸಿದ್ದಾರೆ ಹೀಗಾಗಿ ಇವರ ಉಚ್ಛಾಟನೆ ಬಿಜೆಪಿ ವರಿಷ್ಠರು ಕೂಡಲೇ ವಾಪಸ್ ಪಡೆಯಬೇಕು”.-ವೀರಣ್ಣ ಗಂಗಾಣಿ ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರು ಕಾಳಗಿ.