ಚಿತ್ತಾಪುರ ಕ್ಷೇತ್ರದ ಹಳ್ಳಿಗಳಿಗೆ ಕಮಕನೂರ ಭೇಟಿ ಎಲ್ಲೆಡೆ ಅದ್ದೂರಿ ಸ್ವಾಗತ | ಅನುದಾನದ ಹೊಳೆ ಹರಿಸಿದ ಕಮಕನೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮೂರನೇ ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ತಿಪ್ಪಣ್ಣಪ್ಪ ಕಮಕನೂರ ಚಿತ್ತಾಪುರ ಮತಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ, ಮಠಗಳಿಗೆ ಹಾಗೂ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಾಗೂ ಕೋಲಿ ಸಮಾಜದ ಮುಖಂಡರಿಗೆ ಸಹಾಯ ಸಹಕಾರದ ನುಡಿಗಳನ್ನು ಹೇಳಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ ಹಾಗೂ ವಿವಿಧ ದೇವಸ್ಥಾನಗಳಿಗೆ, ಮಠಗಳಿಗೆ ಅನುದಾನದ ಹೊಳೆ ಹರಿಸಿದ್ದಾರೆ.
ಚಿತ್ತಾಪುರ ಪಟ್ಟಣದ ಕಂಬಳೇಶ್ವರ ಮಠಕ್ಕೆ ಭೇಟಿ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಪೂಜ್ಯ ಸೋಮಶೇಖರ ಶಿವಾಚಾರ್ಯರರಿಂದ ಆಶೀರ್ವಾದ ಪಡೆದುಕೊಂಡರು, ಕಲ್ಯಾಣ ಮಂಟಪದ ನವೀಕರಣಕ್ಕೆ 15 ಲಕ್ಷ ಅನುದಾನ ನೀಡುವಂತೆ ಶ್ರೀಗಳು ಮನವಿ ಮಾಡಿದಾಗ ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಕಮಕನೂರ ಭರವಸೆ ನೀಡಿದರು.
ಅಳ್ಳೋಳ್ಳಿ: ಗ್ರಾಮದ ಸಾವಿರ ದೇವರ ಸಂಸ್ಥಾನ ಮಠಕ್ಕೆ ಬೇಟಿ ನೀಡಿ ಪೂಜ್ಯ ಸಂಗಮನಾಥ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡು ಕೆಲ ಹೊತ್ತು ಸಮಯ ಕಳೆದರು. ಮಠದ ಅಭಿವೃದ್ಧಿಯ ನೀಲನಕ್ಷೆ ತಯ್ಯಾರಿಸಿ ಅಗತ್ಯ ಅನುದಾನ ನೀಡುವುದಾಗಿ ಪೂಜ್ಯರಿಗೆ ಭರವಸೆ ನೀಡಿದರು. ಇದೇ ವೇಳೆ ಕೋಲಿ ಸಮಾಜದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಶ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನಂತರ ಗದ್ದುಗೆ ಮಠಕ್ಕೆ ಭೇಟಿ ನೀಡಿ ಪೂಜ್ಯ ನಾಗಪ್ಪಯ್ಯ ಮಹಾಸ್ವಾಮಿಗಳಿಂದ ಆಶೀರ್ವಾದ ಪಡೆದುಕೊಂಡರು.
