Oplus_0

ರಾವೂರ ಎಸ್ಸೆಸ್ಸೆಲ್ಸಿ, ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ  | ಉತ್ತಮ ಶಿಕ್ಷಕರಿಂದ ಮಾತ್ರ ಗುಣಮಟ್ಟದ ಶಿಕ್ಷಣ ಸಾಧ್ಯ: ಸಿದ್ದಲಿಂಗ ಶ್ರೀ

ನಾಗಾವಿ ಎಕ್ಸಪ್ರೆಸ್ 

ಶಹಾಬಾದ: ಶೈಕ್ಷಣಿಕ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಕರಿಂದ ಮಾತ್ರ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಎಂದು ಪೂಜ್ಯ  ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ರಾವೂರ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಹತ್ತನೇ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶಿಕ್ಷಕರು ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕು, ನಿರಂತರ ಅಧ್ಯಯನ ಶೀಲರಾಗಬೇಕು ಅಂದಾಗ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ. ಅನೇಕ ಬಡ ಪ್ರತಿಭಾವಂತ ಮಕ್ಕಳು ಪ್ರತಿಭಾ ಪುರಸ್ಕಾರದ ಹಣವನ್ನು ತಮ್ಮ ಭವಿಷ್ಯದ ಶಿಕ್ಷಣಕ್ಕಾಗಿ ಬಳಸಲು ಅನುಕೂಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಗುರಿ ಸಾಧನೆಗೆ ಸತತ ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಮೊಬೈಲ್ ಹಾವಳಿಯಿಂದ ದೂರವಿರಬೇಕು. ಯೋಗ, ವ್ಯಾಯಾಮ, ಸಾತ್ವಿಕ ಆಹಾರ, ಉತ್ತಮರ ಸಂಘ ಇವೆಲ್ಲವೂ ನಮ್ಮನ್ನು ಸಾಧನೆ ಕಡೆಗೆ ಕರೆದುಕೊಂಡು ಹೋಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿ. ಶ್ರೀಕಾಂತ್ ಯಾದಗಿರಿ ಇವರ ಸ್ಮರಣಾರ್ಥ ಸುರೇಖಾ ಯಾದಗಿರಿ ಹಾಗೂ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ 1999-2000 ಬ್ಯಾಚ್ ವತಿಯಿಂದ ಇವರು ಹತ್ತನೇ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಅಕ್ಷತಾ ಖಂಡೆಪ್ಪ 33,000, ಮೇಘನಾ ಶಿವಕುಮಾರ್ 20,000, ರಾಕೇಶ್ ಮಹಾದೇವಪ್ಪ 13,000.ಪ್ರೋತ್ಸಾಹ ಧನ ಹಾಗೂ ಪಿಯುಸಿ ಟಾಪರ್ ಗಳಿಗೆ ದಿ. ಈರಣ್ಣ ದಸ್ಮ ಅವರ ಸ್ಮರಣಾರ್ಥ ಮೂವತ್ತು ಸಾವಿರ ಪ್ರೋತ್ಸಾಹಧನವನ್ನು ಕ್ರಮವಾಗಿ ಸರಿತಾ ಹೊನ್ನಪ್ಪ -15000, ನಾಗರಾಜ ರಮೇಶ್ -10000, ಚಂದ್ರಕಲಾ ಶರಣಪ್ಪ -5000 ಪಡೆದರು. ಅದೇ ರೀತಿ ರವೀಂದ್ರಕುಮಾರ ಪಾಟೀಲ್ ಸ್ಮರಣಾರ್ಥ ತಾರಾ ಪಾಟೀಲ್ ಅವರು 7ನೇ ತರಗತಿಯ ಟಾಪರ್ ಅಕ್ಷತಾ ದೇವಿಂದ್ರ 10000, 8ನೇ ತರಗತಿ ಟಾಪರ್ ಅಂಜಲಿ ಗುರುಸಿದ್ದಯ್ಯ 10000, 9ನೇ ತರಗತಿ ಟಾಪರ್ ಅರ್ಶಿಯಾ ನಸಿರೋದ್ದಿನ್ -10000 ಧನ ಸಹಾಯ ಮಾಡಿದರು. ಒಟ್ಟಾರೆ 2 ಲಕ್ಷದ 26 ಸಾವಿರ ಮೊತ್ತದ ಹಣವನ್ನು ಪ್ರತಿಭಾ ಪುರಸ್ಕಾರ ರೂಪದಲ್ಲಿ ನೀಡಲಾಯಿತು.

ವೇದಿಕೆ ಮೇಲೆ ಸಂಸ್ಥೆಯ ಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ, ಪ್ರಾಚಾರ್ಯ ಕೆ. ಐ. ಬಡಿಗೇರ್, ಪ್ರತಿಭಾ ಪುರಸ್ಕಾರದ ದಾಸೋಹಿಗಳಾದ ಸುರೇಖಾ ಯಾದಗಿರಿ, ತಾರಾ ಪಾಟೀಲ್ ಇದ್ದರು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿದರು, ಈರಣ್ಣ ಹಳ್ಳಿ ಪ್ರಾರ್ಥಿಸಿದರು, ಭುವನೇಶ್ವರಿ ಎಂ. ಸ್ವಾಗತಿಸಿದರು, ಮುಖ್ಯಗುರು ವಿದ್ಯಾಧರ ಖಂಡಳ ವಂದಿಸಿದರು. ಹಿರಿಯ ವಿದ್ಯಾರ್ಥಿಗಳಾದ ಸುಶೀಲ ಸುಲಹಳ್ಳಿ, ಸೂರ್ಯಕಾoತ ರದ್ದೇವಡಗಿ, ಹನಮಂತ ಪೂಜಾರಿ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!