ಪಿಎಲ್’ಡಿ ಬ್ಯಾಂಕ್ ವತಿಯಿಂದ ಸಹಕಾರ ಸಪ್ತಾಹ ಆಚರಣೆ | ಮನೆಗೊಂದು ಮಗುವಿನಂತೆ ಮರ ಬೆಳೆಸಿ: ಭೀಮಣ್ಣ ಸಾಲಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮನೆಗೊಂದು ಮಗುವಿನಂತೆ ಮನೆಗೊಂದು ಮರವನ್ನು ಬೆಳೆಸಬೇಕು ಎಂದು ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಆವರಣದಲ್ಲಿ ಮಂಗಳವಾರ ಸಹಕಾರ ಸಪ್ತಾಹ ಆಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಗುವನ್ನು ಲಾಲನೆ ಪಾಲನೆ ಮಾಡಿ ಯಾವ ರೀತಿ ಬೆಳೆಸುತ್ತೇವೆ ಅದೇ ರೀತಿ ಸಸಿಯನ್ನು ನೆಟ್ಟು ಪೋಷಿಸಿ ಮರವಾಗಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಗುಡ್ಡಗಾಡು ಹಾಗೂ ಹೆಚ್ಚು ಗಿಡಮರಗಳು ಇರುವ ಸ್ಥಳದಲ್ಲಿ ಹೆಚ್ಚು ಮಳೆ ಆಗುತ್ತದೆ ಆದ್ದರಿಂದ ಎಲ್ಲರೂ ಸ್ವಚ್ಛ ಪರಿಸರಕ್ಕಾಗಿ ಗಿಡಮರಗಳನ್ನು ಬೆಳೆಸಬೇಕು ಎಂದು ಕರೆ ನೀಡಿದರು. ಸರ್ಕಾರಿ ಅಧೀನದಲ್ಲಿ ಇರುವ ಎಲ್ಲ ಕಚೇರಿ ಶಾಲಾಕಾಲೇಜುಗಳಲ್ಲಿ ಮತ್ತು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಬೇಕು ಅಂದಾಗ ಉತ್ತಮ ಪರಿಸರ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್’ಡಿ ಬ್ಯಾಂಕ್ ಉಪಾಧ್ಯಕ್ಷ ವೀರುಪಾಕ್ಷಪ್ಪ ಗಡ್ಡದ್, ನಿರ್ದೇಶಕರಾದ ಯಂಕಾರೆಡ್ಡಿ ತಿಪ್ಪಾರೆಡ್ಡಿ, ಅಶೋಕ ನಿಪ್ಪಾಣಿ, ಶಿವರಾಯ ಮಲ್ಲಶೆಟ್ಟಪ್ಪ, ರಾಜಶೇಖರ್ ಕೊಂಕನಳ್ಳಿ, ಜಾವೀದ್ ಪಟೇಲ್, ರಮೇಶ್ ಥಾವರು, ಅಕ್ತರ್ ಬೇಗಂ, ಮಹಾದೇವ ನಾಶಿ, ವ್ಯವಸ್ಥಾಪಕಿ ಕುಸುಮಾವತಿ ಖನ್ನಾ, ಸಿಬ್ಬಂದಿಗಳಾದ ಚಂದ್ರಕಾಂತ ರಾಠೋಡ, ಶಾರದಾಬಾಯಿ ಸ್ವಾಮಿ, ಸಂಗಣ್ಣ ಬಂಡಿ, ಸಂತೋಷ ರಾಠೋಡ, ರೈತ ಸಂಘದ ಅಧ್ಯಕ್ಷ ಶಾಮರಾಯ ಸಂಗಾವಿ ಸೇರಿದಂತೆ ಇತರರು ಇದ್ದರು.

