Oplus_0

ಇಂಗಳಗಿ ಅಂಗನವಾಡಿ ಕಾರ್ಯಕರ್ತೆ ಶೇಖಮ್ಮ ಕುರಿ ಕರ್ತವ್ಯಕ್ಕೆ ಸತತ ಗೈರು, ಅಮಾನತು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕಿನ ಇಂಗಳಗಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಶೇಖಮ್ಮ ಕುರಿ ತಮ್ಮ ಕರ್ತವ್ಯಕ್ಕೆ ಹಾಜರಾಗದೇ ಸತತ ಗೈರು ಇದ್ದು, ಅಕ್ರಮವಾಗಿ ವೇತನ ಪಡೆಯುತ್ತಿರುವುದನ್ನು ಖಂಡಿಸಿ, ಕಾರ್ಯಕರ್ತೆಯನ್ನು ಹುದ್ದೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ಮಂಗಳವಾರ ಗ್ರಾಮ ಪಂಚಾಯತಿ ಎದುರು ಇಂಗಳಗಿ ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಇಂಗಳಗಿ ಗ್ರಾಮದ ಅಂಗನವಾಡಿ ಕೇಂದ್ರ-1ರ ಕಾರ್ಯಕರ್ತೆ ಶೇಖಮ್ಮ ಕುರಿ ಅವರು ನಾನು ಕಮ್ಯೂನಿಸ್ಟ್ ಲೀಡರ್ ಎಂದು ಹೇಳಿಕೊಂಡು, ತಮ್ಮ ಕರ್ತವ್ಯಕ್ಕೆ ಸತತ ಗೈರು ಹಾಜರಿ ಇದ್ದು, ಕೇಂದ್ರಕ್ಕೆ ಹೋಗುವುದಿಲ್ಲ. ಮಕ್ಕಳಿಗೆ ಸರಿಯಾದ ಪೌಷ್ಟಿಕ ಆಹಾರ ಕೂಡ ವಿತರಣೆ ಮಾಡುವುದಿಲ್ಲ. ಕಳೆದ 15 ವರ್ಷಗಳಿಂದ ತಮ್ಮ ರಾಜಕೀಯ ಪ್ರಭಾವ ಬೀರಿ, ಅಂಗನವಾಡಿ ಕೇಂದ್ರದ ಕೆಲಸ ಮಾಡದೇ ಅಕ್ರಮವಾಗಿ ವೇತನ ಪಡೆಯುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೇ ಸುಳ್ಳು ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ವತಿಯಿಂದ ಆಚರಿಸುವ ಯಾವುದೇ ಜಯಂತಿ ಅಂಗನವಾಡಿ ಕೇಂದ್ರದಲ್ಲಿ ಆಚರಣೆ ಮಾಡುವುದಿಲ್ಲ. ಕೇಳಿದರೇ ನಾನು ಒಂದು ಸಂಘಟನೆ ಜಿಲ್ಲಾ ಲೀಡರ್ ಇದ್ದೇನೆ. ನನಗೆ ಬಹಳಷ್ಟು ಕೆಲಸಗಳು ಇವೆ. ಅಧಿಕಾರಿಗಳೇ ಕೇಳುವುದಿಲ್ಲ. ನೀವು ಯಾರು ಕೇಳುವರು ಎಂದು ಬೆದರಿಕೆ ಹಾಕುತ್ತಾರೆ. ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ಇಲಾಖೆ ಗ್ರೂಪ್ ನಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಕರ್ತವ್ಯಕ್ಕೆ ದ್ರೋಹ ಬಗೆದರೂ ಯಾವ ಅಧಿಕಾರಿಗಳು ಕೇಳುತ್ತಿಲ್ಲ ಎಂದು ಸಿಡಿಪಿಓ ವಿರುದ್ಧ ಸಮಿತಿ ಕಾರ್ಯದರ್ಶಿ ಕಾಶೀನಾಥ್ ಚನ್ನಗುಂಡ ಗುಡುಗಿದರು.

