ಚಿತ್ತಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪತಂಜಲಿ ಯೋಗ ಸಮಿತಿ, ಭಾರತ ಸ್ವಾಭಿಮಾನ ಟ್ರಸ್ಟ್, ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಿತ್ತಾಪುರ (ಟೌನ್ 182) ಇವರ ಸಹಯೋಗದಲ್ಲಿ 12ನೆಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಸತಿ ಶಾಲೆಯ ರಂಗಮಂಟಪದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಮಿತಿಯ ತಾಲೂಕು ಅಧ್ಯಕ್ಷ ವೀರಣ್ಣ ಶಿಲ್ಪಿ ಅವರು ಉದ್ಘಾಟನೆಯನ್ನು ನೆರವೇರಿಸಿ, ಯೋಗ ಶಿಕ್ಷಣವನ್ನು ನೀಡುತ್ತಾ ಯೋಗವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ನಿತ್ಯ ಯೋಗವನ್ನು ಮಾಡಬೇಕು ಎಂದು ವಸತಿ ಶಾಲೆಯ ಮಕ್ಕಳಿಗೆ ತಿಳಿಸಿದರು.
ಪತಂಜಲಿ ಯೋಗ ಸಮಿತಿಯ ಮಹಿಳಾ ತಾಲೂಕು ಪ್ರಭಾರಿ ಸುವರ್ಣ ವಿ ಶಿಲ್ಪಿ ಇವರು, ಯೋಗವು ದಿನನಿತ್ಯ ಮಾಡುವುದರಿಂದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯುತ್ತಮ ಔಷಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಸತಿ ಶಾಲೆಯ ಪ್ರಾಚಾರ್ಯ ಬಸವರಾಜ ಅವಂಟಿ, ದೈಹಿಕ ಶಿಕ್ಷಣದ ಶಿಕ್ಷಕಿ ವಿಜಯಲಕ್ಷ್ಮಿ ಡಿ ಗೋನಾಲ್, ಸಮಾಜ ವಿಜ್ಞಾನ ಶಿಕ್ಷಕ ಶ್ರೀಶೈಲ್ ಬಿ ಆಲಳ್ಳಿ, ಸ್ಟಾಫ್ ನರ್ಸ್ ಶಾಂತಾಬಾಯಿ ಭಜಂತ್ರಿ, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳಾದ ಜಗನ್ನಾಥ್ ಮಂಗಲಗಿ, ದೇವಿಂದ್ರಪ್ಪ ಸಜ್ಜನ್, ಮಹದೇವಪ್ಪ ಹೇರೂರು, ಮಲ್ಲಿಕಾರ್ಜುನ್, ರಾಜು ಶಿರ್ಪಾ, ಉಪಸ್ಥಿತರಿದ್ದರು. ಚಿತ್ರಕಲಾ ಶಿಕ್ಷಕ ನಟರಾಜ್ ಶಿಲ್ಪಿ ವಂದಿಸಿದರು.

