ಚಿತ್ತಾಪುರ ನಾಸರ್ ಜಂಗ್ ಏರಿಯಾದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ ನಂ.8 ರ ನಾಸರ್ ಜಂಗ್ ಏರಿಯಾದ ಕುಡಿಯುವ ನೀರಿನ ಸಮಸ್ಯೆ ಶೀಘ್ರವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು, ಮಹಿಳೆಯರು ಖಾಲಿ ಕೊಡಗಳೊಂದಿಗೆ ಪುರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಗುರುವಾರ ನಡೆಯಿತು.
ರಾಜು ರಾಠೋಡ ಮಾತನಾಡಿ, ಈಗಾಗಲೇ ವಾರ್ಡ ನಂ.8 ರ ನಾಸರ್ ಜಂಗ್ ಏರಿಯಾದಲ್ಲಿ ಸುಮಾರು 100-150 ಕ್ಕಿಂತ ಹೆಚ್ಚಿನ ಮನೆಗಳು ಇರುತ್ತವೆ. ಆದರೆ ಸದರಿ ನಮ್ಮ ಏರಿಯಾ ಎತ್ತರದಲ್ಲಿರುವ ಕಾರಣ ನಮ್ಮ ಏರಿಯಾಗೆ ನೀರು ಬರುತ್ತಿಲ್ಲಾ. ಸುಮಾರು ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗಿರುತ್ತದೆ. ಇದರಿಂದ ಸದರಿ ಏರಿಯಾದ ನಿವಾಸಿಗಳು ನೀರಿಗಾಗಿ ಪರದಾಡುತ್ತಿದ್ದಾರೆ. ಸುಮಾರು 1 ಕಿ.ಮಿ. ನಡೆದುಕೊಂಡು ನೀರು ತರುವಂತ ಪರಸ್ಥಿತಿ ಉಂಟಾಗಿರುತ್ತದೆ. ಆದರೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸಹಿತ ನಮ್ಮ ಮನವಿಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ಏರಿಯಾದಲ್ಲಿ ನೀರಿನ ಮಟ್ಟ ಚೆಕ್ ಮಾಡಿಸಿ ಬೊರ್ವೆಲ್ ಹಾಕಿಸಿ ಮೊಟರ್ ಕೂಡಿಸಿ ಪೈಪ್ ಲೈನ್ ಸಂಪರ್ಕ ಕಲ್ಪಿಸಿ ನೀರಿನ ಅನುಕೂಲ ಮಾಡಿಸಿಕೊಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು. ನಾಲ್ಕೈದು ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ವೆಂಕಟೇಶ ಭಜನ್ ಚವ್ಹಾಣ, ವಿಠಲ್ ರೂಪ್ಲಾ ಚವ್ಹಾಣ, ರಾಜು ಸಿ.ರಾಠೋಡ, ವೆಂಕಟೇಶ ಮೋಹನ ರಾಠೋಡ, ಸುಂಕಾ ಚೌಡಪ್ಪ, ಮನೋಹರ ರಾಠೋಡ, ರಾಜು ಮಾರುತಿ, ರಾಜು ಚೌಡಪ್ಪ, ಗುಂಡಮ್ಮ ಚೌಡಪ್ಪ, ಕಮಲಾಬಾಯಿ ಸುಂಕಪ್ಪ, ಕಾವೇರಿ ವೆಂಕಟೇಶ, ಲಕ್ಷ್ಮೀ ಹುಸನಪ್ಪ, ರಾಮಲಮ್ಮ ತಿರುಪತಿ, ಲಕ್ಷ್ಮೀ ವೆಂಕಟೇಶ ಸೇರಿದಂತೆ ಇತರರು ಇದ್ದರು.