ಕರ್ತವ್ಯದಲ್ಲಿ ಇದ್ದಾಗಲೇ ಗ್ರಾಮ ಪಂಚಾಯತಿ ಮತ್ತು ಮನರೇಗಾದಲ್ಲಿ ನಡೆಯುವ ಕಾಮಗಾರಿ ಸ್ಥಳಕ್ಕೆ ಹೋಗಿ. ಹಸ್ತಕ್ಷೇಪ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಕೆಲಸ ಕೊಡಿಸುವ ನೆಪದಲ್ಲಿ ಅವರ ಬೆಂಬಲಿಗರಿಗೆ ಮತ್ತು ಕುಟುಂಬದ ಸದಸ್ಯರಿಗೆ ಬೋಗಸ್ ಹಾಜರಿ ಹಾಕಿ, ಮನರೇಗಾ ಹಣ ಲೂಟಿ ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೇ ಗ್ರಾಮದಲ್ಲಿ ಕೂಲಿಕಾರರ ಸಂಘಟನೆಯಿಂದ ನಿಮ್ಮ ವಿರುದ್ಧವೇ ಹೋರಾಟ ನಡೆಸುತ್ತೇನೆ ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಗ್ರಾ.ಪಂ. ಮನರೇಗಾದಲ್ಲಿ ಈ ರೀತಿ ಹಸ್ತಕ್ಷೇಪ ಮಾಡುವುದಕ್ಕೆ ಅನುಮತಿ ನೀಡಿದವರೂ ಯಾರು ಎಂದು ಅಧಿಕಾರಿಗಳ ವಿರುದ್ಧ ಸಂಘದ ಉಪಾಧ್ಯಕ್ಷ ಚಂದ್ರಕಾಂತ ಹೂಗಾರ್ ಕಿಡಿ ಕಾರಿದರು.

ಕೇಂದ್ರಕ್ಕೆ ಗೈರು ಇದ್ದು, ತಿಂಗಳ ವೇತನ ಪಡೆಯುತ್ತಾರೆ. ಇದಕ್ಕೆ ಹೊಣೆ ಅಂಗನವಾಡಿ ಕೇಂದ್ರದ ವಲಯ ಮೇಲ್ವಿಚಾರಕಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕೃಪಾಟಕ್ಷದಿಂದಲೇ ಮಕ್ಕಳ ಹಣವನ್ನು ಅಕ್ರಮವಾಗಿ ವೇತನ ರೂಪದಲ್ಲಿ ಪಡೆಯುತ್ತಿದ್ದಾರೆ. ನೈತಿಕತೆ ಇದ್ದರೇ ಇಲ್ಲಿಯವರೆಗೆ ಅಕ್ರಮವಾಗಿ ಪಡೆದ ವೇತನ ಸರ್ಕಾರಕ್ಕೆ ಹಿಂದುರಿಗಿಸಬೇಕು ಎಂದು ಗ್ರಾಮ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಧ್ಯಕ್ಷ ಗೌಸ್ ದುದ್ದನಿ ಆಗ್ರಹಿಸಿದರು.

ಮನರೇಗಾದಲ್ಲಿ ತಮ್ಮ ಬೆಂಬಲಿಗರಿಗೆ ಮತ್ತು ಕುಟುಂಬದ ಸದಸ್ಯರಿಗೆ ಬೋಗಸ್ ಹಾಜರಿ ಹಾಕಿ, ಮನರೇಗಾ ಹಣ ಲೂಟಿ ಮಾಡುತ್ತಿರುವುದನ್ನು ತಡೆದು, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅಂಗನವಾಡಿ ಕೇಂದ್ರದ ಕರ್ತವ್ಯಕ್ಕೆ ಹಾಜರಾಗದೇ ಅಕ್ರಮವಾಗಿ ವೇತನ ಪಡೆಯುವುದಕ್ಕೆ ಸಹಕಾರ ನೀಡುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗೌಸ್ ದುದ್ದನಿ, ಕಾಶೀನಾಥ್ ಚನ್ನಗುಂಡ, ಡಾ.ಸಾಯಬಣ್ಣಾ ಗುಡುಬಾ, ಚಂದ್ರಕಾಂತ ಹೂಗಾರ್, ವೆಂಕಟಿಗಿರಿ, ಕಟ್ಟಿಮನಿ, ಶರಣು ರಾವೂರ, ಶಿವಕುಮಾರ್ ತೆಳಗೆರಿ, ಶ್ರೀಕಾಂತ್ ತೆಳಗೆರಿ, ಅಶೋಕ ರಾಠೋಡ, ಮಂಜುನಾಥ ಕರದಳ್ಳಿ, ಶಿಲ್ಪಾ ತೆಳಗೆರಿ, ರಿಜವಾನ್, ಖದೀರ್ ಪಾಷಾ, ಸುನಿತಾ ರಾಠೋಡ, ಗೀತಾ, ಶಾಂತಕುಮಾರ ಗುಡುಬಾ, ಆನಂದ ಪೂಜಾರಿ ಭಾಗವಹಿಸಿದ್ದರು. ಗ್ರಾಮ ಪಂಚಾಯತಿ ಕಾರ್ಯದರ್ಶಿ ಸಂಗಮೇಶ ಮನವಿ ಪತ್ರ ಸ್ವೀಕರಿಸಿದರು. ಅಕೌಂಟೆಂಟ್ ಸಿದ್ರಾಮಪ್ಪ ವಗ್ಗನ್, ಬಿಲ್ ಕಲೆಕ್ಟರ್ ರವಿ ಅಳ್ಳೋಳ್ಳಿ ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!