ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ | ಕೋಲಿ ಕಬ್ಬಲಿಗ ಪರ್ಯಾಯ ಪದಗಳು ಎಸ್ಟಿ ಸೇರ್ಪಡೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ: ಬೂದಿಹಾಳ್
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ರಾಜ್ಯದಲ್ಲಿ ಈಗಾಗಲೇ ಎಸ್.ಟಿ ಪಂಗಡದಲ್ಲಿರುವ ಟೋಕರೆ-ಕೋಲಿ, ಕೋಳಿಡೋರ, ಕೋಯಾ ಪದಗಳ ಬಿಟ್ಟು ಹೋದ (Left out Synonyms) ಪದಗಳಾದ ಕೋಲಿ-ಕಬ್ಬಲಿಗ, ಅಂಬಿಗ-ಬೆಸ್ತ-ಬಾರಿಕಿ ಅಧ್ಯಯನವನ್ನು ಶೀಘ್ರವಾಗಿ ಮುಗಿಸಿ, ಎಸ್.ಟಿ. ಸೇರ್ಪಡೆಗಾಗಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕೋಲಿ-ಕಬ್ಬಲಿಗ ಸಮನ್ವಯ ಸಮಿತಿ ಸಂಚಾಲಕ ಬಸವರಾಜ ಬೂದಿಹಾಳ್ ಅವರು ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ನಾವುಗಳು ಸುಮಾರು ವರ್ಷಗಳಿಂದ ಈ ಮೇಲೆ ತಿಳಿಸಿದ ವಿಷಯಕ್ಕೆ ಸಂಬಂಧಪಟ್ಟಂತೆ. ರಾಜ್ಯ ಸರ್ಕಾರಕ್ಕೆ ಈ ಕುರಿತು ಒತ್ತಡ ಹೇರುತ್ತಲೆ ಬಂದಿದ್ದು, ಕಳೆದ ಜೂ. 25 ರಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇವರಿಗೆ ಪತ್ರ ಬರೆದು, ರಾಜ್ಯದಲ್ಲಿ ಈಗಾಗಲೇ ಎಸ್.ಟಿ. ಪಂಗಡದಲ್ಲಿರುವ ಟೋಕರೆ-ಕೋಲಿ, ಕೋಳಿಡೋರ, ಕೋಯಾ ಪದಗಳ ಬಿಟ್ಟು ಹೋದ (Left out Synonyms) ಪದಗಳಾದ ಕೋಲಿ-ಕಬ್ಬಲಿಗ, ಅಂಬಿಗ-ಬೆಸ್ತ-ಬಾರಿಕಿ ಅಧ್ಯಯನವನ್ನು ಶೀಘ್ರವಾಗಿ ಮುಗಿಸಿ, ಎಸ್.ಟಿ. ಸೇರ್ಪಡೆಗಾಗಿ ಕೇಂದ್ರಕ್ಕೆ ಕಳುಹಿಸುವ ಕುರಿತು ವರದಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಅದಕ್ಕೆ ತಗಲುವ ಸುಮಾರು 5-10 ಲಕ್ಷ ರೂಪಾಯಿ ಬಿಡುಗಡೆಗೊಳಿಸಿ, ವರದಿಯ ಅಧ್ಯಯನವನ್ನು ಶೀಘ್ರವಾಗಿ ತರೆಯಿಸಿಕೊಂಡು ತಮ್ಮ ನೇತೃತ್ವದ ಸಚಿವ ಸಂಪುಟದಲ್ಲಿ ಸದರಿ ವರದಿಯನ್ನು ಪಾಸ್ ಮಾಡಿ, ಬೇಗನೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ. ಈ ಸಮಾಜದ ಪ್ರೀತಿಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಂತೋಷ ಎಚ್. ಕೋಲಿ, ಚಂದ್ರಕಾಂತ ಜಮಾದಾರ, ಪ್ರೇಮ್ ಕೋಲಿ ಸೇರಿದಂತೆ ಇತರರು ಇದ್ದರು.