ದಂಡಗುಂಡ: ಗ್ರಾಮದ ಬಸವಣ್ಣ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಅವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಮಕನೂರ, ಈಗಾಗಲೇ ಕಲ್ಯಾಣ ಮಂಟಪದ ಅಭಿವೃದ್ಧಿಗೆ 10 ಲಕ್ಷ ಅನುದಾನ ನೀಡಿದ್ದೇನೆ ಈಗ ಸಂಕನೂರ ಅವರ ಮನವಿಯಂತೆ ಇನ್ನೂ 10 ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ಭಕ್ತರ ದೇಣಿಗೆಯಿಂದ ಭವ್ಯವಾದ ದೇವಸ್ಥಾನ ನಿರ್ಮಾಣ ಆಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲೂರ ಬಿ.: ಗ್ರಾಮಕ್ಕೆ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಗ್ರಾಮಸ್ಥರು ಡೊಳ್ಳು ಬಾಜಾಭಜಂತ್ರಿ ಮೂಲಕ ಅದ್ದೂರಿಯಾಗಿ ಸ್ವಾಗತಿಸಿ ದುರ್ಗಾಪರಮೇಶ್ವರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮದ ಅಭಿವೃದ್ಧಿಗೆ 25 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು. ಯಾವುದೇ ಕೆಲಸ ಕಾರ್ಯಗಳು ಇರಲಿ ನೇರವಾಗಿ ನನಗೆ ಭೇಟಿ ನೀಡಿ, ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೋಲಿ ಸಮಾಜದ ತಾಲೂಕು ಯುವ ಅಧ್ಯಕ್ಷ ಮಲ್ಲಿಕಾರ್ಜುನ ಅಲ್ಲೂರಕರ್, ಶರಣಪ್ಪ ನಾಶಿ, ಸುಧೀರ್ ವಿಜಾಪುರಕರ್, ಮಹಾದೇವ ಬೋನಿ, ಶಂಕರ ವಿಜಾಪೂರಕರ್, ಮಹಾದೇವ ಕೊನಿಗೇರಿ ಸೇರಿದಂತೆ ಇತರರು ಇದ್ದರು.
ಡೋಣಗಾಂವ: ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಪ್ರಥಮ ಬಾರಿಗೆ ಗ್ರಾಮಕ್ಕೆ ಭೇಟಿ ನೀಡುತ್ತಿದ್ದಂತೆ ಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು. ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಲಿ ಸಮಾಜದ ಸಮುದಾಯ ಭವನಕ್ಕೆ ಹಾಗೂ ಮೂರ್ತಿ ಸ್ಥಾಪನೆಗೆ ಅಗತ್ಯ ಅನುದಾನ ನೀಡಲಾಗುವುದು ಸಚಿವ ಪ್ರಿಯಾಂಕ್ ಖರ್ಗೆ ಅವರಿಂದ ಉದ್ಘಾಟಿಸಿಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖಂಡರಾದ ಕಾಶಪ್ಪ ಡೋಣಗಾಂವ, ಮಲ್ಲಿಕಾರ್ಜುನ ಹೊನ್ನಪುರ, ಶರಣಪ್ಪ ಹೊನ್ನಪುರ, ಶರಣು ಡೋಣಗಾಂವ, ಶರಣಗೌಡ ಪಾಟೀಲ, ಶಿವಶರಣ ಮೆಂಗಾ ಸೇರಿದಂತೆ ಇತರರು ಇದ್ದರು.
ತಿಪ್ಪಣ್ಣಪ್ಪ ಕಮಕನೂರ ಅವರ ಹಳ್ಳಿಗಳ ಪ್ರವಾಸಕ್ಕೆ ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ, ಮುಖಂಡರಾದ ಭೀಮಣ್ಣ ಸೀಬಾ, ಗುಂಡು ಐನಾಪೂರ, ಅರವಿಂದ ಚವ್ಹಾಣ, ಜಯಪ್ರಕಾಶ್ ಕಮಕನೂರ, ಸಾಬಣ್ಣ ಡಿಗ್ಗಿ, ಅಭಿಷೇಕ್ ಸಣ್ಣೂರಕರ್, ಸಂದೇಶ ಕಮಕನೂರ, ಸುರೇಶ್ ಕಮಕನೂರ, ಸಾಬಣ್ಣ ಭರಾಟೆ, ಸಿದ್ದು ಸಣ್ಣೂರಕರ್, ಶರಣು ಅರಣಕಲ್ ಅವರು ಸಾಥ್ ನೀಡಿದರು.

